ಬಿಜೆಪಿ ಸುಳ್ಳಿನ ಕಂತೆ ಹೇಳಿ ದೇಶದ ವ್ಯವಸ್ಥೆಯನ್ನು ಹದಗೆಡಿಸಿದೆ. ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿಯಂದ ಯಾವುದೇ ಪ್ರಯೋಜನ ಆಗಲಿಲ್ಲ. ಎಲ್‌ಐಸಿ, ಎಸ್‌ಬಿಐ ಹಣವನ್ನು ಅದಾನಿ ಒಡೆತನದ ಕಂಪನಿಗಳಲ್ಲಿ ವಿನಿಯೋಗಿಸಿ ಜನರ ಹಣವನ್ನು ದುರುಪಯೋಗ ಮಾಡಿದೆ. ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚೌವ್ಹಾಣ್ ವಾಗ್ದಾಳಿ ನಡೆಸಿದರು.
ಬೆಳಗಾವಿ (ಮೇ.6) : ಬಿಜೆಪಿ ಸುಳ್ಳಿನ ಕಂತೆ ಹೇಳಿ ದೇಶದ ವ್ಯವಸ್ಥೆಯನ್ನು ಹದಗೆಡಿಸಿದೆ. ಮೋದಿ ಸರ್ಕಾರ ಜಾರಿಗೆ ತಂದ ಜಿಎಸ್‌ಟಿಯಂದ ಯಾವುದೇ ಪ್ರಯೋಜನ ಆಗಲಿಲ್ಲ. ಎಲ್‌ಐಸಿ, ಎಸ್‌ಬಿಐ ಹಣವನ್ನು ಅದಾನಿ ಒಡೆತನದ ಕಂಪನಿಗಳಲ್ಲಿ ವಿನಿಯೋಗಿಸಿ ಜನರ ಹಣವನ್ನು ದುರುಪಯೋಗ ಮಾಡಿದೆ. ಮುಸ್ಲಿಂರ ಶೇ.4 ಮೀಸಲಾತಿಯನ್ನು ಕಡಿಮೆ ಮಾಡಿ ಒಕ್ಕಲಿಗ, ಲಿಂಗಾಯತರಿಗೆ ನೀಡಿದೆ. ಮರಾಠರಿಗೆ ಯಾವುದೇ ಮೀಸಲಾತಿ ನೀಡಿಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ ಚೌವ್ಹಾಣ್ ವಾಗ್ದಾಳಿ ನಡೆಸಿದರು.
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ (Belgum rural assembly constituency) ಬೆನಕನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷ(Congress convenction)ದ ವಿರಾಟ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಫುಲ್ವಾಮಾ ದಾಳಿ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಸೈನಿಕರ ರಕ್ಷಣೆಗಾಗಿ ವಿಮಾನ ನೀಡದ್ದರಿಂದ ಅನೇಕ ಯೋಧರು ಹುತಾತ್ಮರಾಗಬೇಕಾಯಿತು ಎಂದು ದೂರಿದರು.
undefined
ಬೆಳಗಾವಿ: ಇಂದು ಲಕ್ಷ್ಮೀ ಹೆಬ್ಬಾಳಕರ ಪರ ನಟ ಶಿವರಾಜಕುಮಾರ ಪ್ರಚಾರ
ಕರ್ನಾಟಕದ ಮತದಾರರು ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರ್ಕಾರದ ಆಡಳಿತದಿಂದ ಬೇಸತ್ತಿದ್ದಾರೆ. ಡಬಲ… ಇಂಜಿನ ಸರ್ಕಾರ ಸುಳ್ಳು ಭರವಸೆ ನೀಡುತ್ತಿದೆ. ಪ್ರಧಾನಿ ಮೋದಿ ಹಿಂದಿನ ಚುನಾವಣೆಯಲ್ಲಿ ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ. 15 ಲಕ್ಷ ಹಾಕುವುದಾಗಿ ಹೇಳಿದ್ದರು. ಪ್ರತಿ ವರ್ಷ 2 ಕೋಟಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ ಇವ್ಯಾವುವೂ ಈಡೇರಿಲ್ಲ ಎಂದು ದೂರಿದರು.
ಲಕ್ಷ್ಮೇ ಹೆಬ್ಬಾಳಕರ (Laxmi hebbalkar) ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ವಂಚಿತ ಗ್ರಾಮೀಣ ಕ್ಷೇತ್ರಕ್ಕೆ ಲಕ್ಕೀ ಶಾಸಕಿ ಸಿಕ್ಕಿದ್ದು ಇಲ್ಲಿಯ ಮತದಾರರ ಪುಣ್ಯ. ಕಾಂಗ್ರೆಸ ಪಕ್ಷ ರಾಜ್ಯದ ಮತದಾರರಿಗಾಗಿ ಜನಪರ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ನೀಡಿದ ಘೋಷಣೆಗಳನ್ನು ಒಂದು ವರ್ಷದ ಒಳಗೆ ಪೂರ್ಣಗೊಳಿಸಲಿದೆ. ಜೊತೆಗೆ ಕಾಂಗ್ರೆಸ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಂದಿನ ವರ್ಷದ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಹಾಡಲಿದೆ ಎಂದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ ಅಭ್ಯರ್ಥಿ ಲಕ್ಷ್ಮೇ ಹೆಬ್ಬಾಳಕರ ಮಾತನಾಡಿ, ತಾವು 2018ರ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಭವಿಷ್ಯದಲ್ಲಿ ಈ ಕ್ಷೇತ್ರದ ಔದ್ಯೋಗಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ಹೇಳಿದರು. ಚುನಾವಣಾ ಪ್ರಚಾರಕ್ಕಾಗಿ ಮಹಾರಾಷ್ಟ್ರದಿಂದ ಬಂದಿರುವ ಬಿಜೆಪಿಯ ಚಿತ್ರಾ ವಾಘ ಅವರಿಗೆ ಕ್ಷೇತ್ರದಲ್ಲಿ ಜನರನ್ನು ಸೇರಿಸಲು ಸಾಧ್ಯವಾಗುತ್ತಿಲ್ಲ. ಓರ್ವ ಮಹಿಳೆಯಾಗಿ ತಮ್ಮ ಬಗ್ಗೆ ವಿಚಿತ್ರವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ಅವರ ಉದ್ದೇಶವನ್ನು ಕ್ಷೇತದ ಜನತೆ ಅರಿತಿದ್ದಾರೆ. ಮೇ.8ರ ಬಳಿಕ ವಿಚಿತ್ರ ಮನೋಭಾವದ ಚಿತ್ರಾ ಅವರ ಮೊಬೈಲ… ಸ್ವಿಚ್ ಆಫ್ ಆಗಲಿದೆ. ಕ್ಷೇತ್ರದ ಎಂಇಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳು ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರದಲ್ಲಿ ಆಕ್ಟಿವ್ ಆಗಿದ್ದು, ಪ್ರತಿ ವಿಶೇಷ ಸಂದರ್ಭಗಳಲ್ಲಿ ಬ್ಯಾನರ್ ಅಳವಡಿಸುವ ಕೆಲಸ ಮಾಡಿ ಪೋಸ್ಟರ್ ಬಾಯ್ಸ… ಎಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಮೇ.10ರ ಬಳಿಕ ಅವರನ್ನು ಮನೆಗೆ ಕಳಿಸುವ ಕೆಲಸ ಕ್ಷೇತ್ರದ ಮತದಾರರಿಂದ ಆಗಬೇಕು ಎಂದರು.
ಮಹಾರಾಷ್ಟ್ರದ ಶಾಸಕರಾದ ಅಮರ ರಾಜೂರಕರ ,ಬಂಟಿ ಪಾಟೀಲ,ಪಕ್ಷದ ಯುವ ಮುಖಂಡ ಮೃಣಾಲ… ಹೆಬ್ಬಾಳಕರ, ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಶಾಸಕ ವಿಶ್ವಜೀತ ಕದಮ…, ಮುಖಂಡರಾದ ಬಂಟಿ ಶೆಳಕೆ, ಸಿ.ಸಿ ಪಾಟೀಲ, ಗೋಪಾಳರಾವ ಪಾಟೀಲ, ಬಸವರಾಜ ಮ್ಯಾಗೋಟಿ, ಶಂಕರಗೌಡ ಪಾಟೀಲ, ಸುರೇಶ ಇಟಗಿ, ಬಾಳು ದೇಸೂರಕರ, ಮಲ್ಲೇಶ ಚೌಗುಲೆ, ಮನೋಹರ ಬೆಳಗಾಂವಕರ ಮೊದಲಾದವರು ಉಪಸ್ಥಿತರಿದ್ದರು.
ಭ್ರಷ್ಟಾಚಾರ ಬಿಟ್ಟರೆ ಬೇರೇನೂ ಸಾಧನೆ ಮಾಡದ ಬಿಜೆಪಿ: ಲಕ್ಷ್ಮೀ ಹೆಬ್ಬಾಳಕರ
ವಿರೋಧ ಪಕ್ಷದಲ್ಲಿದ್ದರೂ ಸರ್ಕಾರದಿಂದ ಸಾಕಷ್ಟುಅನುದಾನವನ್ನು ಮಂಜೂರು ಮಾಡಿಸಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡ ಶಾಸಕಿ ಲಕ್ಷ್ಮೇ ಹೆಬ್ಬಾಳಕರ ಅವರ ಕಾರ್ಯವೈಖರಿ ಅಭಿನಂದನೀಯವಾಗಿದೆ. ಅವರು ಕ್ಷೇತ್ರದಲ್ಲಿ ಝಾನ್ಸಿ ರಾಣಿಯಂತೆ ತನ್ನದೇ ಆದ ಸೈನ್ಯವನ್ನು ಕಟ್ಟಿಕೊಂಡಿದ್ದು, ಲಕ್ಷ್ಮೇಯ ಸೈನ್ಯ ಗಮನಿಸಿದರೆ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ ಎನಿಸುತ್ತಿದೆ.
ಅಶೋಕ ಚೌವ್ಹಾಣ್, ಮಹಾರಾಷ್ಟ್ರದ ಮಾಜಿ ಸಿಎಂ.