Karnataka election 2023: ರಾಜಕೀಯ ಚಟುವಟಿಕೆ ಎಫೆಕ್ಟ್ : ಮಾಂಸಾಹಾರ ತುಟ್ಟಿ!

By Kannadaprabha News  |  First Published May 6, 2023, 8:08 AM IST

ರಾಜ್ಯ ವಿಧಾನಸಭೆಗೆ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಕೂಡ ಬಲು ಜೋರಾಗಿದೆ. ತಮ್ಮ ಕಾರ್ಯಕರ್ತರನ್ನು ಸಂತೃಪ್ತಿ ಪಡಿಸಲು ಡಾಬಾಗಳಲ್ಲಿ ತಮ್ಮ ಅಕೌಂಟ್‌ಗಳನ್ನು ತೆರೆದಿದ್ದು, ಆ ಅಕೌಂಟ್‌ಗಳಲ್ಲೇ ಬೆಂಬಲಿಗರು, ಕಾರ್ಯಕರ್ತರು ಊಟ ಸವಿಯುತ್ತಿದ್ದಾರೆ. ಹೀಗಾಗಿ ಮಾಂಸಾಹಾರಿಗಳ ಬೆಲೆಯಲ್ಲಿಯೂ ದಿಢೀರನೆ ಏರಿಕೆ ಕಂಡುಬಂದಿದೆ.


ವಿಶೇಷ ವರದಿ

ಬೆಳಗಾವಿ (ಮೇ.6) : ರಾಜ್ಯ ವಿಧಾನಸಭೆಗೆ ಚುನಾವಣೆ ದಿನ ಹತ್ತಿರವಾಗುತ್ತಿದ್ದಂತೆ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಕೂಡ ಬಲು ಜೋರಾಗಿದೆ. ಜತೆಗೆ ಅಭ್ಯರ್ಥಿಗಳು ತಮ್ಮ ಬೆಂಬಲಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಈ ಮಧ್ಯೆ ತಮ್ಮ ಕಾರ್ಯಕರ್ತರನ್ನು ಸಂತೃಪ್ತಿ ಪಡಿಸಲು ನಾನಾ ವಾಮಮಾರ್ಗಗಳನ್ನು ಕೂಡ ಕಂಡುಕೊಂಡಿದ್ದಾರೆ. ಅದರ ಭಾಗವಾಗಿ ಹೋಟೆಲ್‌, ಡಾಬಾಗಳಲ್ಲಿ ತಮ್ಮ ಅಕೌಂಟ್‌ಗಳನ್ನು ತೆರೆದಿದ್ದು, ಆ ಅಕೌಂಟ್‌ಗಳಲ್ಲೇ ಬೆಂಬಲಿಗರು, ಕಾರ್ಯಕರ್ತರು ಊಟ ಸವಿಯುತ್ತಿದ್ದಾರೆ. ಹೀಗಾಗಿ ಮಾಂಸಾಹಾರಿಗಳ ಬೆಲೆಯಲ್ಲಿಯೂ ದಿಢೀರನೆ ಏರಿಕೆ ಕಂಡುಬಂದಿದೆ.

Tap to resize

Latest Videos

ಸಹಜವಾಗಿ ಡಾಬಾಗಳಲ್ಲಿ ಬಾಡೂಟ ಹೆಚ್ಚಾಗಿದ್ದು, ನಾನಾ ರಾಜಕೀಯ ಪಕ್ಷಗಳ ಕಾರ್ಯಕರ್ತರ ದಂಡೆ ಹೆಚ್ಚಾಗಿ ಕಾಣುತ್ತಿದೆ. ಇದರಿಂದಾಗಿ ಚುನಾವಣಾ ಹೊಸ್ತಿಲಲ್ಲಿ ಹೆಚ್ಚಿದ ಬಾಡೂಟದಿಂದಾಗಿ ಕುರಿ, ಮೇಕೆಯ ಬೆಲೆ ಕೂಡ ಹೆಚ್ಚಳವಾಗಿದೆ.

ವೆಜ್ ಬದಲು ಸರ್ವ್ ಮಾಡಿದ್ದು ಚಿಕನ್ ರೋಲ್‌, ಹೋಟೆಲ್ ವಿರುದ್ಧ 1ಕೋಟಿ ಪರಿಹಾರ ಕೇಳಿದ ವ್ಯಕ್ತಿ!

ಕಳೆದ ಇಪ್ಪತ್ತು ದಿನಗಳಿಂದ ವಿವಿಧ ರಾಜಕೀಯ ಪಕ್ಷದ ಅಭ್ಯರ್ಥಿಗಳು ಪ್ರಚಾರದಲ್ಲಿದ್ದಾರೆ. ಅಭ್ಯರ್ಥಿಗಳ ಪರವಾಗಿ ಅವರ ಬೆಂಬಲಿಗರು, ಬಿರುಸಿನಿಂದ ಪ್ರಚಾರ ಕಾರ್ಯವನ್ನು ನಡೆಸುತ್ತಿದ್ದಾರೆ. ಹೀಗಾಗಿ ಅವರಿಗೆ ಹೊಟ್ಟೆತುಂಬ ಊಟ, ಕೈತುಂಬ ದಿನಗೂಲಿಯನ್ನು ಅಭ್ಯರ್ಥಿಗಳು ನೀಡಬೇಕಿದೆ. ಈ ಹಿನ್ನೆಲೆಯಲ್ಲಿ ರಸ್ತೆ ಪಕ್ಕದಲ್ಲಿ ಗಣನೀಯವಾಗಿ ತಲೆ ಎತ್ತಿರುವ ಡಾಬಾಗಳಲ್ಲಿ, ನಗರ, ಪಟ್ಟಣ, ಹಳ್ಳಿಗಳಲ್ಲಿರುವ ಹೋಟೆಲ್‌, ಕ್ಯಾಂಟೀನ್‌, ಗೂಡಂಗಡಿಗಳಲ್ಲಿ ವ್ಯಾಪಾರ ವಹಿವಾಟಿನಲ್ಲಿ ನಾಲ್ಕುಪಟ್ಟು ಹೆಚ್ಚಳವಾಗಿದೆ. ಅಲ್ಲದೇ ಪ್ರತಿನಿತ್ಯ ಪ್ರಚಾರ ಕಾರ್ಯ ಮಾಡುವ ಬೆಂಬಲಿಗರು ಹಾಗೂ ಕಾರ್ಯಕರ್ತರ ಊಟ, ಉಪಹಾರ ಡಾಬಾ, ಹೊಟೇಲ್‌ಗಳಲ್ಲಿ ಏರ್ಪಡಿಸಲಾಗುತ್ತಿದೆ. ಮಧ್ಯಾಹ್ನ ಮತ್ತು ರಾತ್ರಿಯ ಊಟ ಡಾಬಾಗಳಲ್ಲಿ ಮಾಡಲಾಗುತ್ತಿದೆ. ಇದರಿಂದಾಗಿ ಮಾಂಸಾಹಾರ ಊಟದ ಬೆಲೆಯಲ್ಲಿ ಹೆಚ್ಚಳವಾಗಿದೆ.

ಕುರಿ ಬೆಲೆ ₹12 ಸಾವಿರ:

ಕಳೆದ ಒಂದು ತಿಂಗಳ ಹಿಂದೆ ಗಾತ್ರಕ್ಕೆ ತಕ್ಕಂತೆ ಪ್ರತಿ ಕುರಿಗೆ . 5 ಸಾವಿರದಿಂದ . 8 ಸಾವಿರ ಬೆಲೆ ಇತ್ತು. ಆದರೆ ಈಗ .12 ಸಾವಿರದವರೆಗೂ ಹೆಚ್ಚಳವಾಗಿದೆ. ಅದರಂತೆ ಮೇಕೆ ಗಾತ್ರದ ತಕ್ಕಂತೆ .3 ಸಾವಿರದಿಂದ .5 ಸಾವಿರದವರೆಗೆ ಮಾರಾಟವಾಗುತ್ತಿದ್ದವು. ಈಗ .5 ಸಾವಿರದಿಂದ .8 ಸಾವಿರದವರೆಗೂ ಮಾರಾಟವಾಗುತ್ತಿವೆ. ಜತೆಗೆ ಕೋಳಿ .300 ರಿಂದ .400ವರೆಗೆ ಇದ್ದಿದ್ದು, ಇದೀಗ .500ರ ಗಡಿ ದಾಟಿದೆ. ಅಲ್ಲದೇ ಚಿಕನ್‌ ಪ್ರತಿ ಕೆಜಿಗೆ .180 ರಿಂದ .190 ವರೆಗೆ ಇತ್ತು, ಇದೀಗ . 200 ರಿಂದ . 220ಕ್ಕೆ ಬಂದು ತಲುಪಿದೆ. ಮಟನ್‌ ಕೆಜಿಗೆ . 300 ರಿಂದ . 380ಕ್ಕೆ ತಲುಪಿದೆ. ಅಲ್ಲದೇ ಸಗಟು ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆ. 3.50 ಪೈಸೆಯಿಂದ . 4ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಮೊಟ್ಟೆದರದಲ್ಲಿ.ಊ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಸದ್ಯ ಪ್ರತಿ ಮೊಟ್ಟೆಸಗಟು ಮಾರುಕಟ್ಟೆಯಲ್ಲಿ .4.35 ಪೈಸೆಯಿಂದ . 4.80 ಪೈಸೆ ವರೆಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಚಿಲ್ಲರೆ ಮಾರುಕಟ್ಟೆಹಾಗೂ ಅಂಗಡಿ ಮುಂಗಟ್ಟುಗಳಲ್ಲಿ ಪ್ರತಿ ಮೊಟ್ಟೆಗೆ .7ಗೆ ಮಾರಾಟ ಮಾಡಲಾಗುತ್ತಿದೆ.

ಈ ಇಡೀ ನಗರದಲ್ಲಿ ಮಾಂಸಾಹಾರಕ್ಕಿದೆ ನಿಷೇಧ, ಜಗತ್ತಿನ ಏಕೈಕ ಸಸ್ಯಾಹಾರ ನಗರ ಎಲ್ಲಿದೆ ಬಲ್ಲಿರಾ?

ಇನ್ನೂ ಕೆಲವು ಪಕ್ಷದ ಅಭ್ಯರ್ಥಿಗಳು ಗ್ರಾಮ ಮಟ್ಟದಲ್ಲಿಯೇ ತಮ್ಮ ಬೆಂಬಲಿಗರಿಂದ ಪ್ರತಿ ದಿನ ಬಾಡೂಟ ಹಾಗೂ ಮದ್ಯದ ವ್ಯವಸ್ಥೆಯನ್ನು ಮಾಡಿಸುವ ಮೂಲಕ ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ. ವಿಧಾನಸಭೆ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ನಿತ್ಯ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಪಕ್ಷದ ಬಾವುಟ ಹಿಡಿದು ಹೊರಬಿದ್ದರೆ ಮಧ್ಯಾಹ್ನದ ಊಟ ಡಾಬಾಗಳಲ್ಲಿ ಆದರೆ, ರಾತ್ರಿಯ ಊಟ ಗ್ರಾಮಗಳಲ್ಲಿ ಹಾಕಲಾಗುತ್ತಿದೆ. ಇನ್ನೂ ಕೆಲವು ಕಡೆಗಳಲ್ಲಿ ಬೆಳಕಾಗುವುದಷ್ಟೇ ತಡ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟ ಡಾಬಾ ಮತ್ತು ಹೊಟೇಲ್‌ಗಳಲ್ಲಿ ವ್ಯವಸ್ಥೆ ಮಾಡುತ್ತಿದ್ದಾರೆ.

click me!