Karnataka election 2023: ಕಷ್ಟದ 115 ಕ್ಷೇತ್ರಗಳ ಗೆಲ್ಲಲು ಬಿಜೆಪಿ 50 ಸ್ಪೆಷಲಿಸ್ಟ್‌ಗಳ’ ಟೀಂ ರೆಡಿ!

By Kannadaprabha News  |  First Published Apr 3, 2023, 8:39 AM IST

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಎ,ಬಿ, ಸಿ ಎಂದು ಪಕ್ಷ ವಿಂಗಡಿಸಿದೆ. ಈ ಪೈಕಿ ಎ ವಿಭಾಗದ ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು ಎಂದು ಪಕ್ಷ ಅಂದಾಜಿಸಿದೆ. ಆದರೆ ಬಿ ವಲಯದಲ್ಲಿ 115 ಕ್ಷೇತ್ರಗಳಿದ್ದು, ಅಲ್ಲಿ ಗೆಲುವು ಕಷ್ಟ, ಆದರೆ ಸೂಕ್ತ ಪ್ರಯತ್ನ ಪಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ


ನವದೆಹಲಿ (ಏ.3): ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಸ್ಥಾನಗಳನ್ನು ಈ ಬಾರಿಯೂ ಉಳಿಸಿಕೊಳ್ಳುವ ವಿಶ್ವಾಸದಲ್ಲಿರುವ ಬಿಜೆಪಿ, ಈ ಬಾರಿ ಕಷ್ಟವಾದರೂ ಪ್ರಯತ್ನ ಪಟ್ಟರೆ ಗೆಲ್ಲಬಹುದು ಎನ್ನುವ 115 ಸ್ಥಾನಗಳನ್ನು ಗುರುತಿಸಿದ್ದು ಅವುಗಳ ವಶಕ್ಕೆ 50 ‘ಚುನಾವಣಾ ತಜ್ಞರ’ ತಂಡ ರಚಿಸಿದೆ. ದೇಶದ ವಿವಿಧ ರಾಜ್ಯಗಳಿಂದ ಆಯ್ದ 50 ಸಂಸದರು, ಶಾಸಕರು, ನಾಯಕರು ಈ ಹಿಂದೆ ವಿವಿಧ ಚುನಾವಣೆಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದು, ಅವರ ಅನುಭವ ಬಳಸಿಕೊಂಡು ಕರ್ನಾಟಕವನ್ನು ಮತ್ತೆ ತನ್ನಲ್ಲೇ ಉಳಿಸಿಕೊಳ್ಳುವ ಯೋಜನೆಯನ್ನು ಪಕ್ಷ ರೂಪಿಸಿದೆ.

ಇಂಥದ್ದೊಂದು ತಂತ್ರ ನಿಪುಣರನ್ನು ಮೊದಲೇ ಗುರುತಿಸಿದ್ದ ಪಕ್ಷದ ಚಿಂತಕರ ಚಾವಡಿ, ಇತ್ತೀಚೆಗೆ ಚುನಾವಣೆ ದಿನಾಂಕ ಘೋಷಣೆಯಾಗುತ್ತಲೇ ಅವರೊಂದಿಗೆ ಸಭೆ ನಡೆಸಿದೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನಾ) ಬಿ.ಎಲ್‌.ಸಂತೋಷ್‌ ಮತ್ತು ಪಕ್ಷದ ಹಿರಿಯ ನಾಯಕ ಧರ್ಮೇಂದ್ರ ಪ್ರಧಾನ್‌ ಈ 50 ಜನರೊಂದಿಗೆ ವಚ್ರ್ಯುವಲ್‌ ಆಗಿ ಸಭೆ ನಡೆಸಿ ಪಕ್ಷದ ಚುನಾವಣಾ ರಣತಂತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Tap to resize

Latest Videos

Karnataka election 2023: ಬಿಜೆಪಿ ಅಭ್ಯರ್ಥಿ ಆಯ್ಕೆಗೆ 2ನೇ ಹಂತದ ಚರ್ಚೆ ಅಂತ್ಯ

ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುವ ಸಾಮರ್ಥ್ಯದ ಆಧಾರದ ಮೇಲೆ ಎ,ಬಿ, ಸಿ ಎಂದು ಪಕ್ಷ ವಿಂಗಡಿಸಿದೆ. ಈ ಪೈಕಿ ಎ ವಿಭಾಗದ ಕ್ಷೇತ್ರಗಳನ್ನು ಸುಲಭವಾಗಿ ಗೆಲ್ಲಬಹುದು ಎಂದು ಪಕ್ಷ ಅಂದಾಜಿಸಿದೆ. ಆದರೆ ಬಿ ವಲಯದಲ್ಲಿ 115 ಕ್ಷೇತ್ರಗಳಿದ್ದು, ಅಲ್ಲಿ ಗೆಲುವು ಕಷ್ಟ, ಆದರೆ ಸೂಕ್ತ ಪ್ರಯತ್ನ ಪಟ್ಟರೆ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ. ಹೀಗಾಗಿ ಇಂಥ 115 ಕ್ಷೇತ್ರಗಳಿಗೆ 50 ಜನರ ತಂಡ ನಿಯೋಜಿಸಲಾಗುತ್ತಿದೆ. ಇವರಿಗೆಲ್ಲಾ ತಲಾ 2-3 ಕ್ಷೇತ್ರಗಳ ಹೊಣೆ ವಹಿಸಿ, ಅಲ್ಲಿ ಗೆಲ್ಲಲು ಬೇಕಾದ ಎಲ್ಲಾ ಕ್ರಮಗಳನ್ನು ಜಾರಿಗೊಳಿಸುವಂತೆ ಪಕ್ಷದ ನಾಯಕರು ಸೂಚಿಸಿದ್ದಾರೆ ಎನ್ನಲಾಗಿದೆ.

ಏನು ಸೂಚನೆ?:

ಪ್ರಧಾನಿ ಮೋದಿ ಮೇಲೆ ವಿಶ್ವಾಸವಿಡಿ. ಡಬಲ್‌ ಎಂಜಿನ್‌ ಸರ್ಕಾರಗಳು ಇದ್ದರೆ ಅಭಿವೃದ್ಧಿ ಸಾಧ್ಯ ಎಂಬ ಅಂಶಗಳನ್ನು ಜನರಿಗೆ ಸೂಕ್ತ ರೀತಿಯಲ್ಲಿ ಮನದಟ್ಟು ಮಾಡಿಕೊಡಿ. ಗೋವಾ ಮತ್ತು ಉತ್ತರಾಖಂಡ ಎರಡೂ ಕಡೆ ಈ ತಂತ್ರ ಫಲಿಸದೆ ಎಂಬ ಸಂದೇಶವನ್ನು 50 ಜನರ ತಂಡಕ್ಕೆ ರವಾನಿಸಲಾಗಿದೆ.

Karnataka election 2023: 100 ಅಭ್ಯರ್ಥಿಗಳ ಆಯ್ಕೆಗೆ ನಾಳೆ ಕಾಂಗ್ರೆಸ್‌ ಸಿಇಸಿ ಸಭೆ: ಡಿಕೆಶಿ

ತಂಡದಲ್ಲಿ ಯಾರಾರ‍ಯರು?:

ಕೇಂದ್ರ ಸಚಿವ ಪಂಕಜ್‌ ಚೌಧರಿ, ಬಿಹಾರ ಶಾಸಕ ಸಂಜೀವ್‌ ಚೌರಾಸಿಯಾ, ಯುಪಿ ಶಾಸಕ ಸತೀಶ್‌ ದ್ವಿವೇದಿ, ಆಂಧ್ರದ ಸುಧಾಕರ್‌ ರೆಡ್ಡಿ, ಸಂಸದರಾದ ರಮೇಶ್‌ ಬಿಧೂರಿ, ನಿಶಿಕಾಂತ್‌ ದುಬೆ, ಸಂಜಯ್‌ ಭಾಟಿಯಾದ ಮೊದಲಾದವರು ಇದ್ದಾರೆ.

click me!