
ನವದೆಹಲಿ: ವರ್ಷಾಂತ್ಯಕ್ಕೆ ನಡೆಯಲಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆಗಳಿಗೆ ಈಗಿನಿಂದಲೇ ಬಿಜೆಪಿ ತಯಾರಿ ಆರಂಭಿಸಿದೆ. ಪಂಚರಾಜ್ಯಗಳ ಪೈಕಿ ಬುಧವಾರ ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢದ ಚುನಾವಣಾ ಸಿದ್ಧತೆ ಬಗ್ಗೆ ಬಿಜೆಪಿ ಚರ್ಚೆ ನಡೆಸಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಸಿದ್ಧತೆಗಳನ್ನು ಪರಿಶೀಲಿಸಿತು. ಈ ವೇಳೆ ಎರಡೂ ರಾಜ್ಯ ಘಟಕಗಳು ತಮ್ಮ ಸಿದ್ಧತೆಯ ವಿವರ ನೀಡಿದವು.
ಈ ವೇಳೆ, ಒಟ್ಟು ಕ್ಷೇತ್ರಗಳನ್ನು 4 ವಿಭಾಗಗಳಾಗಿ ವಿಂಗಡಿಸಿ ಅದಕ್ಕೆ ಅನುಗುಣವಾಗಿ ರಣನೀತಿ ಹೆಣೆಯುವ ಚರ್ಚೆ ನಡೆದಿದೆ. ‘ಎ’ ವಿಭಾಗದಲ್ಲಿ ಚುನಾವಣೆಯಲ್ಲಿ ಬಿಜೆಪಿ ಸತತ ಗೆಲ್ಲುತ್ತಿರುವ ಕ್ಷೇತ್ರಗಳು, ‘ಬಿ’ ವಿಭಾಗದಲ್ಲಿ ಮಿಶ್ರ ಫಲಿತಾಂಶ ಇರುವ ಕ್ಷೇತ್ರಗಳು, ‘ಸಿ’ ಬಿಜೆಪಿ ತುಂಬ ದುರ್ಬಲ ಹಾಗೂ ‘ಡಿ’ ವಿಭಾಗದಲ್ಲಿ ಈತನಕ ಬಿಜೆಪಿ ಗೆಲ್ಲದ ಕ್ಷೇತ್ರಗಳು ಬರುತ್ತವೆ. ಇದೇ ವೇಳೆ, ಶೇ.50ರಷ್ಟು ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಚರ್ಚೆ ನಡೆದಿದೆ. ಸಾಮಾನ್ಯವಾಗಿ ಸಾಮಾನ್ಯವಾಗಿ ಚುನಾವಣಾ ದಿನಾಂಕಗಳನ್ನು ಘೋಷಿಸಿದ ನಂತರ ಚುನಾವಣಾ ಸಮಿತಿ ಸಭೆ ಸೇರುತ್ತದೆ. ಆದರೆ ಇಷ್ಟುಬೇಗ ಸಭೆ ನಡೆಸಿರುವುದು 5 ರಾಜ್ಯಗಳ ಚುನಾವಣೆಗಳ ಮಹತ್ವ ಸಾರುತ್ತದೆ. ಏಕೆಂದರೆ ಇವುಗಳ ಫಲಿತಾಂಶ 2024ರ ಲೋಕಸಭೆ ಚುನಾವಣೆಗೆ ಮಾನದಂಡ ಆಗುವ ಸಾಧ್ಯತೆ ಇದೆ.
ಲೋಕಸಭೆ ಚುನಾವಣೆ 2024: ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಆರಂಭ, ಮತ್ತೆ ಕಮಲ ಅರಳಿಸಲು ಪ್ಲಾನ್..!
ಛತ್ತೀಸ್‌ಗಢ, ಮಧ್ಯಪ್ರದೇಶ ಅಲ್ಲದೆ, ರಾಜಸ್ಥಾನ (Rajasthan), ತೆಲಂಗಾಣ (Telangana) ಮತ್ತು ಮಿಜೋರಂ (Mizoram) ಇವು ಚುನಾವಣಾ ರಾಜ್ಯಗಳಾಗಿದ್ದು, ನವೆಂಬರ್-ಡಿಸೆಂಬರ್‌ನಲ್ಲಿ ಚುನಾವಣೆ ನಡೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಮೋದಿಯವರಲ್ಲದೆ, ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅಮಿತ್ ಶಾ, ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಛತ್ತೀಸ್‌ಗಢದ ಮಾಜಿ ಸಿಎಂ ರಮಣ ಸಿಂಗ್ ಉಪಸ್ಥಿತರಿದ್ದರು.
ತಲಪಾಡಿ: ಬಿಜೆಪಿ-ಎಸ್ಡಿಪಿಐ ಒಪ್ಪಂದ: ಎಚ್ಚೆತ್ತ ಬಿಜೆಪಿ ನಾಯಕರಿಂದ ಪಕ್ಷ ವಿರೋಧಿಗಳಿಗೆ ಗೇಟ್ ಪಾಸ್!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.