MLC Election Result 5 ಹೆಚ್ಚು ಸ್ಥಾನ ಗೆದ್ದ ಬಿಜೆಪಿಯಲ್ಲಿ ಹೊಸ ಚೈತನ್ಯ, ಜೆಡಿಎಸ್ ನಿರ್ಲಕ್ಷ್ಯ ಇಲ್ಲ ಎಂದ ಬಿಎಸ್‌ವೈ!

By Suvarna News  |  First Published Dec 15, 2021, 3:41 AM IST
  • ಜಿಪಂ, ತಾಪಂ ಚುನಾವಣೆ ಎದುರಿಸುವ ಉತ್ಸಾಹ 
  • ಹೆಚ್ಚು ಗೆದ್ದಿದ್ದೇವೆ ಎಂದು ಜೆಡಿಎಸ್‌ ನಿರ್ಲಕ್ಷಿಸಲ್ಲ: ಬಿಎಸ್‌ವೈ, 
  • ಜಾರಕಿಹೊಳಿ ನಡೆ ಬಗ್ಗೆ ಪಕ್ಷದೊಳಗೆ ಆಕ್ರೋಶ

ಬೆಂಗಳೂರು(ಡಿ.15):  ವಿಧಾನಪರಿಷತ್‌ ಚುನಾವಣೆಯ ಫಲಿತಾಂಶ(Karnatak MCL Election Result) ಹೊರಬಿದ್ದ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ(BJP) ಪಾಳೆಯದಲ್ಲಿ ಉತ್ಸಾಹ ಕಂಡು ಬಂದಿದೆ. ಕಳೆದ ಚುನಾವಣೆಯಲ್ಲಿ ಆರು ಸ್ಥಾನ ಗಳಿಸಿದ್ದ ಪಕ್ಷ ಇದೀಗ ತನ್ನ ಬಲವನ್ನು ಹನ್ನೊಂದು ಸ್ಥಾನಗಳಿಗೆ ಏರಿಸಿಕೊಂಡಿದೆ. ಇದರಿಂದ ಮುಂಬರುವ ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆಯನ್ನು ಮತ್ತಷ್ಟುವಿಶ್ವಾಸದಿಂದ ಎದುರಿಸಲು ಅನುಕೂಲವಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮ ವ್ಯಕ್ತಪಡಿಸುತ್ತಿದ್ದಾರೆ.

ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌(Congress) ಕೂಡ ಹನ್ನೊಂದು ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿಯ ಸಮ ಸ್ಥಾನ ಪಡೆದಿದ್ದರೂ, ಅದು ಕಳೆದ ಚುನಾವಣೆಗಿಂತ ಇಳಿಕೆ ಕಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 14 ಸ್ಥಾನ ಗಳಿಸಿತ್ತು. ಮತ್ತೊಂದು ಪ್ರತಿಪಕ್ಷ ಜೆಡಿಎಸ್‌ ಕಳೆದ ಬಾರಿ ನಾಲ್ಕು ಸ್ಥಾನ ಗಳಿಸಿದ್ದು, ಇದೀಗ ಎರಡು ಸ್ಥಾನಕ್ಕೆ ಇಳಿಕೆಯಾಗಿದೆ. ಈ ದೃಷ್ಟಿಯಿಂದ ಬಿಜೆಪಿ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಳಿಸುವ ಮೂಲಕ ತನ್ನ ಬಲ ವೃದ್ಧಿಸಿಕೊಂಡಿದೆ. ಇದು ನಮಗೆ ಸಹಾಯವಾಗಲಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಅಭಿಪ್ರಾಯಪಟ್ಟರು.

Tap to resize

Latest Videos

undefined

MLC Election Result ಸೋಲಿನ ಬೆನ್ನಲ್ಲೇ ರಮೇಶ್ ಜಾರಕಿಗೊಳಿಗೆ ಮತ್ತೊಂದು ಶಾಕ್, ಕ್ರಮಕ್ಕೆ ಮುಂದಾದ ಬಿಜೆಪಿ!

ಈ ನಡುವೆ ಪಕ್ಷದ ಪ್ರಾಬಲ್ಯ ಹೊಂದಿರುವ ಬೆಳಗಾವಿ(Belagavi) ಕ್ಷೇತ್ರದಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಸೋಲು ಅನುಭವಿಸಿದ್ದು ಆಘಾತವನ್ನೂ ಉಂಟು ಮಾಡಿದೆ. ಪಕ್ಷದ ಮಾಜಿ ಸಚಿವ ರಮೇಶ ಜಾರಕಿಹೊಳಿ(Ramesh Jarkiholi) ಸಹೋದರ ಲಖನ್‌ ಜಾರಕಿಹೊಳಿ(Lakhan Jarakiholi) ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದಿರುವುದು ಪಕ್ಷದಲ್ಲಿ ತೀವ್ರ ಚರ್ಚೆ ಉಂಟು ಮಾಡಿದೆ.

ಒಂದು ವೇಳೆ ಲಖನ್‌ ಜಾರಕಿಹೊಳಿ ಸ್ಪರ್ಧಿಸದೆ ಇದ್ದಿದ್ದರೆ ಕವಟಗಿಮಠ ಅವರು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ. ಕವಟಗಿಮಠ ಗೆಲುವಿನಿಂದ ಬಿಜೆಪಿಗೆ ವಿಧಾನಪರಿಷತ್‌ನಲ್ಲಿ ಮೊದಲ ಬಾರಿಗೆ ಸರಳ ಬಹುಮತ ಸಿಕ್ಕಂತಾಗುತ್ತಿತ್ತು. ಅದೀಗ ತಪ್ಪಿದಂತಾಗಿದೆ. ಹೀಗಾಗಿ ರಮೇಶ್‌ ಜಾರಕಿಹೊಳಿ ನಡೆ ಬಗ್ಗೆ ಪಕ್ಷದಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.

ಹೆಚ್ಚು ಗೆದ್ದಿದ್ದೇವೆ ಎಂದು ಜೆಡಿಎಸ್‌ ನಿರ್ಲಕ್ಷಿಸಲ್ಲ: ಬಿಎಸ್‌ವೈ, 
ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ 11 ಸ್ಥಾನಗಳಲ್ಲಿ ಜಯ ಗಳಿಸಿದೆ. ಇದಕ್ಕಾಗಿ ಕಾರ್ಯಕರ್ತರಿಗೆ ಧನ್ಯವಾದ ಸಲ್ಲಿಸುತ್ತೇನೆ. ಹೆಚ್ಚು ಸ್ಥಾನ ಬಂದಿದೆ ಎಂದು ಜೆಡಿಎಸ್‌ ಕಡೆಗಣಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಸ್ಪಷ್ಟಪಡಿಸಿದರು.

Belagavi MLC Result:ಸ್ವಪ್ರತಿಷ್ಠೆಗಾಗಿ ಬಿಜೆಪಿಯನ್ನೇ ಸೋಲಿಸಿದ್ರಾ ರಮೇಶ್ ಜಾರಕಿಹೊಳಿ?

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಿಷತ್‌ನಲ್ಲಿ ನಮಗೆ ಹೆಚ್ಚು ಸ್ಥಾನ ಬಂದಿದೆ. ಹಾಗೆಂದು ಜೆಡಿಎಸ್‌ ಕೈಬಿಡುವುದಿಲ್ಲ, ನಿರ್ಲಕ್ಷಿಸುವುದಿಲ್ಲ. 11 ಸ್ಥಾನ ಬರಲು ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು.

25 ಕ್ಷೇತ್ರದಲ್ಲಿ ನಾವು ಸ್ಪರ್ಧೆ ಮಾಡಿದ್ದೆವು. 15 ಸ್ಥಾನ ಗಳಿಸುವ ನಿರೀಕ್ಷೆ ಇತ್ತು. ಈಗ 11 ಸ್ಥಾನದಲ್ಲಿ ಜಯ ಗಳಿಸಿದ್ದೇವೆ. ಬೆಳಗಾವಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಯಿತು. ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಅಸಂಖ್ಯ ಕಾರ್ಯಕರ್ತರು ದುಡಿದಿದ್ದಾರೆ. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದರು.

25 ಸ್ಥಾನಗಳಿಗೆ ನಡೆದ ಕರ್ನಾಟಕ ವಿಧಾನಪರಿಷತ್  ಪರಿಷತ್ ಚುನಾವಣೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿವೆ:
ಕಲಬುರಗಿ-ಬಿ.ಜಿ.ಪಾಟೀಲ್‌(ಬಿಜೆಪಿ)
ವಿಜಯಪುರ -ಪಿ.ಎಚ್‌.ಪೂಜಾರ್‌(ಬಿಜೆಪಿ)
ಉತ್ತರ ಕನ್ನಡ-ಗೋಪಿನಾಥ್‌ ಉಳ್ವೇಕರ್‌(ಬಿಜೆಪಿ)
ಧಾರವಾಡ - ಪ್ರದೀಪ್‌ ಶೆಟ್ಟರ್‌(ಬಿಜೆಪಿ)
ಬಳ್ಳಾರಿ-ಎಂ.ವೈ.ಸತೀಶ್‌(ಬಿಜೆಪಿ)
ಚಿತ್ರದುರ್ಗ-ಕೆ.ಎಸ್‌.ನವೀನ್‌(ಬಿಜೆಪಿ)
ಶಿವಮೊಗ್ಗ-ಡಿ.ಎಸ್‌.ಅರುಣ್‌(ಬಿಜೆಪಿ)
ದಕ್ಷಿಣ ಕನ್ನಡ(2)-ಕೋಟ ಶ್ರೀನಿವಾಸ ಪೂಜಾರಿ(ಬಿಜೆಪಿ)
ಚಿಕ್ಕಮಗಳೂರು-ಎಂ.ಕೆ.ಪ್ರಾಣೇಶ್‌(ಬಿಜೆಪಿ)
ಬೆಂಗಳೂರು-ಗೋಪಿನಾಥ್‌ ರೆಡ್ಡಿ(ಬಿಜೆಪಿ)
ಕೊಡಗು-ಸುಜಾಕುಶಾಲಪ್ಪ(ಬಿಜೆಪಿ)

ಅನನುಭವಿ ಮುಂದೆ ಕೆ.ಸಿ.ಕೊಂಡಯ್ಯ ಸೋಲು
ಕಾಂಗ್ರೆಸ್‌ ಹಿರಿಯ ಮುಖಂಡ, ಅನುಭವಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಇದೇ ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿದ ಏಚರೆಡ್ಡಿ ಸತೀಶ ವಿರುದ್ಧ ಸೋತಿದ್ದಾರೆ. ಕಾಂಗ್ರೆಸ್‌ ಅಧಿನಾಯಕಿಗೇ ಸ್ವಕ್ಷೇತ್ರ ಬಿಟ್ಟುಕೊಟ್ಟು ಅವರ ಭರ್ಜರಿ ಗೆಲವಿಗೆ ಕಾರಣರಾದ ಕೊಂಡಯ್ಯಗೆ ಪ್ರಸಕ್ತ ಚುನಾವಣೆಯಲ್ಲಿ ಟಿಕೆಟ್‌ ನೀಡದಂತೆ ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಿದ್ದರು. ಆದರೂ ಅವರಿಗೆ ಟಿಕೆಟ್‌ ಘೋಷಣೆಯಾಗಿತ್ತು. ಬಳಿಕ ಎಲ್ಲ ಮುಖಂಡರೂ ಒಟ್ಟಾಗಿ ಪ್ರಚಾರ ಕೈಗೊಂಡಿದ್ದರೂ ಒಳಪೆಟ್ಟು ನೀಡಿದ್ದಾರೆ ಎನ್ನುವ ಗುಮಾನಿ ಇದೆ.

click me!