
ನವದೆಹಲಿ (ಅ.13): 2019ಕ್ಕೆ ಹೋಲಿಸಿದರೆ 2024ರಲ್ಲಿ ರಾಜಕೀಯ ಚಿತ್ರಣದಲ್ಲಿ ಸಾಕಷ್ಟು ಬದಲಾವಣೆ ಊಹಿಸಿರುವ ಬಿಜೆಪಿ, ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳ ಅಂತರದಿಂದ ಸೋಲನ್ನಪ್ಪಿದ ಹಾಗೂ ದುರ್ಬಲ ಆಗಿರುವ 144 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮೆಗಾ ಯೋಜನೆ ರೂಪಿಸಿದೆ. ಈ ಸ್ಥಾನಗಳನ್ನು ಗೆಲ್ಲಲು ರೂಪಿಸಿದ ಕಾರ್ಯತಂತ್ರದ ಮೊದಲ ಭಾಗ ಕಳೆದ ತಿಂಗಳು ಮುಕ್ತಾಯವಾಗಿದ್ದು, ಈಗ 2ನೇ ಹಂತದ ಸಿದ್ಧತೆಗಳಿಗೆ ಚಾಲನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. 144 ಮಹತ್ವದ ಸ್ಥಾನ ಗೆಲ್ಲಲು ಕ್ಲಸ್ಟರ್, ಲೋಕಸಭಾ, ವಿಧಾನಸಭಾ ಉಸ್ತುವಾರಿಗಳಿಗೆ ಪ್ರತ್ಯೇಕ ಹೊಣೆ ನೀಡಲಾಗಿದ್ದು, ಯಾವುದೇ ಕಾರಣಕ್ಕೂ ಹೊಣೆಯಿಂದ ತಪ್ಪಿಸಿಕೊಳ್ಳದಂತೆ ಸೂಚಿಸಲಾಗಿದೆ.
ಈ ಹಿಂದೆ ಕೇಂದ್ರ ಸಚಿವರನ್ನು ದುರ್ಬಲ ಕ್ಷೇತ್ರಗಳಿಗೆ ನಿಯೋಜಿಸಿ ಪ್ರಚಾರ ನಡೆಸಲಾಗಿತ್ತು. ಅದು ಪ್ರಚಾರದ ಮೊದಲ ಹಂತವಾಗಿತ್ತು. ಮೊದಲ ಹಂತದ ಯೋಜನೆಯ ಫಲಶೃತಿ ಅಧ್ಯಯನಕ್ಕೆ ಕೆಲ ದಿನಗಳ ಹಿಂದೆ ಸಭೆ ನಡೆಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, 144 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳಿಗೆ, ಸರ್ಕಾರಕ್ಕಿಂತ ನಮಗೆ ಸಂಘಟನೆ ಮುಖ್ಯ ಎಂದು ಸೂಕ್ಷ್ಮವಾಗಿ ಸಂದೇಶ ರವಾನಿಸುವ ಮೂಲಕ, ಕಾರ್ಯನಿರ್ವಹಣೆಯಲ್ಲಿ ಎಡವಿದ್ದ ಕೇಂದ್ರ ಸಚಿವರಿಗೆ ಬಿಸಿ ಮುಟ್ಟಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನನಗೆ ಟಿಕೆಟ್ ಸಿಗದಿದ್ದರೆ ಮಗನಿಗೆ ಕೊಡಿಸುವೆ: ಸಚಿವ ಎಂಟಿಬಿ ನಾಗರಾಜ್
ಫಲಾನುಭವಿಗಳೇ ಗುರಿ: ಈ ಬಾರಿ ಗೆಲ್ಲಲೇಬೇಕು ಎಂದು ಗುರಿ ಹಾಕಿಕೊಂಡಿರುವ 144 ಕ್ಷೇತ್ರಗಳಲ್ಲಿ ನಿರ್ದಿಷ್ಟಮತದಾರರ ಗುಂಪನ್ನು ತಲುಪುವ ಕಾರ್ಯಕ್ರಮ ರೂಪಿಸಲು ಉದ್ದೇಶಿಸಲಾಗಿದೆ. ಉದಾಹರಣೆಗೆ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಾಗಿರುವವರ ಪಟ್ಟಿತಯಾರಿಸಿ ಅವರನ್ನು ಸೆಳೆಯಲು ನಾಯಕರಿಗೆ ಸೂಚಿಸಲಾಗಿದೆ.
ರಾಜಕೀಯ ನಿರ್ವಹಣೆ: 2024ರ ಚುನಾವಣೆ ಸಂಬಂಧ ವಿಸ್ತೃತ ರಾಜಕೀಯ ಯೋಜನೆ ರೂಪಿಸಿ ಅದನ್ನು ಉಸ್ತುವಾರಿಗಳಿಗೆ ನೀಡಲಾಗಿದೆ. ಉಸ್ತುವಾರಿಗಳು ನಕಲಿ ಮತದಾರರು, ವಿಪಕ್ಷ ನಾಯಕರ ಪ್ರಚಾರ ಮತ್ತು ರಾಜಕೀಯ ನಾಯಕರ ಚಲನವಲನದ ಮೇಲೆ ನಿಗಾ, ಜಾತಿ ಲೆಕ್ಕಾಚಾರದ ಅಂಕಿ ಅಂಶಗಳ ಮಾಹಿತಿ ಸಂಗ್ರಹ ಮತ್ತು ಸ್ಥಳೀಯ ಬುಡಕಟ್ಟು ಮತ್ತು ಪರಿಶಿಷ್ಟವರ್ಗದ ಪ್ರಭಾವಿಗಳ ಮೇಲೆ ನಿಗಾ ಇಡುವ ಕೆಲಸ ಮಾಡುವರು.
ಕ್ಲಸ್ಟರ್ ಉಸ್ತುವಾರಿಗಳು: ಲೋಕಸಭಾ ಉಸ್ತುವಾರಿಗಳ ಜೊತೆ ಸೇರಿಕೊಂಡು 2024ರವರೆಗೂ ತಿಂಗಳಿಗೆ ಒಂದು ಲೋಕಸಭಾ ಕ್ಷೇತ್ರಕ್ಕೆ ಪ್ರವಾಸ ಕೈಗೊಳ್ಳುವುದು. ಲೋಕಸಭೆ ಮತ್ತು ವಿಧಾನಸಭೆ ಕೋರ್ ಕಮಿಟಿ ಸದಸ್ಯರ ಜೊತೆ ಸಭೆ, ಕೇಂದ್ರ ಸಚಿವರ ಪ್ರವಾಸದ ಸಿದ್ಧತೆ ಪರಿಶೀಲನೆ, ಸ್ಥಳೀಯ ಖ್ಯಾತನಾಮರು ಮತ್ತು ಪ್ರಭಾವಿಗಳ ಜೊತೆ ಸಂವಾದದ ಹೊಣೆ ನೀಡಲಾಗಿದೆ.
ಲೋಕಸಭಾ ಉಸ್ತುವಾರಿ: ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ರಾತ್ರಿ ವಾಸ್ತವ್ಯ. ಚುನಾವಣಾ ದಿನಾಂಕ, ಜಾತಿವಾರು ಮತದಾರರ ಪಟ್ಟಿಸಿದ್ಧಪಡಿಸುವುದು, ಇತರೆ ಪಕ್ಷಗಳ ನಾಯಕರ ಸೆಳೆಯುವುದು, ಕ್ಷೇತ್ರದಲ್ಲಿನ ಜನರ ಅಭಿಮತ ಅರಿಯುವುದು, ಮತಗಳಿಕೆಯ ದೃಷ್ಟಿಯಿಂದ ಮಹತ್ವವಾದ ಸ್ಥಳಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ್ ಶಾ ಮೊದಲಾದವರ ರಾರಯಲಿಗೆ ಅಗತ್ಯ ಸ್ಥಳ ಗುರುತಿಸುವಿಕೆ, ಕೋರ್ ಮತ್ತು ಬೂತ್ ಸಮಿತಿ ರಚನೆಯ ಖುದ್ದು ಪರಿಶೀಲನೆ, ತಿಂಗಳಿಗೆ ಒಮ್ಮೆ ವಿಧಾನಸಭಾ ಕ್ಷೇತ್ರವಾರು ಕೋರ್ ಕಮಿಟಿ ಜೊತೆ ವಚ್ರ್ಯುವಲ್ ಸಭೆ- ಇವರ ಹೊಣೆ.
ವಿಧಾನಸಭಾ ಉಸ್ತುವಾರಿ: ವಾರಕ್ಕೆ ಒಂದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಾತ್ರಿ ವಾಸ್ತವ್ಯ. ಬಿಜೆಪಿ ಆಡಳಿತ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಾಧನೆಗಳ ಕೈಪಿಡಿ ಸಿದ್ಧಪಡಿಸುವುದು.
Vijayapura: ಪಾಲಿಕೆ ಚುನಾವಣೆ ಹಿನ್ನೆಲೆ ಬಿಜೆಪಿಯಲ್ಲಿ ಒಗ್ಗಟ್ಟಿನ ಮಂತ್ರ!
ಸಾಧನೆ ಸುಧಾರಣೆಗೆ ಟೀಮ್ ವರ್ಕ್: ಎಲ್ಲಾ ಬೂತ್‌ಗಳ ಮಟ್ಟದಲ್ಲಿ ವಾಟ್ಸಾಪ್ ಗ್ರೂಪ್ ರಚಿಸಿ, ಅವುಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳುವ ಹೊಣೆಯನ್ನು ಪಕ್ಷದ ಸಾಮಾಜಿಕ ಜಾಲತಾಣ ವಿಭಾಗಕ್ಕೆ ವಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.