ನಾಮಪತ್ರ ಭರಾಟೆ ಅಂತ್ಯ, ಯಾರು ಯಾವ ಕಣಕ್ಕೆ ನಾಮಿನೇಷನ್? 15 ಕ್ಷೇತ್ರಗಳ ಸಂಪೂರ್ಣ ವಿವರ

By Web DeskFirst Published Nov 18, 2019, 9:27 PM IST
Highlights

ರಾಜ್ಯದ 15 ಕ್ಷೇತತ್ರಗಳ ಉಪಸಮರ ಕದನ ಇಂದಿನಿಂದ ಮತ್ತಷ್ಟ ರಂಗೇರಿದೆ. ನಾಮಿನೇಷನ್ ಸಲ್ಲಿಸಲು ಇಂದು [ಸೋಮವಾರ] ಕೊನೆ ದಿನವಾದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಅಪಾರ ಸಂಖ್ಯೆ ಕಾರ್ಯಕರ್ತರ ಜತೆ ತೆರಳಿ ನಾಮಪತ್ರ ಸಲ್ಲಿಸಿದರು. ಹಾಗಾದ್ರೆ ಕೊನೆ ದಿನದಲ್ಲಿ ಯಾರು ಯಾವ ಕ್ಷೇತ್ರಕ್ಕೆ ಉಮೇದುವಾರಿಕೆ ಸಲ್ಲಿಸಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಬೆಂಗಳೂರು, [ನ.18]: ಇಂದು [ಸೋಮವಾರ] ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದರಿಂದ 15 ಕ್ಷೇತ್ರಗಳ ವಿಧಾನಸಭಾ ಉಪಚುನಾವಣಾ ಕಣಗಳಲ್ಲಿ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. 

ಸೋಮವಾರ ಬೆಳಗ್ಗೆಯಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಸಂಜೆ 5ರ ವರೆಗೆ ಕಾಲಾವಕಾಶ ನೀಡಲಾಗಿತ್ತು. ಇದ ಮಧ್ಯೆ ಜೆಡಿಎಸ್, ಕಾಂಗ್ರೆಸ್, ಮತ್ತು ಬಿಜೆಪಿ ಅಭ್ಯರ್ಥಿಗಳು ಬೆಳಗ್ಗೆಯಿಂದಲೇ ಟೆಂಪಲ್ ರನ್ ಮಾಡಿದರು. ಬಳಿಕ ಮುಹೂರ್ತ ನೋಡಿಕೊಂಡು ಅಪಾರ ಸಂಖ್ಯೆ ಕಾರ್ಯಕರ್ತರ ಜತೆ ತೆರಳಿ ತಮ್ಮ-ತಮ್ಮ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಸಿದರು.

ಮಿನಿ ಸಮರಕ್ಕೆ ಬಿಜೆಪಿಯ 40 ಸ್ಟಾರ್ ಪ್ರಚಾರಕರ ನೇಮಕ: ಪ್ರಮುಖ ನಾಯಕರಿಗೆ ಕೊಕ್..!

ಬೃಹತ್​ ಮೆರವಣಿಗೆ ಮೂಲಕ ಹೋಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಶಕ್ತಿ ಪ್ರದರ್ಶನ ತೋರಿಸಿದರು. ಇನ್ನು ಕಾರ್ಯಕರ್ತರಂತೂ ಹಾರ ತುರಾಯಿಗಳಿಂದ ತಮ್ಮ ಅಭ್ಯರ್ಥಿ ಜತೆ ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದ್ರು. 

ಅದರಲ್ಲೂ ನಾನಾ ತರಹದ ತಾಳವಾದ್ಯಗಳ ಅಬ್ಬರಕ್ಕೆ ಕಾರ್ಯಕರ್ತರು ಟಪ್ಪಂಗುಚ್ಚಿ ಸ್ಟೆಪ್ಸ್ ಹಾಕಿ ತಮ್ಮ ನಾಯಕನಿಗೆ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು. ವಿಶೇಷ ಅಂದ್ರೆ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರಾ ಜಿದ್ದಾಜಿದ್ದಿ ಇದೆ. 

ಬೈ ಎಲೆಕ್ಷನ್: ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಘೋಷಿಸದೇ 'ಕೈ' ಉಸ್ತುವಾರಿಗಳ ನೇಮಕ

ಜೆಡಿಎಸ್ ಮಂಡ್ಯದ ಕ.ಆರ್.ಪೇಟೆ ಹಾಗೂ ಹುಣಸೂರು ಕ್ಷೇತ್ರದಲ್ಲಿ ಹೊರತುಪಡಿಸಿದ್ರೆ ಉಳಿದೆಲ್ಲ ಕ್ಷೇತ್ರಗಳಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಇದೀಗ ನಾಮಪತ್ರ ಸಲ್ಲಿಕೆ ಅವಧಿ ಮುಗಿದಿದ್ದು, 19ರಂದು ನಾಮಪತ್ರ ಪರಿಶೀಲನೆ ನಡೆಯಲಿಯಲಿದೆ.

ಇನ್ನು ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದು, ಅಂದು ಯಾರೆಲ್ಲ ನಾಮಪತ್ರ ವಾಪಸ್ ಪಡೆಯುತ್ತಾರೆ..? ಅಂತಿಮವಾಗಿ ಯಾರೆಲ್ಲ ಬೈ ಎಲೆಕ್ಷನ್ ಕಣದಲ್ಲಿರುತ್ತಾರೆ ಎನ್ನುವುದು ತಿಳಿಯಲಿದೆ. ಹಾಗಾದ್ರೆ ಇಂದು ಯಾರು ಯಾವ ಕ್ಷೇತ್ರಕ್ಕೆ ನಾಮಿನೇಷನ್ ಸಲ್ಲಿಸಿದ್ದಾರೆ ಎನ್ನುವುದನ್ನು ಈ ಕೆಳಗಿನಂತಿದೆ ನೋಡಿ..

ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ

1. ಗೋಕಾಕ್ ನಲ್ಲಿ ಸಹೋದರರ ಸವಾಲ್

ಮಿನಿ ಸಮರದ ಅಖಾಡದಲ್ಲಿ ಸಹೋದರರ ಕದನಕ್ಕೆ ಸಾಕ್ಷಿಯಾಗಿರುವ ಗೋಕಾಕ್ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಸಹೋದರ ಲಖನ್ ಜಾರಕಿಹೊಳಿ ಉಮೇದುವಾರಿಕೆ ಸಲ್ಲಿಸಿದ್ರು. 

2. ಚಿಕ್ಕಬಳ್ಳಾಪುರ ಮಿನಿ ಸಮರ ಅಖಾಡ
ಚಿಕ್ಕಬಳ್ಳಾಪುರ ಮಿನಿ ಸಮರ ಅಖಾಡ ಕೂಡ ರಂಗೇರಿದೆ. ಬಿಜೆಪಿ ಅಭ್ಯರ್ಥಿ ಡಾ.ಸುಧಾಕರ್ ಬೃಹತ್ ಶಕ್ತಿ ಪ್ರದರ್ಶನ ನಡೆಸಿ ನಾಮಪತ್ರ ಸಲ್ಲಿಸಿದರು. ಸುಧಾಕರ್ ಗೆ ಡಿಸಿಎಂ ಅಶ್ವಥ್ ನಾರಾಯಣ್ ಮತ್ತು ಸಚಿವ ಸಿ.ಟಿ.ರವಿ ಸಾಥ್ ಕೊಟ್ಟರೇ ಕಾಂಗ್ರಸ್ ಅಭ್ಯರ್ಥಿ ಎಂ.ಅಂಜಿನಪ್ಪ ಡಿಕೆ ಶಿವಕುಮಾರ್ ಜತೆಗೆ ತೆರಳಿ ನಾಮಿನೇಷನ್ ಸಲ್ಲಿಸಿದರು. 

3. ಹೊಸಕೋಟೆ [ಬೆಂಗಳೂರು ಗ್ರಾಮಾಂತರ]

ಭಾರೀ ಜಿದ್ದಾಜಿದ್ದಿಯಿಂದ ಕೂಡಿರುವ ಕಬೇರರ ಕಣ ಎಂದೇ ಕರೆಯಲ್ಪಡುವ ಹೊಸಕೋಟೆ ಬಿಜೆಪಿ ಅಭ್ಯರ್ಥಿಯಾಗಿ ಶ್ರೀಮಂತ ರಾಜಕಾರಣಿ ಎಂಟಿಬಿ ನಾಗರಾಜ್, ಕಾಂಗ್ರೆಸ್ ನಿಂದ ಪದ್ಮಾವತಿ ಬೈರತಿ ಸುರೇಶ್ ಭರ್ಜರಿ ರೋಡ್ ಶೋ ಮಾಡಿ ನಾಮಪತ್ರಸಲ್ಲಿಸಿದರು. ಇನ್ನು ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಪಕ್ಷೇತ ಅಭ್ಯರ್ಥಿಯಾಗಿ ನ.15ರಂದೇ ನಾಮಪತ್ರ ಸಲ್ಲಿಸಿದ್ದಾರೆ. 
 
 4.  ವಿಜಯನಗರ [ಹೋಸಪೇಟೆ]
ಎತ್ತಿನಗಾಡಿಯಲ್ಲಿ ತೆರಳಿ ಹೊಸಪೇಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್  ನಾಮಪತ್ರ ಸಲ್ಲಿಸಿದ್ರೆ, ಕಾಂಗ್ರೆಸ್ ನಿಂದ ವೆಂಕಟರಾವ್ ಘೋರ್ಪಡೆ ಉಮೇದುವಾರಿಕೆ ಸಲ್ಲಿಸಿದರು.

5.ಕೆ.ಆರ್. ಪುರಂ [ಬೆಂಗಳೂರು]

ಕೆ.ಆರ್ ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ, ಭೈರತಿ ಬಸವರಾಜ್ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳ ಹಾಗೂ ನಾಯಕರ ಜೊತೆ ಆಗಮಿಸಿ, ನಾಮಪತ್ರ ಸಲ್ಲಿಸಿದ್ರು. ಇನ್ನು ನಾರಾಯಣಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

6. ಮಹಾಲಕ್ಷ್ಮಿ ಲೇಔಟ್ [ಬೆಂಗಳೂರು] 

ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ಅವರು ಸಚಿವ ಸುರೇಶ್ ಕುಮಾರ್ ಜತೆಗೆ ಹೋಗಿ ನಾಮಿನೇಷನ್ ಫೈಲ್ ಮಾಡಿದರು. ಮತ್ತೊಂದೆಡೆ ಕಾಂಗ್ರೆಸ್ ಕ್ಯಾಂಡಿಡೇಟ್ ಆಗಿ ಎಂ. ಶಿವರಾಜು ನಾಮಪತ್ರ ಸಲ್ಲಿಸಿದರು.

7. ಯಶವಂತಪುರ [ಬೆಂಗಳೂರು] 
ಯಶವಂತಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಜವರಾಯಿಗೌಡ ನಾಮಪತ್ರ ಸಲ್ಲಿಸಿದ್ರೆ, ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಗರಾಜ ಪಾಳ್ಯ ಉಮೇದುವಾರಿಕೆ ಸಲ್ಲಿಸಿದರು.

8. ಹುಣಸೂರು [ಮೈಸೂರು]

ಹುಣಸೂರು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಚ್.ಸಿ. ಮಂಜುನಾಥ್, ಜೆಡಿಎಸ್ ಕ್ಯಾಂಡಿಡೇಟ್ ಸೋಮಶೇಖರ್ ಹಾಗೂ  ಬಿಜೆಪಿ ಅಭ್ಯರ್ಥಿಯಾಗಿ ಎಚ್. ವಿಶ್ವನಾಥ್ ನಾಮಪತ್ರ ಸಲ್ಲಿಸಿದರು.

9. ಯಲ್ಲಾಪುರ [ಉತ್ತರ ಕನ್ನಡ]
 ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವರಾಮ್ ಹೆಬ್ಬಾರ ನಾಮಪತ್ರ ಸಲ್ಲಿಸಿದ್ರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಭೀಮಣ್ಣ ನಾಯ್ಕ್ ಮತ್ತು ಜೆಡಿಎಸ್ ನ ಚೈತ್ರಾಗೌಡ ಉಮೇದುವಾರಿಕೆ ಸಲ್ಲಿಸಿದರು.

10. ಅಥಣಿ [ಬೆಳಗಾವಿ]
ಮಹೇಶ್ ಕುಮಠಳ್ಳಿ ಡಿಸಿಎಂ ಲಕ್ಷ್ಮಣ ಸವದಿ ಜತೆಗೆ ಹೋಗಿ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ರೆ, ಕಾಂಗ್ರೆಸ್ ನಿಂದ ಗಜಾನನ ಮಂಗಸೂಳಿ ನಾಮಿನೇಷನ್ ಫೈಲ್ ಮಾಡಿದರು.

11. ಹಿರೇಕೆರೂರು [ಹಾವೇರಿ]
ಬಿ.ಸೊ ಪಾಟೀಲ್ ಬಿಜೆಪಿಯಿಂದ ನಾಮಪತ್ರ ಸಲ್ಲಿಸಿದ್ರೆ, ಕಾಂಗ್ರೆಸ್ ನಿಂದ  ಬಿ.ಎಚ್. ಬನ್ನಿಕೋಡ್ ಹೂ ಜೆಡಿಎಸ್ ಅಭ್ಯರ್ಥಿಯಾಗಿ ಶಿವಚಾರ್ಯ ಸ್ವಾಮೀಜಿ ನಾಮಪತ್ರ ಸಲ್ಲಿಸಿದರು.

12. ಕಾಗವಾಡ [ಬೆಳಗಾವಿ]
ತೀವ್ರ ಕುತೂಹಲ ಮೂಡಿಸಿರುವ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ನಾಮಪತ್ರ ಸಲ್ಲಿಕೆ ಮಾಡಿದ್ರೆ, ಬಿಜೆಪಿಗೆ ರಾಜೀನಾಮೆ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಾಜು ಕಾಗೆ ನಾಮಪತ್ರ ಸಲ್ಲಿಸಿದರು.

13. ಶಿವಾಜಿನಗರ [ಬೆಂಗಳೂರು]

ಅನರ್ಹ ಶಾಸಕ ರೋಷನ್ ಬೇಗ್ ಬದಲಿಗೆ ಮಾಜಿ ಕಾರ್ಪೊರೇಟರ್ ಸರವಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ರೆ, ಕಾಂಗ್ರೆಸ್ ನಿಂದ ರಿಜ್ವಾನ್ ಹರ್ಷದ್ ಹಾಗೂ ಜೆಡಿಎಸ್ ನಿಂದ ತನ್ವೀರ್ ಅಹಮದ್ ನಾಮಪತ್ರ ಸಲ್ಲಿಕೆ ಮಾಡಿದರು.

14. ಆರ್.ಪೇಟೆ [ಮಂಡ್ಯ]
ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸಿದರು. ಇನ್ನು ಕಾಂಗ್ರೆಸ್ ನಿಂದ ಕೆ.ಬಿ.ಚಂದ್ರಶೇಖರ್ ಮತ್ತು ಜೆಡಿಎಸ್ ನಿಂದ ದೇವರಾಜ್ ಬಿ.ಎಲ್ ನಾಮಿನೇಷನ್ ಸಲ್ಲಿಸಿದರು.

15. ರಾಣೇಬೆನ್ನೂರು [ಹಾವೇರಿ]
ಕೆಪಿಜೆಪಿಯಿಂದ ಗೆದ್ದಿದ್ದ ಎಚ್.ನಾಗೇಶ್ ಅನರ್ಹಗೊಂಡಿರುವ ರಾಣೇಬೆನ್ನೂರು ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಆಗಿ ಅರುಣ್ ಕುಮಾರ್, ಜೆಡಿಎಸ್ ನಿಂದ ಮಲ್ಲಿಕಾರ್ಜುನ ಹಲಗೇರಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ನಾಮಪತ್ರ ಸಲ್ಲಿಕೆ ಮಾಡಿದರು.

ಇದು ಕೇವಲ ಕಾಂಗ್ರೆಸ್. ಬಿಜೆಪಿ ಹಾಗೂ ಜೆಡಿಎಸ್ ನಿಂದ ಮಾತ್ರ ನಾಮಪತ್ರ ಸಲ್ಲಿಸಿದ ಪಟ್ಟಿಯಾಗಿದ್ದು, ಆಯಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳು ಸಹ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದ್ರೆ, ಇಲ್ಲಿ ಅವರ ಹೆಸರು ನಮೂದಿಸಿಲ್ಲ. 

ಒಟ್ಟಿನಲ್ಲಿ  ರಾಜ್ಯದಲ್ಲಿ ಮಿನಿ ಸಮರ ಅಖಾಡ ಸಿದ್ಧವಾಗಿದ್ದು, ಇನ್ಮುಂದೆ ಏನಿದ್ದರೂ ಮತಬೇಟೆ ಮಾತ್ರ ಬಾಕಿ. 

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!