ಕೊರೋನಾಗೆ ನಾದಿನಿ ಬಲಿ: ಕ್ವಾರಂಟೈನ್​ನಲ್ಲಿ ಮಾಜಿ ಸಚಿವ ರೇವಣ್ಣ...!

By Suvarna NewsFirst Published Jul 22, 2020, 2:26 PM IST
Highlights

ಮಹಾಮಾರಿ ಕೊರೋನಾದಿಂದ ಹೆಂಡತಿಯ ಸಹೋದರಿ (ನಾದಿನಿ) ಬಲಿಯಾಗಿದ್ದರಿಂದ ಮಾಜಿ ಸಚಿವ ರೇವಣ್ಣಗೆ ಸೋಂಕಿನ ಭೀತಿ ಶುರುವಾಗಿದ್ದು,, ಇದೀಗಾ ಅವರೇ ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

ಬೆಂಗಳೂರು, (ಜುಲೈ.22): ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಚ್​.ಎಂ. ರೇವಣ್ಣ ಅವರ ಪತ್ನಿ ಸಹೋದರಿ ಕೊರೋನಾಗೆ ಬಲಿಯಾಗಿದ್ದು, ಕುಟುಂಬಸ್ಥರಲ್ಲಿ ಸೋಂಕಿನ ಭೀತಿಯೂ ಶುರುವಾಗಿದೆ.

ನಿನ್ನೆ ರಾತ್ರಿ(ಮಂಗಳವಾರ) ಎಚ್​.ಎಂ. ರೇವಣ್ಣ ಅವರ ಪತ್ನಿಯ ಕಿರಿಯ ಸಹೋದರಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ. ರೇವಣ್ಣ ಅವರ ಪತ್ನಿಯ ಸಹೋದರಿ ಎಂ.ಎಸ್ ರೋಹಿಣಿಗೆ ಇತ್ತೀಚೆಗೆ ಕೊರೋನಾ ಸೋಂಕು ದೃಢಪಟ್ಟಿತ್ತು. 

ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೆಂಡ್ತಿ, ಪುತ್ರಿಗೆ ಕೊರೋನಾ ಪಾಸಿಟಿವ್ ದೃಢ

ಕೂಡಲೇ ನಾದಿನಿಯನ್ನು ಸ್ವತಃ ರೇವಣ್ಣ ಅವರೇ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಆದ್ರೆ, ಚಿಕಿತ್ಸೆ ಫಲಿಸದೆ 61 ವರ್ಷದ ರೋಹಿಣಿ ಮೃತಪಟ್ಟಿದ್ದಾರೆ.

ರೋಹಿಣಿ ಜತೆ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ರೇವಣ್ಣ ಹಾಗೂ ಅವರ ಪುತ್ರ ಕ್ವಾರಂಟೈನ್ ಮನೆಯಲ್ಲೇ ಕ್ವಾರಂಟೈನ್​ಗೆ ಒಳಪಟ್ಟಿದ್ದಾರೆ. ಈ ಬಗ್ಗೆ ರೇವಣ್ಣ ತನ್ನ  ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ನನ್ನ ಧರ್ಮಪತ್ನಿಯ ಕಿರಿಯ ಸಹೋದರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟು ನಿನ್ನೆ ರಾತ್ರಿ ನಿಧನವಾಗಿರುತ್ತಾರೆ. ಅವರನ್ನು ಸ್ವತಃ ಅಸ್ಪತ್ರೆಗೆ ಕರೆದೊಯ್ದಿದ್ದ ಹಿನ್ನೆಲೆಯಲ್ಲಿ ನಾನು ಸಹ ಹೋಮ್ ಕ್ವಾರಂಟೈನ್ ಆಗಿರುವೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುವೆ.

— H M Revanna (@HMRevanna)

ಅಲ್ಲದೇ ರೇವಣ್ಣ ನಿನ್ನೆ (ಮಂಗಳವಾರ) ಅಷ್ಟೇ ಸಿದ್ದರಾಮಯ್ಯ ಅವರ ಜತೆ ಬೆಂಗಳೂರಿನಲ್ಲಿ ನಿರ್ಮಾಣವಾಗುತ್ತಿರುವ ಕೋವಿಡ್ ಕೇರ್ ಸೆಂಟರ್‌ ವೀಕ್ಷಣೆಗೆ ತೆರಳಿದ್ದರು.

click me!