ಪ್ರಚಾ​ರಕ್ಕೆ ತೆರ​ಳಿದ್ದ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಕಾರಿನ ಮೇಲೆ ಕಲ್ಲು ತೂರಾಟ

Published : Apr 16, 2023, 03:20 AM IST
ಪ್ರಚಾ​ರಕ್ಕೆ ತೆರ​ಳಿದ್ದ ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಕಾರಿನ ಮೇಲೆ ಕಲ್ಲು ತೂರಾಟ

ಸಾರಾಂಶ

ಚಿಂಚೋಳಿ ಮತ​ಕ್ಷೇ​ತ್ರದ ಚಂದನಕೆರಾ ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ, ಶಾಸಕ ಅವಿ​ನಾಶ ಜಾಧವ್‌ ಅವರು ಪ್ರಚಾರಕ್ಕೆ ತೆರಳಿದ್ದ ವೇಳೆ ಅವಿ​ನಾಶ ಅವರ ವಾಹನ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆ​ದಿ​ದೆ.

ಚಿಂಚೋಳಿ (ಏ.16): ಚಿಂಚೋಳಿ ಮತ​ಕ್ಷೇ​ತ್ರದ ಚಂದನಕೆರಾ ಗ್ರಾಮಕ್ಕೆ ಬಿಜೆಪಿ ಅಭ್ಯರ್ಥಿ, ಶಾಸಕ ಅವಿ​ನಾಶ ಜಾಧವ್‌ ಅವರು ಪ್ರಚಾರಕ್ಕೆ ತೆರಳಿದ್ದ ವೇಳೆ ಅವಿ​ನಾಶ ಅವರ ವಾಹನ ಹಾಗೂ ಅವರ ಬೆಂಬಲಿಗರ ಮೇಲೆ ಕಲ್ಲು ತೂರಾಟ ನಡೆ​ದಿ​ದೆ. ಚಂದ​ನ​ಕೇರಾ ಗ್ರಾಮದ ಎಸ್‌ಸಿ ಓಣಿ​ಯಲ್ಲಿ ಪ್ರಚಾರ ನಡೆಸಿ ತೆರ​ಳು​ವಾಗ ಈ ಘಟನೆ ನಡೆ​ದಿದ್ದು, ಅವಿ​ನಾಶ ಕಾರು ಸೇರಿ​ದಂತೆ ಆರು ಕಾರು​ಗಳು ಜಖಂ ಗೊಂಡಿವೆಯಲ್ಲದೆ ಅವಿ​ನಾಶ್‌ ಬೆಂಗ​ಲಿ​ಗ​ರಿಗೆ ಸಣ್ಣ​ಪುಟ್ಟ ಗಾಯ​ಗ​ಳಾಗಿ​ವೆ. ಕಲ್ಲು ತೂರಾ​ಟಕ್ಕೆ ನಿಖರ ಕಾರಣ ತಿಳಿ​ದು​ಬಂದಿ​ಲ್ಲ​ವಾ​ದರೂ ಇದು ಕಾಂಗ್ರೆ​ಸ್ಸಿ​ಗರ ಕೈವಾ​ಡ​ವಾ​ಗಿದೆ ಎಂದು ಶಾಸಕ ಅವಿ​ನಾಶ್‌ ಜಾಧವ್‌ ಆರೋಪಿ​ಸಿ​ದ್ದಾ​ರೆ.

ಅವಿನಾಶ ಜಾಧವ್‌ ಮತ​ಯಾ​ಚ​ನೆ: ಚೇಂಗಟಾ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಅನೇಕ ತಾಂಡಾ/ಗ್ರಾಮಗಳಲ್ಲಿ ಐತಿಹಾಸಿಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ನನಗೆ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಶಾಸಕ ಡಾ.ಅವಿನಾಶ ಜಾಧವ್‌ ಮತಯಾಚಿಸಿದರು. ಚೆಂಗಟಾ ಗ್ರಾಮದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತಯಾಚಿಸಿದ ಅವರು, ಸೋಮೇಶ್ವರ ದೇವಾಲಯದಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.

ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಪಡೆದ ಮೂಡಿಗೆರೆ ಬಿಜೆಪಿ ಅಭ್ಯರ್ಥಿ ದೀಪಕ್ ದೊಡ್ಡಯ್ಯ!

ಚೆಂಗಟಾ ಗ್ರಾಮದಲ್ಲಿ ಹೈಸ್ಕೂಲ್‌ ಕಟ್ಟಡ ನಿರ್ಮಾಣಕ್ಕಾಗಿ 9 ಕೋಟಿ ಅಡಕಿಮೋಕ ತಾಂಡಾದಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ಕಮ ಬ್ಯಾರೇಜ್‌ ನಿರ್ಮಿಸಿ ಗ್ರಾಮ/ತಾಂಡಾಗಳಲ್ಲಿದ್ದ ಕುಡಿವ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಹೊನ್ನಭಟ್ಟತಾಂಡಾ, ಕಲದೊಡ್ಡಿ ತಾಂಡಾ, ಸಜ್ಜನಕೊಳ್ಳ ತಾಂಡಾ, ಮಳ್ಳಿಕೊಳ್ಳ ತಾಂಡಾ, ದುತ್ತರಗಾ ಹಳ್ಳಿಯಲ್ಲಿ ಜಲಜೀವನ ಮಿಷನ ಯೋಜನೆ ಅಡಿಯಲ್ಲಿ ಮನೆ ಮನೆಗೆ ನಳ ನೀರು ಒದಗಿಸಲಾಗಿದೆ. ತಾಲೂಕಿನಲ್ಲಿ ಬಿಜೆಪಿ ಸರ್ಕಾರದಿಂದ ಹಲವು ಯೋಜನೆ ಅಡಿಯಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. 2023ರ ಚುನಾವಣೆಯಲ್ಲಿ ನನಗೆ ಮತ್ತೊಮ್ಮೆ ಬೆಂಬಲಿಸಿರಿ ಎಂದು ಶಾಸಕ ಡಾ. ಅವಿನಾಶ ಜಾಧವ್‌ ಮತಯಾಚನೆ ಮಾಡಿದರು.

ಬಿಜೆಪಿಯಂತಹ ಕೆಟ್ಟ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಲ್ಲ: ಸಿದ್ಧರಾಮಯ್ಯ

ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ರಮೇಶ ದುತ್ತರಗಿ ಮಹೇಂದ್ರ ಪ್ರಜಾರಿ, ಅಶೋಕ ಜಾಜೀ, ಭವಾನಿ ಫತ್ತೆಪೂರ, ರವಿ ಪೂಜಾರಿ, ಶಿವಕುಮಾರ ಪೋಚಾಲಿ ಇನ್ನಿತರರು ಮಾತನಾಡಿ ಮತಯಾಚಿಸಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌
Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!