ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ, ಟಿವಿಕೆಗೆ 80 ಕ್ಷೇತ್ರ, ಕೋಲಾಹಲ ಸೃಷ್ಟಿಸಿದ ಬಿಜೆಪಿ ಆಫರ್ ವರದಿ

Published : Mar 15, 2026, 12:22 PM IST
BJP TVK alliance

ಸಾರಾಂಶ

ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ, ಟಿವಿಕೆಗೆ 80 ಕ್ಷೇತ್ರ, ಕೋಲಾಹಲ ಸೃಷ್ಟಿಸಿದ ಬಿಜೆಪಿ ಆಫರ್ ವರದಿ, ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಗೊಳ್ಳುವ ಸಾಧ್ಯತೆ ಕಾಣಿಸುತ್ತಿದೆ.

ಚೆನ್ನೈ (ಮಾ.15) ತಮಿಳುನಾಡು ರಾಜಕೀಯ ಅತ್ಯಂತ ಜಟಿಲವಾಗಿದೆ. ಡಿಎಂಕೆ, ಎಐಡಿಎಂಕೆ ಸೇರಿದ ಪ್ರಾದೇಶಿಕ ಪಕ್ಷಗಳೇ ಅಧಿಪತ್ಯ ಸಾಧಿಸಿದೆ. ಕಾಂಗ್ರೆಸ್‌ನಿಂದ ಕೈಜಾರಿದ ಬಳಿಕ ತಮಿಳುನಾಡು ಪ್ರಾದೇಶಿಕ ಪಕ್ಷಗಳ ಅಧಿಪತ್ಯದಲ್ಲಿದೆ. ಇತ್ತ ಅಣ್ಣಾಮಲೈ ಎಂಟ್ರಿಯಿಂದ ಬಿಜೆಪಿ ಪುಟಿದೆದ್ದಿದೆ. ಇದರ ನಡುವೆ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಉದಯ ತಮಿಳುನಾಡು ರಾಜಕೀಯದಲ್ಲಿ ಹೊಸ ಶಕೆ ಆರಂಭಿಸಿತ್ತು. ತಮಿಳುನಾಡು ವಿಧಾನಸಭೆ ಚನಾವಣೆ ಸಮೀಪಿಸುತ್ತಿದ್ದಂತೆ ಮೈತ್ರಿ ಮಾತುಕತೆಗಳು ಕೇಳಿಬರುತ್ತಿದೆ. ಈ ಪೈಕಿ ಮಹತ್ವದ ಬೆಳವಣಿಗೆ ತಮಿಳನಾಡಿನಲ್ಲಿ ನಡೆದಿದೆ. ವಿಜಯ್ ಜೊಸೆಫ್ ಟಿವಿಕೆ ಪಕ್ಷಕ್ಕೆ ಬಿಜೆಪಿ ಭರ್ಜರಿ ಆಫರ್ ನೀಡಿದೆ ಎಂದು ವರದಿಯಾಗಿದೆ. ಮೈತ್ರಿ ಮಾಡಿಕೊಂಡರೆ ನಟ ವಿಜಯ್‌ಗೆ ಉಪ ಮುಖ್ಯಮಂತ್ರಿ ಸ್ಥಾನ ಹಾಗೂ ಟಿವಿಕೆ ಪಕ್ಷಕ್ಕೆ 80 ಸ್ಥಾನ ನೀಡುವುದಾಗಿ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ ಆಫರ್ ಒಪ್ಪಿಕೊಂಡು ವಿಜಯ್ ಟಿವಿಕೆ ಪಕ್ಷ ಮೈತ್ರಿ ಮಾಡಿಕೊಂಡರೆ ತಮಿಳುನಾಡಿನಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಡಿಎಂಕೆಗೆ ತೀವ್ರ ಹೊಡೆತ ನೀಡುವ ಸಾಧ್ಯತೆ ಇದೆ. ಬಿಜೆಪಿಯ ಅಭಿವೃದ್ಧಿ ಅಜೆಂಡಾ, ವಿಜಯ್ ಜನಪ್ರಿಯತೆ ಹಾಗೂ ಹೊಸ ಭರವಸೆ ಡಿಎಂಕೆ ಮತಗಳನ್ನು ಸೆಳೆಯುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಸ್ಥಾನದ ಮೇಲೆ ವಿಜಯ್ ಕಣ್ಣು

ಟಿವಿಕಿ ಪಕ್ಷ ಸ್ಥಾಪಿಸಿ ತಮಿಳುನಾಡು ರಾಜಕೀಯದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿರುವ ವಿಜಯ್ ಟಿವಿಕೆಟ್ ಪಕ್ಷದಿಂದ ಮುಖ್ಯಮಂತ್ರಿಯಾಗುವ ಕನಸು ಇಟ್ಟುಕೊಂಡಿದ್ದಾರೆ. ಇದರ ನಡುವೆ ಬಿಜೆಪಿ ಆಫರ್ ಮಾತುಕತೆಯಲ್ಲೂ ತಮಗೆ ಮುಖ್ಯಮಂತ್ರಿ ಸ್ಥಾನ ನೀಡಿದರೆ ಮೈತ್ರಿ ಕುರಿತು ಆಲೋಚಿಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಹಲವು ಮೂಲಗಳ ಮೂಲಕ ವಿಜಯ್ ಹಾಗೂ ಟಿವಿಕೆ ಪಕ್ಷದ ಜೊತೆ ಮೈತ್ರಿಗೆ ಮುಂದಾಗಿದೆ ಎನ್ನಾಲಗುತ್ತಿದೆ. ತಮಿಳುನಾಡಿನಲ್ಲಿನ ರಾಜಕೀಯ ಪರಿಸ್ಥಿತಿ ಅರಿತು ಅದಕ್ಕೆ ತಕ್ಕಂತೆ ದಾಳ ಉರುಳಿಸಲು ಬಿಜೆಪಿ ಮುಂದಾಗಿದೆ. ತಮಿಳುನಾಡು ರಾಜಕೀಯದಲ್ಲಿ ಬಿಜೆಪಿಗೆ ಗಟ್ಟಿಯಾದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ. ಹೀಗಾಗಿ ಟಿವಿಕೆ ಜೊತೆ ಸೇರಿಸಿ ವಿಧಾನಸಭೆ ಚುನಾವಣೆ ಎದುರಿಸಲು ಬಿಜೆಪಿ ಮುಂದಾಗಿದೆ. ತಮಿಳುನಾಡಿನಲ್ಲಿ ಬಿಜೆಪಿ ಆರಂಭಿಕ ಹೆಜ್ಜೆ ಇಡುತ್ತಿದೆ. ಒಂದೆಡೆ ಅಣ್ಣಾಮಲೈ ರೀತಿಯ ಯುವಕನ ನಾಯಕ ಬಿಜೆಪಿಗೆ ವರವಾಗಿದೆ.ಆದರೆ ಸದ್ಯ ಇರುವ ಮೈತ್ರಿಯಲ್ಲಿ ಚುನಾವಣೆ ಎದುರಿಸಿದರೆ ಅಧಿಕಾರ ಗಿಟ್ಟಿಸಿಕೊಳ್ಳುವುದು ಕಷ್ಟ ಎಂಬುದು ಬಿಜೆಪಿಗೆ ಸ್ಪಷ್ಟವಾಗಿ ಗೊತ್ತಿದೆ. ಹೀಗಾಗಿ ವಿಜಯ್ ಜನಪ್ರಯತೆ, ಟಿವಿಕೆಗೆ ಹರಿದು ಬರುತ್ತಿರುವ ಜನಸಾಗರವನ್ನು ಮತಗಳಾಗಿ ಪರಿವರ್ತಿಸಿ, ಎನ್‌ಡಿಎ ತೆಕ್ಕೆಗೆ ಸೇರಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ ಎಂದು ವರದಿಯಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಲವು ಕ್ಷೇತ್ರದಲ್ಲಿ ಡಿಎಂಕೆ ಅಭ್ಯರ್ಥಿಗಳು ಕೆಲವೇ ಕೆಲವು ಮತಗಳ ಅಂತರದಲ್ಲಿ ಗೆದ್ದಿದ್ದರು. ಹೀಗಾಗಿ ವಿಜಯ್ ಜೊತೆಗಿನ ಮೈತ್ರಿ ತಮಿಳುನಾಡು ರಾಜಕೀಯ ಚಿತ್ರಣ ಬದಲಿಸಲಿದೆ ಅನ್ನೋ ಲೆಕ್ಕಾಚಾರ ನಡೆಯುತ್ತಿದೆ. ಅಪಾರ ವಿಜಯ್ ಅಭಿಮಾನಿಗಳ ಪೈಕಿ ಶೇಕಡಾ 2ರಷ್ಟು ಮತಗಳು ಮೈತ್ರಿಗೆ ಬಿದ್ದರೆ ಎನ್‌ಡಿಎ ಅಧಿಕಾರ ಗಿಟ್ಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಡಿ.ಕೆ.ಶಿವಕುಮಾರ್ ಭಧ್ರಕೋಟೆಯಲ್ಲಿರೋ ಒಡಿಶಾ ಶಾಸಕರಿಗೆ ಆಪರೇಷನ್ ಕಮಲ; ಬ್ಲ್ಯಾಂಕ್ ಚೆಕ್ ಸಮೇತ ಸಿಕ್ಕಿಬಿದ್ದ ಮುಖಂಡರು!
'ಚುಂಚುಶ್ರೀ ಎಲ್ಲೆಲ್ಲೋ ದಾರಿ ತಪ್ಪುತ್ತಿದ್ದಾರೆ...' ವಿವಾದ ಸೃಷ್ಟಿಸಿದ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಹೆಚ್‌ಡಿಕೆ ಹೇಳಿದ್ದೇನು?