RR ನಗರ ಬೈ ಎಲೆಕ್ಷನ್: ಮುನಿರತ್ನ ಗೆಲುವಿಗೆ ಬಿಜೆಪಿಯಿಂದ ಮಾಸ್ಟರ್ ಪ್ಲಾನ್...!

By Suvarna NewsFirst Published Oct 20, 2020, 8:52 PM IST
Highlights

ಬೆಂಗಳೂರಿನ ರಾಜರಾಜೇಶ್ವರಿ ನಗರ ಬೈ ಎಲೆಕ್ಷನ್ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮೂರು ಪಕ್ಷಗಳ ಗೆಲುವಿಗಾಗಿ ರಣತಂತ್ರ ರೂಪಿಸುತ್ತಿವೆ.

ಬೆಂಗಳೂರು, (ಅ.20): ಆರ್.ಆರ್.ನಗರ ಉಪಚುನಾವಣೆ ಗೆ ಲ್ಲಲು ಬಿಜೆಪಿ ವಾರ್ಡ್ ಮಟ್ಟದ ಉಸ್ತುವಾರಿಗಳ ನೇಮಕ ಮಾಡಿದೆ.

ರಾಜರಾಜೇಶ್ವರಿ ವಿಧಾನಸಭಾ ಉಪಚುನಾವಣೆಯ ಸಂಪೂರ್ಣ ಉಸ್ತುವಾರಿಯನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ್ ಲಿಂಬಾವಳಿ ಹಾಗೂ ಸಚಿವ ಆರ್.ಅಶೋಕ್ ಅವರಿಗೆ ವಹಿಸಲಾಗಿದೆ.

RR ನಗರ ಬೈ ಎಲೆಕ್ಷನ್: ಅಭ್ಯರ್ಥಿವಿರುದ್ಧ ಅಕ್ರಮ ವೋಟರ್ ಕಾರ್ಡ್ ಆರೋಪ

ಇನ್ನು ಇಂದು (ಮಂಗಳವಾರ) ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ 9 ವಾರ್ಡ್‌ಗಳಿಗೂ ಸಚಿವ ಹಾಗೂ ಶಾಸಕರುಗಳನ್ನು ಉಸ್ತುವಾರಿಗಳಾಗಿ ನೇಮಿಸಲಾಗಿದೆ.

ಯಾವ ವಾರ್ಡ್‌ಗೆ ಯಾರು ಉಸ್ತುವಾರಿ?
* ಕೊಟ್ಟಿಗೆಪಾಳ್ಯ- ಸಚಿವ ವಿ.ಸೋಮಣ್ಣ
* ಲಗ್ಗೆರೆ- ಸಚಿವರಾದ ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ. ಭೈರತಿ ಬಸವರಾಜು
* ಜ್ಞಾನಭಾರತಿ ವಾರ್ಡ್- ಸಚಿವ ಎಸ್‌.ಟಿ ಸೋಮಶೇಖರ್
* ರಾಜರಾಜೇಶ್ವರಿ ನಗರ ವಾರ್ಡ್- ಶಾಸಕ ರವಿ ಸುಬ್ರಹ್ನಣ್ಯ ಹಾಗೂ ಸಂಸದ ತೇಜಸ್ವಿ ಸೂರ್ಯ
* HMT ವಾರ್ಡ್-ಮಾಜಿ ಶಾಸಕ ಮುನಿರಾಜು
* ಜಾಲಹಳ್ಳಿ ವಾರ್ಡ್- ಎಸ್.ಆರ್.ವಿಶ್ವನಾಥ್
* ಜೆ.ಪಿ.ಪಾರ್ಕ್- ನಂದೀಶ್ ರೆಡ್ಡಿ
* ಯಶವಂತಪುರ- ಸತೀಶ್ ರೆಡ್ಡಿ
* ಲಕ್ಷ್ಮೀದೇವಿ ನಗರ- ಪೆಂಡಿಂಗ್

ಬಿಜೆಪಿಯಿಂದ  ಮುನಿರತ್ನ, ಕಾಂಗ್ರೆಸ್‌ನಿಂದ ದಿ.ಡಿಕೆ ರವಿ ಅವರ ಪತ್ನ ಕುಸುಮಾ ಹಾಗೂ ಜೆಡಿಎಸ್‌ನಿಂದ ಕೃಷ್ಣಮೂರ್ತಿ ಅವರು ಆರ್.ಆರ್. ನಗರ ಬೈ ಎಲೆಕ್ಷನ್‌ಗೆ ಅಖಾಡದಲ್ಲಿದ್ದಾರೆ.

ಇನ್ನು ತುಮಕೂರು ಜಿಲ್ಲೆಯ ಶಿರಾ ಮತ್ತು ಬೆಂಗಳೂರಿನ ಆರ್.ಆರ್.ನಗರ ಕ್ಷೇತ್ರಗಳಿಗೆ ನ.03ರಂದು ಮತದಾನ ನಡೆಯಲಿದ್ದು, ನ.10ಕ್ಕೆ ಫಲಿತಾಂಶ ಪ್ರಕಟವಾಗಲಿದೆ. 

click me!