ಚುನಾವಣೆ : ಜೋಶಿ, ಅಶ್ವತ್ಥ್, ರಾಜೀವ್‌ ಚಂದ್ರಶೇಖರ್‌ಗೆ ಮಹತ್ವದ ಹೊಣೆ

By Kannadaprabha NewsFirst Published Feb 3, 2021, 8:28 AM IST
Highlights

ಶೀಘ್ರದಲ್ಲೇ ಚುನಾವಣೆ ಎದುರಿಸುತ್ತಿರುವ ನಾಲ್ಕು ರಾಜ್ಯಗಳ ಜವಾಬ್ದಾರಿಯನ್ನು ಬಿಜೆಪಿ ನಾಯಕರಿಗೆ ವಹಿಸಿದೆ. ಚುನಾವಣಾ ಪ್ರಭಾರಿ ಹಾಗೂ ಸಹ ಪ್ರಭಾರಿಗಳನ್ನು ನೇಮಿಸಿದೆ.

ನವದೆಹಲಿ (ಫೆ.03): ಬೇಸಿಗೆಯಲ್ಲಿ ಚುನಾವಣೆ ಎದುರಿಸುತ್ತಿರುವ ಅಸ್ಸಾಂ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗೆ ಚುನಾವಣಾ ಪ್ರಭಾರಿ ಹಾಗೂ ಸಹಪ್ರಭಾರಿಗಳನ್ನು ಬಿಜೆಪಿ ನೇಮಕ ಮಾಡಿದ್ದು, ಕರ್ನಾಟಕ ಮೂಲದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಹಾಗೂ ಬಿಜೆಪಿ ರಾಷ್ಟ್ರೀಯ ವಕ್ತಾರರೂ ಆದ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ ಅವರಿಗೆ ಮಹತ್ವದ ಹೊಣೆ ವಹಿಸಲಾಗಿದೆ.

ಬಿಜೆಪಿ ಜೊತೆ ಜೆಡಿಎಸ್ ಹೋಗುತ್ತಿರುವುದಕ್ಕೆ ಕೊನೆಗೂ ಕಾರಣ ಬಿಚ್ಚಿಟ್ಟ ಕುಮಾರಣ್ಣ

ಜೋಶಿ ಅವರನ್ನು ಕೇರಳದ ಚುನಾವಣಾ ಪ್ರಭಾರಿ ಎಂದು ಹಾಗೂ ಡಾ.ಅಶ್ವತ್ಥ ಅವರನ್ನು ಸಹ-ಪ್ರಭಾರಿ ಎಂದು ನೇಮಕ ಮಾಡಲಾಗಿದೆ. ಇದೇ ವೇಳೆ ರಾಜೀವ್‌ ಚಂದ್ರಶೇಖರ್‌ ಅವರಿಗೆ ಪುದುಚೇರಿ ಚುನಾವಣಾ ಸಹ-ಪ್ರಭಾರಿಯನ್ನಾಗಿ ಮಾಡಿ ಮಂಗಳವಾರ ಸಂಜೆ ಪ್ರಕಟಣೆ ಹೊರಡಿಸಲಾಗಿದೆ.

ರಾಜೀನಾಮೆ ನೀಡಿದ 24 ಗಂಟೆಯಲ್ಲೇ ಶಾಸಕ ಬಿಜೆಪಿಗೆ ಸೇರ್ಪಡೆ..! ..

ಎಲ್‌ಡಿಎಫ್‌ ಹಾಗೂ ಯುಡಿಎಫ್‌ ಪ್ರಾಬಲ್ಯದ ಕೇರಳದಲ್ಲಿ ಬೇರೂರಲು ಬಿಜೆಪಿ ಯತ್ನಿಸುತ್ತಿದೆ. ಪುದುಚೇರಿಯಲ್ಲೀ ಕಾಂಗ್ರೆಸ್ಸನ್ನು ಮಣಿಸುವ ಉದ್ದೇಶ ಹೊಂದಿದೆ. ಹೀಗಾಗಿ ಜೋಶಿ, ಡಾ.ಅಶ್ವತ್ಥ ಹಾಗೂ ಅವರಿಗೆ ನೀಡಿದ ಹೊಣೆಗಾರಿಕೆ ಮಹತ್ವ ಪಡೆದಿದೆ.

click me!