ಬೀದರ್: ಕಾಂಗ್ರೆಸ್‌ ಎಂಎಲ್‌ಸಿ ಚಂದ್ರಶೇಖರ ಪಾಟೀಲ್‌ಗೆ ಗಂಡಸ್ತನದ ಸವಾಲ್‌ ಹಾಕಿದ ಬಿಜೆಪಿಗರು..!

By Girish GoudarFirst Published Sep 11, 2024, 3:41 PM IST
Highlights

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಟೈರ್ ಬೆಂಕಿ ಇಟ್ಟು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.

ಬೀದರ್(ಸೆ.11): ಬಿಜೆಪಿ ಶಾಸಕ ಸಿದ್ದು ಪಾಟೀಲ್‌ಗೆ ಕಾಂಗ್ರೆಸ್ ಎಂಎಲ್ಸಿ ಚಂದ್ರಶೇಖರ್ ಪಾಟೀಲ್ ಬೆದರಿಕೆಯನ್ನ ಖಂಡಿಸಿ ಹಿನ್ನೆಲೆಯಲ್ಲಿ ಇಂದು(ಬುಧವಾರ) ಹುಮನಾಬಾದ್ ಪಟ್ಟಣದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. 

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ನೇತೃತ್ವದಲ್ಲಿ ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪ್ರತಿಭಟನಾ ನಿರತ ಬಿಜೆಪಿ ಕಾರ್ಯಕರ್ತರು ಟೈರ್ ಬೆಂಕಿ ಇಟ್ಟು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್‌ನ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಸಹೋದರರಾದ ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್, ಭೀಮು ಪಾಟೀಲ್ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದರು. 

Latest Videos

ಬೀದರ್‌: ಶಿಕ್ಷಕರು ನಮ್ಮ ಅಂಗಾಂಗ ಮುಟ್ತಾರೆ, ವಿರೋಧಿಸಿದ್ರೆ ಹಾಲ್ ಟಿಕೆಟ್ ಕೊಡಲ್ಲ ಅಂತಾರೆ, ವಿದ್ಯಾರ್ಥಿನಿಯರ ಅಳಲು..!

ಇತ್ತೀಚೆಗೆ ನಡೆದ ಕಾಂಗ್ರೆಸ್ ಸಮಾರಂಭದಲ್ಲಿ ಬಿಜೆಪಿ ಶಾಸಕ ಸಿದ್ದು ವಿರುದ್ಧ ಚಂದ್ರಶೇಖರ್ ಪಾಟೀಲ್ ನಾಲಿಗೆ ಹರಿಬಿಟ್ಟಿದ್ದರು. ಹುಮನಾಬಾದ್ ಶಾಸಕ ಸಿದ್ದು ಪಾಟೀಲ್ ಪಾಕೀಟ್ ಎಂಎಲ್ಎ ಎಂದು ಕರೆದಿದ್ದರು. ಚಂದ್ರಶೇಖರ್ ಅವನು ಏನಾದರೂ ಮಾತಾಡಿದರೆ ನಾಲಿಗೆ ಕತ್ತರಿಸುತ್ತೇನೆ, ಸ್ವಲ್ಪ ಸಮಯ ಕೊಡ್ರಿ ಎಂದಿದ್ದ ಕಾಂಗ್ರೆಸ್ ಎಂಎಲ್‌ಸಿ... ಈ ಬಗ್ಗೆ ಸಂಬಂಧ ಶಾಸಕ ಸಿದ್ದು ಪಾಟೀಲ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. 

ಎಂಎಲ್‌ಸಿ ಚಂದ್ರಶೇಖರ್ ಪಾಟೀಲ್ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ ಕೂಡಲೇ ಪೊಲೀಸ್ ಇಲಾಖೆ ಚಂದ್ರಶೇಖರ್ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮಕ್ಕೆ ಮುಂದಾಗಬೇಕು ಎಂದು ಕಿಡಿ ಕಾರಿದರು. 

'ಆ ಪಾಕೀಟ್ ಎಂಎಲ್‌ಎ ನಾಲಗೆ ಕತ್ತರಿಸುತ್ತೇನೆ'; ಬಿಜೆಪಿ ಶಾಸಕ ಸಿದ್ದು ಪಾಟೀಲ್ ವಿರುದ್ಧ ಕಾಂಗ್ರೆಸ್ ಎಂಎಲ್ಸಿ

ಪ್ರತಿಭಟನೆಯಲ್ಲಿ ಈಶ್ವರ್ ಸಿಂಗ್ ಠಾಕೂರ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು, ಶಾಸಕ ಸಿದ್ದು ಪಾಟೀಲ್ ಅಭಿಮಾನಿಗಳು ಭಾಗಿಯಾಗಿದ್ದರು. 

ಪ್ರತಿಭಟನೆ ಬಳಿಕ ಹುಮನಾಬಾದ್ ಮನೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಿದ್ದು ಪಾಟೀಲ್, ಚಂದ್ರಶೇಖರ್ ಪಾಟೀಲ್ ಈಗ ನಾನು ಯಾರ ಹೆಸರು ಹೇಳಿಲ್ಲ ಎನ್ನುತ್ತಿದ್ದಾರೆ ಹಾಗಾದರೇ ಶಾಸಕನ ನಾಲಿಗೆ ಕತ್ತರಿಸುತ್ತೇನೆಂದು ಯಾರಿಗೆ ಹೇಳಿದಾರೆಂದು ಗಂಡಸ್ತನ ಇದ್ದರೇ ಬಹಿರಂಗ ಪಡಿಸಲಿ. ರಾಜ್ಯದ 224 ಶಾಸಕರ ಪೈಕಿ ಯಾರ ನಾಲಿಗೆ ಕತ್ತರಿಸುತ್ತೇನೆಂದು ಚಂದ್ರಶೇಖರ್ ಹೇಳಿದಾರೆಂದು ಹೇಳಲಿ, ಪೊಲೀಸ್ ಇಲಾಖೆ ಕಾಂಗ್ರೆಸ್ ನಾಯಕರ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ಕೂಡಲೇ ಇವರ ವಿರುದ್ಧ ಕ್ರಮ ಆಗದಿದ್ದರೇ ಮುಂದಿನ ದಿನಗಳಲ್ಲಿ ಹೋರಾಟ ಬೇರೆ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. 

click me!