ಬಿಜೆಪಿ ಸರ್ಕಾರದ ಹಗರಣಗಳ ತನಿಖೆಗೆ ಪರಂ ನೇತೃತ್ವದ ಸಮಿತಿ ರಚನೆ

By Kannadaprabha NewsFirst Published Sep 11, 2024, 9:06 AM IST
Highlights

ಎರಡು ತಿಂಗಳಲ್ಲಿ ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಸಿಎಂ ಸಿದ್ದರಾಮಯ್ಯ 
 

ಬೆಂಗಳೂರು(ಸೆ.11): ಮುಡಾ ಪ್ರಕರಣದಲ್ಲಿ ಸಿಎಂ ಇಕ್ಕಟ್ಟಿಗೆ ಸಿಲುಕಿಸಿ, ರಾಜೀ ನಾಮೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್‌ ತಂತ್ರಕ್ಕೆ ಪ್ರತಿತಂತ್ರವಾಗಿ ವಿಪಕ್ಷಗಳ ಅಧಿಕಾರವಧಿಯ ಹಗರಣಗಳ ತನಿಖೆಗೆ ಡಾ.ಜಿ. ಪರಮೇಶ್ವರ್ ನೇತೃತ್ವದಲ್ಲಿ ಐವರು ಸಚಿವರ ಸಮಿತಿ ರಚಿಸಲಾಗಿದೆ. 

ಈ ಬಗ್ಗೆ ಸಿದ್ದರಾಮಯ್ಯ ಅವರು, ಮಂಗಳವಾರ ಅಧಿಕೃತ ಆದೇಶಿಸಿ ಎರಡು ತಿಂಗಳಲ್ಲಿ ಸರ್ಕಾರದ ಮತ್ತು ತನಿಖಾ ಸಂಸ್ಥೆಗಳ ಹಂತದಲ್ಲಿ ಚಾಲ್ತಿಯಲ್ಲಿರುವ ವಿವಿಧ ಹಗರಣಗಳ ತನಿಖೆಗಳ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. 

Latest Videos

ಬೆಂಗಳೂರು ರಿಯಲ್ ಎಸ್ಟೇಟ್ ಮಾಫಿಯಾ: ಬಿಡಿಎ, ಬಿಎಂಆರ್‌ಡಿಎ ಹೆಸರಿನಲ್ಲಿ 3,000ಕ್ಕೂ ಅನಧಿಕೃತ ಬಡಾವಣೆ!

ಸಮಿತಿಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷರಾಗಿದ್ದು, ಸಚಿವರಾದ ಎಚ್.ಕೆ.ಪಾಟೀಲ್, ಕೃಷ್ಣಬೈರೇಗೌಡ, ಪ್ರಿಯಾಂಕ್ ಖರ್ಗೆ, ಸಂತೋಷ್ ಎಸ್.ಲಾಡ್‌ರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಈ ಕುರಿತು ಮಾತನಾಡಿದ ಸಚಿವ ಪರಂ, ಬಿಜೆಪಿ ಅವಧಿಯ ಹಗರಣಗಳು ಹೊರಬರಲಿವೆ. 2 ತಿಂಗಳೊಳಗೆ ವರದಿ ನೀಡಲು ಹೇಳಿದ್ದಾರೆ. 20 25 ಹಗರಣಗಳ ಪಟ್ಟಿ ಮಾಡಿದ್ದೇವೆ. ದ್ವೇಷದ ರಾಜಕಾರಣ ಬೇಡ ಎಂಬುದು ನಮ್ಮ ಉದ್ದೇಶ ಎಂದರು.

click me!