ಕರ್ನಾಟಕದ ರಾಜಕಾರಣ ಬಿಸಿ ಏರಲು ಕಾರಣವಾದ ಸುದ್ದಿ ದೆಹಲಿಯಿಂದ ಬಂತು!

By Suvarna News  |  First Published Sep 4, 2020, 9:01 PM IST

ದೆಹಲಿಯಿಂದ ಹೊರಬಿದ್ದ ಸುದ್ದಿ/ ರಾಜ್ಯದಲ್ಲಿ ರಾಜಕಾರಣದ ಚಟುವಟಿಕೆ ಬಿರುಸು/ ಬಾಕಿ ಇರುವ ಮೂರರಲ್ಲಿ ಯಾವ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ? 


ನವದೆಹಲಿ(ಸೆ. 04)  ಚುನಾವಣಾ ಆಯೋಗ ನೀಡಿದ ಸುದ್ದಿಯಿಂದ ರಾಜ್ಯದಲ್ಲಿಯೂ ರಾಜಕಾರಣದ ಚಟುವಟಿಕೆಗಳು ಬಿರುಸುಗೊಂಡಿವೆ. 
 
ಬಿಹಾರದ ವಿಧಾನಸಭಾ ಚುನಾವಣೆಯೊಂದಿಗೆ ದೇಶಾದ್ಯಂತ ಬಾಕಿ ಇರುವ ಒಂದು ಲೋಕಸಭಾ ಕ್ಷೇತ್ರ ಸೇರಿ 15 ರಾಜ್ಯಗಳ  64 ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮಾಡಿ ಮುಗಿಸಲು ಚುನಾವಣಾ ಆಯೋಗ ಸಿದ್ಧತೆ ಮಾಡಿಕೊಂಡಿದೆ.

ನವೆಂಬರ್ 29 ಕ್ಕೆ ಬಿಹಾರ ವಿಧಾನಸಭೆ ಅವಧಿ ಅಂತ್ಯವಾಗಲಿದೆ.  ಮಧ್ಯ ಪ್ರದೇಶದಲ್ಲಿ ಅತಿ ಹೆಚ್ಚಿನ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.  ಹಾಗಾದರೆ ಕರ್ನಾಟಕದ ಯಾವ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ?

Tap to resize

Latest Videos

ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಪ್ರಭಾವಿ ಶಾಸಕನ ಮನೆಯಲ್ಲಿ ಡ್ರಗ್ಸ್ ಆಟ

ಶಿರಾ:  ತುಮಕೂರಿನ ಶಿರಾ ಕ್ಷೇತ್ರದ ಜೆಡಿಎಸ್‌ ಶಾಸಕ, ಮಾಜಿ ಸಚಿವ ಬಿ. ಸತ್ಯನಾರಾಯಣ  ಅನಾರೋಗ್ಯದಿಂದ ನಿಧನರಾಗಿರುವ ಕಾರಣಕ್ಕೆ ಚುನಾವಣೆ ನಡೆಯುವುದು ಪಕ್ಕಾ ಆಗಿದೆ.  

ರಾಜರಾಜೇಶ್ವರಿ-ಮಸ್ಕಿ ಕತೆ ಏನು?  ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ 2018 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರತಾಪ್ ಗೌಡ ಪಾಟೀಲ್ ಅವರು ಕೇವಲ 213 ಮತಗಳ ಅಂತರದಿಂದ  ಗೆದ್ದಿದ್ದರು. ಬಿಜೆಪಿಯ ಪರಾಜಿತ ಅಭ್ಯರ್ಥಿ ಆರ್.ಬಸವರಾಜು ಅವರು ನ್ಯಾಯಾಲಯದ ಮೆಟ್ಟಿಲೇರಿ ಚುನಾವಣೆಯಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಆರೋಪ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಚುನಾವಣೆ ನಡೆಯುವುದು ಅನುಮಾನ.

ಇನ್ನು ರಾಜರಾಜೇಶ್ವರಿ ನಗರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುನಿರತ್ನ ಅವರು ಗೆದ್ದಿದ್ದರು. ಆದರೆ ಚುನಾವಣೆ ಸಮಯದಲ್ಲಿ ಕ್ಷೇತ್ರದಲ್ಲಿ ನಕಲಿ ಮತದಾರರ ಪಟ್ಟಿ ಸಿಕ್ಕಿತ್ತು, ಈ ಬಗ್ಗೆ ಮುನಿರತ್ನ ವಿರುದ್ಧ ದೂರು ದಾಖಲಾಗಿತ್ತು. ಇತ್ತೀಚೆಗೆ ಮುನಿರತ್ನ ಹೆಸರು ಚಾರ್ಜ್‌ಶೀಟ್‌ನಿಂದ ಕೈಬಿಡಲಾಗಿತ್ತು. ಆದರೆ ಬಿಜೆಪಿಯ ತುಳಸಿ ಮುನಿರಾಜು ಗೌಡ ಮನವಿಯಂತೆ ಮುನಿರತ್ನ ವಿರುದ್ಧ ತನಿಖೆ ಜಾರಿಯಲ್ಲಿದೆ. ಈ ಪ್ರಕರಣ ಸಹ ನ್ಯಾಯಾಲಯದಲ್ಲಿಯೇ ಇದ್ದು ಚುನಾವಣೆ ಅನುಮಾನ.

ಬದಲಾದ ರಾಜಕಾರಣದ ವಾತಾವರಣದಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಆರ್‌ ಆರ್ ನಗರ ಶಾಸಕರಾಗಿದ್ದ ಮುನಿರತ್ನ ಮತ್ತು ಮಸ್ಕಿ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್  ಕಾಂಗ್ರೆಸ್ ತೊರೆದು ಬಿಜೆಪಿಯನ್ನು ಸೇರಿದ್ದಾರೆ.  ಹದಿನೇಳು ಶಾಸಕರ ಕ್ರಾಂತಿಯ ಪರಿಣಾಮ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು ವರ್ಷ ಕಳೆದಿದೆ. 

click me!