ಸದಾ ಕೆಲಸದಲ್ಲಿ ನಿರತರಾಗಿದ್ದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಇಂದು ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಆಪ್ತರ ಜೊತೆ ಖಾಸಗಿ ಹೋಟೆಲ್‌ನಲ್ಲಿ ಭೋಜನ ಸೇವಿಸಿದರು.
ಬೆಂಗಳೂರು, (ಸೆ.2): ಕೊರೋನಾ, ಪ್ರವಾಹದಿಂದ ಸದಾ ಒತ್ತಡದಲ್ಲಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಬಹಳ ದಿನಗಳ ನಂತರ ಸಚಿವರ ಮತ್ತು ಶಾಸಕರ ಜೊತೆ ಲಂಚ್ ಮೀಟಿಂಗ್ ಮಾಡಿದ್ದಾರೆ.
ಕೊರೋನಾ ಸೋಂಕಿನಿಂದ ಗುಣಮುಖರಾದ ಬಳಿಕ ಇದೇ ಮೊದಲ ಬಾರಿಗೆ ಇಂದು (ಬುಧವಾರ) ಯಡಿಯೂರಪ್ಪ ಅವರು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಆಪ್ತರ ಜೊತೆ ಭೋಜನ ಸೇವಿಸಿದರು.
ಹಳ್ಳಿಯಲ್ಲಿ ಪಕ್ಷ ಸಂಘಟೆ ಮಾಡಿದ ಬಿಜೆಪಿ ನಾಯಕ ಈಗ ದಿಲ್ಲಿ ಪ್ರತಿನಿಧಿ...!
ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಎಸ್ ಆರ್ ವಿಶ್ವನಾಥ್, ಎಂ ಪಿ ರೇಣುಕಾಚಾರ್ಯ, ಕರ್ನಾಟಕ ಜಲಭವನ ಮಂಡಳಿ ಅಧ್ಯಕ್ಷ ರಾಜುಗೌಡ, ಶಂಕರ್ ಪಾಟೀಲ್ ಮುನೇನಕೊಪ್ಪ ಸಿಎಂ ಜೊತೆ ಭೋಜನ ಕೂಟದಲ್ಲಿ ಭಾಗಿಯಾದ್ದರು.
ಈ ವೇಳೆ ಹಲವು ರಾಜ್ಯ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಕೊರೋನಾದಿಂದ ಗುಣಮುಖರಾದ ನಂತರ ಹೊರಗೆಲ್ಲೂ ತೆರಳದೇ ನಿವಾಸದಲ್ಲೇ ಇದ್ದರು. ಆಪ್ತರ ಜೊತೆ ಖಾಸಗಿಯಾಗಿ ಕಾಲ ಕಳೆದಿರಲಿಲ್ಲ. ಹಾಗಾಗಿ, ಇಂದು ಆಪ್ತರ ಜೊತೆ ಭೋಜನ ಕೂಟದ ನೆಪದಲ್ಲಿ ಸಿಎಂ ಕೆಲಕಾಲ ಮಾತುಕತೆ ನಡೆಸಿದರು ಎಂದು ತಿಳಿದುಬಂದಿದೆ.