ಹೈಕೋರ್ಟ್ ಖಡಕ್ ಸೂಚನೆ: ಡಿಕೆಶಿ, ರಾಮುಲು, ಶಾಸಕ ಪರಮೇಶ್ವರ ನಾಯ್ಕ್‌ಗೆ ಸಂಕಷ್ಟ

By Suvarna NewsFirst Published Jun 23, 2020, 3:25 PM IST
Highlights

ಹೈಕೋರ್ಟ್‌ ಮಹತ್ವದ ಸೂಚನೆ ಹಿನ್ನೆಲೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್, ಸಚಿವ ಶ್ರೀರಾಮುಲು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಂಕಷ್ಟ ಶುರುವಾಗಿದೆ.

ಬೆಂಗಳೂರು, (ಜೂನ್.23): ಕೊವೀಡ್ 19 ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವ ಜನಪ್ರತಿನಿಧಿಗಳ ವಿರುದ್ಧ ಕ್ರಮಕೈಗೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಇದರಿಂದ ಮಾಜಿ ಸಚಿವ, ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್, ಸಚಿವ ಶ್ರೀರಾಮುಲು ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ಗೆ ಸಂಕಷ್ಟ ಶುರುವಾಗಿದೆ.

ಡಿಕೆಶಿ, ಶ್ರೀರಾಮುಲು, ಪರಮೇಶ್ವರ್ ನಾಯ್ಕ್, ರಾಘವೇಂದ್ರ ರಾಜಕುಮಾರ್ ವಿರುದ್ಧ ದೂರು

ನೂರಾರು ಜನಸಂಖ್ಯೆ ಮಧ್ಯೆ ಹಗರಿಬೊಮ್ಮನಹಳ್ಳಿ ಕಾಂಗ್ರೆಸ್ ಶಾಸಕ ಪರಮೇಶ್ವರ ನಾಯ್ಕ್ ಅವರು ಪುತ್ರನ ಮದುವೆ ಮಾಡಿ ಲಾಕ್‌ಡೌನ್ ನಿಯಮ ಉಲ್ಲಂಘಿಸಿದ್ರು. ಅಭಿಮಾನಿಗಳಿಂದ ಮೆರವಣಿಗೆ ಮಾಡಿಸಿಕೊಂಡ ಶ್ರೀರಾಮುಲು ಮತ್ತು ಡಿಕೆ ಶಿವಕುಮಾರ್ ಅವರು ಪುತ್ರಿಯ ವಿವಾಹ ಪೂರ್ವ ಕಾರ್ಯಕ್ರಮ ಮಾಡಿ ಮಾರ್ಗಸೂಚಿಸಿ ಉಲ್ಲಂಘಿಸಿದ್ದಾರೆ ಎಂದು ಕೋರ್ಟ್‌ಗೆ ಮೆಮೋ ಸಲ್ಲಿಸಲಾಗಿತ್ತು.

ಇನ್ನು ದಿವಂಗತ ಚಿರು ಸರ್ಜಾ ನಿವಾಸಕ್ಕೆ ತೆರಳಿದ್ದ ನಟ ರಾಘವೇಮದ್ರ ರಾಜಕುಮಾರ್ ಅವರು ಸಾಮಾಜಿಕ ಅಂತರ ಕಾಯ್ದುಕೊಮಡಿಲ್ಲವೆಂದು ಅವರ ವಿರುದ್ಧವೂ ಕೋರ್ಟ್‌ಗೆ ಪಿಐಎಲ್ ಸಲ್ಲಿಸಲಾಗಿತ್ತು.

ಹಿರಿಯ ವಕೀಲ ಮೋಹನ್ ಎನ್ನುವರು ಸಲ್ಲಿಸಿದ್ದ ಅರ್ಜಿಯನ್ನು ಇಂದು (ಮಂಗಳವಾರ) ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್,ಉಲ್ಲಂಘನೆ ಮಾಡಿರುವ ಜನಪ್ರತಿನಿಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಕೋರ್ಟ್‌ ಹೇಳಿದ್ದೇನು..?

ಲಾಕ್ ಡೌನ್ ನಿಯಮ‌ ಉಲ್ಲಂಘನೆ ಬಗ್ಗೆ ಸಾರ್ವಜನಿಕರು ವಾಟ್ಸಪ್ , ದೂರವಾಣಿ ಕರೆ ಮೂಲಕ ದೂರು ಸಲ್ಲಿಸಲು ಒಂದು ವಾರದೊಳಗೆ ಗ್ರಿವೇನ್ಸಸ್ ರಿಡ್ರೆಸಲ್ ಕಾರ್ಯತಂತ್ರ ರೂಪಿಸಬೇಕು.

ದಾಖಲಾಗುವ ದೂರು ಆಧರಿಸಿ ಪೋಲೀಸರು ಸ್ಥಳೀಯ ನ್ಯಾಯಾಲಯದಲ್ಲಿ ವಿಪತ್ತು ನಿರ್ವಹಣಾ ಕಾಯಿದೆ ಅಡಿ ದೂರು ದಾಖಲಿಸಬೇಕು . ಅಲ್ಲದೆ ಈ ಆದೇಶ ಪಾಲನೆ ಬಗ್ಗೆ ಎರಡು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸಿ. ಇನ್ನು ಸಾರ್ವಜನಿಕರು ದೂರು ನೀಡಲು ವ್ಯವಸ್ಥೆ ಮಾಡುವಂತೆರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

"

click me!