Mamata Banerjee ಗೆ ಬಿಗ್ ಶಾಕ್, ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಭರ್ಜರಿ ಗೆಲುವು!

By Suvarna NewsFirst Published Sep 19, 2022, 6:17 PM IST
Highlights

ಪಶ್ಚಿಮ ಬಂಗಾಳದಲ್ಲಿ ಯಾವುದೇ ಚುನಾವಣೆ ನಡೆದರೂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಮೇಲುಗೈ ಸಾಧಿಸುವುದು ಸರ್ವೆ ಸಾಮಾನ್ಯ. ಆದರೆ ಇದೇ ಮೊದಲ ಬಾರಿಗೆಗೆ ದೀದಿಗೆ ಬಿಜೆಪಿ ಶಾಕ್ ನೀಡಿದೆ. ನಂದಿಗ್ರಾಮದ ಸ್ಥಳೀಯ ಚುನಾವಣೆಯಲ್ಲಿ 12 ಸ್ಥಾನಗಳ ಪೈಕಿ 11 ಸ್ಥಾನ ಬಿಜೆಪಿ ಪಾಲಾಗಿದೆ. ಕೇವಲ 1 ಸ್ಥಾನ ಟಿಎಂಸಿ ಗೆದ್ದುಕೊಂಡಿದೆ.
 

ಕೋಲ್ಕತಾ(ಸೆ.19): ಪಶ್ಚಿಮ ಬಂಗಾಳದಲ್ಲಿ ಪ್ರತಿ ದಿನ ಟಿಎಂಸಿ ವರ್ಸಸ್ ಬಿಜೆಪಿ ನಡುವೆ ಜಟಾಪಟಿ ನಡೆಯುತ್ತಲೇ ಇದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಇತ್ತ ಅಧಿಕಾರ ಉಳಿಸಿಕೊಳ್ಳಲು ಸಿಎಂ ಮಮತಾ ಬ್ಯಾನರ್ಜಿ ಕೂಡ ಹೋರಾಟ ನಡೆಸುತ್ತಿದ್ದಾರೆ. ಬಂಗಾಳದಲ್ಲಿ ಯಾವುದೇ ಚುನಾವಣೆ ನಡೆದರೂ ಟಿಎಂಸಿಗೆ ಮೇಲುಗೈ ಸಾಮಾನ್ಯ. ಈ ಹಿಂದಿನ ವಿಧಾನಸಭಾ, ಲೋಕಸಭಾ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ಆದರೆ ಇದೇ ಮೊದಲ ಬಾರಿಗೆ ನಂದಿಗ್ರಾಮದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನ ಗೆಲ್ಲುವ ಮೂಲಕ ಭಾರಿ ಯಶಸ್ಸು ಪಡೆದುಕೊಂಡಿದೆ. ಇತ್ತ ಟಿಎಂಸಿ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ನಂದಿಗ್ರಾಮದ ಬೇಕುತಿ ಸಮಾಬೇ ಕೃಷಿ ಸಮಿತಿ ಕಾಪರೇಟೀವ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಭಾರಿ ಮೇಲುಗೈ ಸಾಧಿಸಿದೆ. ಇದು ತೃಣಮೂಲ ಕಾಂಗ್ರೆಸ್ ನಿದ್ದೆಗೆಡಿಸಿದೆ.

ನಂದಿಗ್ರಾಮ(Nandigram) ಬಿಜೆಪಿ ಹಾಗೂ ಟಿಎಂಸಿಗೆ(BJP vs TMC) ಪ್ರತಿಷ್ಠಿತ ಕಣ. ಕಾರಣ ಟಿಎಂಸಿ ತೊರೆದು ಬಿಜೆಪಿ ಸೇರಿದ ಪ್ರಮುಖ ನಾಯಕ ಸುವೇಂಧು ಅಧಿಕಾರಿ(Suvendu Adhikari) ಇದೇ ನಂದಿಗ್ರಾಮದಿಂದ ಕಳೆದ ವಿಧಾನಸಭಾ ಚುನಾವಣೆಗೆ(Assembly Election) ಸ್ಪರ್ಧಿಸಿದ್ದರು. ತೀವ್ರ ಜಿದ್ದಾಜಿದ್ದಿನ ಕಣದಲ್ಲಿ ಸುವೆಂಧು ಅಧಿಕಾರಿ 1956 ಮತಗಳ ಅಂತರದಲ್ಲಿ ಪ್ರತಿಸ್ಪರ್ಧಿ ಮಮತಾ ಬ್ಯಾನರ್ಜಿಯನ್ನು ಸೋಲಿಸಿದ್ದರು. ಈ ಕಾರಣಕ್ಕೆ ಬಿಜೆಪಿಗೂ ಹಾಗೂ ತೃಣಮೂಲ ಕಾಂಗ್ರೆಸ್‌ಗೆ(Mamata Banerjee) ನಂದಿಗ್ರಾಮ ಪ್ರತಿಷ್ಠೆಯ ಕಣವಾಗಿದೆ. 

ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!

ನಂದಿಗ್ರಾಮದ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೂಂಡಾಗಳನ್ನು ಕರೆಸಿ ಮತ ಚಲಾಯಿಸಿದೆ. ಈ ಕಾರಣಕ್ಕೆ ನಂದಿಗ್ರಾಮದ(Nandigram Local Election)  ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಕಂಡಿದೆ ಎಂದು ಟಿಎಂಸಿ ಆರೋಪಿಸಿದೆ. ಇತ್ತ ಇದೇ ಆರೋಪವನ್ನು ಬಿಜೆಪಿ ಕೂಡ ಟಿಎಂಸಿ ಮೇಲೆ ಮಾಡಿದೆ. ಪ್ರತಿ ಚುನಾವಣೆಯಲ್ಲಿ ಭಾರಿ ಮುನ್ನಡೆ ಕಾಯ್ದುಕೊಳ್ಳುತ್ತಿದ್ದ ಟಿಎಂಸಿ ಇದೀಗ ಒಂದೊಂದೇ ಕ್ಷೇತ್ರದಲ್ಲಿ ಹಿನ್ನಡೆ ಸಾಧಿಸುವ ಲಕ್ಷಣಗಳು ಗೋಚರಿಸುತ್ತಿದೆ. ಇದು ನಂದಿಗ್ರಾಮದಿಂದ ಆರಂಭಗೊಂಡಿದೆ. ಮುಂಬರುವ ವಿಧಾನಸಭಾ ಚುನಾವಣೆ ಹೊತ್ತಿಗೆ ಟಿಎಂಸಿ ಸ್ಥಾನ ಕಳೆದುಕೊಳ್ಳಲಿದೆ. ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ಬಿಜೆಪಿ ಹೇಳಿದೆ.

ದೀದಿ ಭ್ರಷ್ಟಾಚಾರದ ವಿರುದ್ಧ ಭಾರಿ ಹೋರಾಟ
ತೃಣಮೂಲ ಕಾಂಗ್ರೆಸ್‌ ಆಡಳಿತದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮಂಗಳವಾರ ಹಮ್ಮಿಕೊಂಡಿದ್ದ ವಿಧಾನಸೌಧ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಚೇರಿ ಮುತ್ತಿಗೆ ಕಾರ್ಯಕ್ರಮ ಭಾರೀ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ. ಇದು ಕೋಲ್ಕತಾ ಹಾಗೂ ರಾಜ್ಯದ ಹಲವು ಭಾಗಗಳನ್ನು ರಣಾಂಗಣವನ್ನಾಗಿಸಿದೆ. ರಾರ‍ಯಲಿ ತಡೆಯಲು ಪೊಲೀಸರು ಯತ್ನಿಸಿದ ವೇಳೆ ಭಾರೀ ಗಲಾಟೆ ಏರ್ಪಟಿದ್ದು, ಈ ವೇಳೆ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಸೇರಿ ಹಲವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಹಲವು ಸಂಸದರು, ಶಾಸಕರು ಮತ್ತು ನಾಯಕರು ಗಾಯಗೊಂಡಿದ್ದಾರೆ.

ದೀದಿ ವಿರುದ್ಧ ಬಿಜೆಪಿ ವಾಗ್ದಾಳಿ: ಇಷ್ಟು ಹಣ ಎಲ್ಲಿಂದ ಬಂತು ಎಂದು ಟಿಎಂಸಿ ಹೇಳಲಿ
 

click me!