ಅಸಮಾಧಾನ ಇರುವುದರಿಂದಲೇ ಸದನಕ್ಕೆ ಹೋಗುತ್ತಿಲ್ಲ: ಮಂತ್ರಿಗಿರಿಗಾಗಿ ಮತ್ತೆ ಸಿಡಿದೆದ್ದ ಈಶ್ವರಪ್ಪ

By Suvarna News  |  First Published Sep 19, 2022, 1:31 PM IST

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ನಾಯಕರ ಮೇಲೆ ಅಸಮಾಧಾನಗೊಂಡಿದ್ದು, ಅದನ್ನು ಬಹಿರಂಗವಾಗಿಯೇ ಹೊರಹಾಕಿದ್ದಾರೆ.


ಶಿವಮೊಗ್ಗ, (ಸೆಪ್ಟೆಂಬರ್.19): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಅವರು ಮತ್ತೆ ಮರಳಿ ಮಂತ್ರಿಯಾಗಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಆದ್ರೆ, ಇದಕ್ಕೆ ಸಿಎಂ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಸೇರಿದಂತೆ ಹೈಕಮಾಂಡ್ ನಾಯಕರು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಇದರಿಂದ ಈಶ್ವರಪ್ಪ ಪಕ್ಷದ ನಾಯಕರ ವಿರುದ್ಧ ಬಹಿರಂಗ ಅಮಸಾಧಾನ ಹೊರಹಾಕುತ್ತಿದ್ದಾರೆ. ಅಲ್ಲದೇ ಮಂತ್ರಿ ಸ್ಥಾನ ನೀಡುವುದಕ್ಕೆ ವಿಳಂಬ ಮಾಡುತ್ತಿರುವುದರಿಂದ ಈಶ್ವರಪ್ಪ ಅವರು ಅಧಿವೇಶನಕ್ಕೂ ಬರದೇ ಅಸಮಾಧಾನ ಹೊರಹಾಕಿದ್ದಾರೆ.

ಶಿವಮೊಗ್ಗದಲ್ಲಿ ಇಂದು(ಸೋಮವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ,   ನನಗೆ ಕ್ಲೀನ್ ಚಿಟ್ ಸಿಕ್ಕಿದೆ. ಆದ್ರೆ ಸಚಿವ ಸ್ಥಾನ ಕೊಡುವುದನ್ನು ವಿಳಂಬ ಮಾಡ್ತಿದ್ದಾರೆ. ಇದರಿಂದ ನನಗೆ ಅಸಮಧಾನ ಆಗಿದೆ.ಹೀಗಾಗಿ ನಾನು ಸದನಕ್ಕೆ ಹೋಗುತ್ತಿಲ್ಲ.ಇದನ್ನು ಮುಚ್ಚುಮರೆ ಇಲ್ಲದೇ ಹೇಳ್ತೀನಿ ನಾನು ಎಂದು ಹೇಳುವ ಮೂಲಕ ಅಸಮಾಧಾನ ಇರುವುದನ್ನು ಬಹಿರಂಗವಾಗಿಯೇ ಹೇಳಿದರು.

Tap to resize

Latest Videos

ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಅಸಮಾಧಾನ ಸ್ಫೋಟ: ಸರ್ಕಾರದ ವಿರುದ್ಧ ಈಶ್ವರಪ್ಪ ಕಿಡಿ

ಸೊರಬದಲ್ಲಿ ಶಾಸಕ ಕುಮಾರ್ ಬಂಗಾರಪ್ಪ ವಿರುದ್ಧ ಮೂಲ ಬಿಜೆಪಿಗರು ಆಕ್ರೋಶ ವ್ಯಕ್ತಪಡಿಸಿದ ಬಗ್ಗೆಯೂ ಈಶ್ವರಪ್ಪ ಮಾತನಾಡಿದ್ದು, ಇದು ನನ್ನ ಗಮನಕ್ಕೆ ಬಂದಿದೆ. ಕೆಲವರಿಗೆ ಬೇಸರ ವಿರುತ್ತೆ‌. ಅದು ಹೇಗೆ ಸರಿ ಮಾಡಬೇಕು ಅದನ್ನ ಸರಿ ಮಾಡ್ತೀವಿ. ಒಂದು ಮನೆಯ ಕುಟುಂಬದಲ್ಲೇ ಅಣ್ಣ ತಮ್ಮಂದಿರು ನಡೆಯವ ವ್ಯತ್ಯಾಸವಿರುತ್ತೆ...ನಮ್ಮದು ಪೊಲಿಟಿಕಲ್ ಪಾರ್ಟಿ.ಇದು ಪ್ರಜಾಪ್ರಭುತ್ವ ವ್ಯವಸ್ಥೆ. ಯಾವುದ್ಯಾವುದೋ ಜಾತಿಯಲ್ಲಿ ಇರುತ್ತೇವೆ. ಒಂದು ಸಿದ್ದಾಂತದಲ್ಲಿದ್ದೇವೆ. ಕೆಲವರಿಗೆ ಬೇಸರವಾಗಿದೆ. ಬೆಸರವಾಗಿರೋರಿಗೆ ಬೆಸರ ಮಾಡಿದ್ದಾರೆ ಅಂತ ಹೇಳಿದವರನ್ನ ಕರೆಯಿಸಿ ರಾಜ್ಯಧ್ಯಕ್ಷರು ಮಾತನಾಡ್ತಾರೆ ಎಂದು ಹೇಳಿದರು

ಇನ್ನು ಇದೇ ವೇಳೆ  ಡಿಕೆಶಿ ಅವರಿಗೆ ಇಡಿ ನೋಟಿಸ್ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕಳ್ಳನಿಗೆ ಡೇಟ್ ಕೇಳಿ ಕೋರ್ಟ್ ದಿನಾಂಕ ಕೊಡುತ್ತಾ..? ಕೋರ್ಟ್ ಕೊಡುವ ಡೇಟ್ ಗೆ ಕಳ್ಳ ವಿಚಾರಣೆಗೆ ಹೋಗಬೇಕು ನಾನು ಇದರಲ್ಲಿ ಯಾವುದೇ ರಾಜಕೀಯ ಮಾಡಲ್ಲ.. ಅವರು ವಿಚಾರಣೆಯಲ್ಲಿ ಆರೋಪ ಮುಕ್ತರಾಗಿ ಬರಲಿ ಎಂದು ಹಾರೈಸುತ್ತೇನೆ. ಆದರೆ ಭಾರತ್ ಜೋಡೋ, ಅಧಿವೇಶನ ಸಂದರ್ಭದಲ್ಲಿ ನನಗೆ ತೊಂದರೆ ಕೊಡ್ತಿದ್ದಾರೆ ಎಂದು ಹೇಳೋ ಮಾತು ಸರಿಯಲ್ಲ ಎಂದು ಟಾಂಗ್ ಕೊಟ್ಟರು.

ಕೆಲಸ ಮಾಡಿದವರಿಗೆ ಮಾತ್ರ ಟಿಕೆಟ್ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆಗೆ ಈಶ್ವರಪ್ಪ ಮತನಾಡಿ, ಡಿಕೆಶಿ ಡಿಕ್ಟೇಟರ್‌ಶಿಪ್ ಪ್ರದರ್ಶನ ಮಾಡ್ತಿದ್ದಾರೆ. ಇಷ್ಟು ದಿನ ಕೇಡಿ ಡಿಕೆಶಿ ಆಗಿದ್ರು..ಈಗ ಡಿಕ್ಟೇಟರ್ ಡಿಕೆಶಿ ಆಗಲು ಹೊರಟಿದ್ದಾರೆ. ಡಿಕೆಶಿ ಹೇಳಿಕೆಯನ್ನು ಸ್ವಾಭಿಮಾನ ಕಾಂಗ್ರೆಸಿಗರು ಒಪ್ಪೋದಿಲ್ಲ. ಕಾಂಗ್ರೆಸ್ ನವರು ಅಷ್ಟೇ ಅಲ್ಲ, ಯಾವ ಪಕ್ಷದವರೂ ಒಪ್ಪಲ್ಲ. ಡಿಕೆಶಿ ಕಾಂಗ್ರೆಸ್ ಪಕ್ಷವನ್ನು ಕೊಂಡುಕೊಂಡಿದ್ದಾರಾ? ದೇಶಪಾಂಡೆ ಸಿದ್ದರಾಮೋತ್ಸವದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ರು. ಅದಕ್ಕಾಗಿ ದೇಶಪಾಂಡೆಗೆ ಭಾರತ್ ಜೋಡೋದಲ್ಲಿ ಡಿಕೆಶಿ ಜವಬ್ದಾರಿ ನೀಡಿಲ್ಲ.ಆದರೆ ಇದರು ಅವರ ಆಂತರಿಕ ವಿಚಾರ. ಬಟ್ ಡಿಕೆಶಿಯ ನಿರ್ಧಾರ ಸರಿಯಲ್ಲ. ಏನು ಬಿರಿಯಾನಿ, ಹೆಂಡ, ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬರಬೇಕಾ..? ಕೆಪಿಸಿಸಿ ಅಧ್ಯಕ್ಷ ಡಿಕೆಶಿಯ ಸಂಸ್ಕೃತಿ ಇದೇ ತಾನೇ? ಎಂದು ತಿವಿದರು.

ನಿಮ್ಮ ಮಾತನ್ನು ಕಾಂಗ್ರೆಸ್ ನ ಸ್ವಾಭಿಮಾನಿ ನಾಯಕರು ಒಪ್ಪೋದಿಲ್ಲ. ನೀವು ಒಬ್ಬ ರಾಜ್ಯಾಧ್ಯಕ್ಷರು ಆಗೋದಕ್ಕೂ ಯೋಗ್ಯರಲ್ಲ. ನೀವೊಬ್ಬರು ರಾಜಕೀಯದಲ್ಲಿ ಅನ್ ಫಿಟ್ ಎಂದು ಡಿಕೆಶಿ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

click me!