
ಬೀದರ್, (ಜೂನ್.23): ಗೊಬ್ಬರ ಪೂರೈಕೆಗೆ ವಿಚಾರವಾಗಿ ಕೇಂದ್ರ ಸಚಿವ ಭಗವಂತಗೆ ಕರೆ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಗೊಬ್ಬರ ಕೇಳಿದ್ದಕ್ಕೆ ಖೂಬಾ ಹಾಗೂ ಶಿಕ್ಷಕನ ಮಧ್ಯೆ ವಾಗ್ವಾದ ನಡೆದಿದ್ದು, ಸದ್ಯ ಕೇಂದ್ರ ಸಚಿವರ ಒತ್ತಡದ ಮೇರೆಗೆ ಶಿಕ್ಷಕ ಕುಶಾಲ್ ಸಸ್ಪೆಂಡ್ ಮಾಡಿ ಶಿಕ್ಷಣಾಧಿಕಾರಿ ಆದೇಶ ಹೊರಡಿಸಿದೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಹೆಡಪುರ ಗ್ರಾಮದ ಶಿಕ್ಷಕ ಕುಶಾಲ್ ಪಾಟೀಲ್ ಅವರು ನಮ್ಮ ಊರಲ್ಲಿ ಗೊಬ್ಬರು ಸಿಗುತ್ತಿಲ್ಲ ಸರ್ ಎಂದು ಕೇಂದ್ರ ಸಚಿವ ಭಗವಂತ ಖೂಬಾಗೆ ದೂರವಾಣಿ ಕರೆ ಮಾಡಿ, ಪ್ರಶ್ನೆ ಕೇಳಿದಕ್ಕೆ ನಾನೇನು ಮಾಡಲಿ ಎಂದು ಉಡಾಫೆ ಉತ್ತರ ನೀಡಿದ್ದಾರೆ ಎನ್ನುವ ಆಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಂಸದ ಖೂಬಾದಿಂದ ಬೀದರ್ ಜಿಲ್ಲೆ ಮಾನ ಹರಾಜು: ಈಶ್ವರ ಖಂಡ್ರೆ
ಈಗಾಗಲೇ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯವನ್ನು ಸಹ ಶುರು ಮಾಡಿದ್ದಾರೆ. ಆದರೆ ಗೊಬ್ಬರ ಸಿಗದೆ ರೈತರು ಪರದಾಡುವಂತ್ತಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲ್ ಪಾಟೀಲ್ ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ನೇರವಾಗಿ ಕರೆಮಾಡಿ ಮಾತನಾಡಿದ್ದಾರೆ. ಸಾವಿರಾರು ಜನ ನೌಕರರು ಇದಾರೆ ಅವರು ನೋಡಿಕೊಳ್ಳುತ್ತಾರೆ ಹೋಗು ಅಲ್ಲಿಗೆ. ನನ್ನ ಕೆಲಸ ರಾಜ್ಯಕ್ಕೆ ಕಳಿಸೋದು, ಕಳಿಸಿದ್ದೇನೆ ಅಷ್ಟೇ. ಅಲ್ಲಿನ ಶಾಸಕ ಇದಾನಲ್ಲ, ಸಾವಿರಾರು ಮಂದಿ ನೌಕರರು ಇದಾರೆ. ಅವನ್ನ ಹೋಗಿ ಕೇಳು, ನನಗೆ ಬೇರೆ ಕೆಲಸ ಇಲ್ವಾ ಎಂದು ಖೂಬಾ ಹೊರಟುತನದಿಂದ ಉತ್ತರ ನೀಡಿದ್ದಾರೆ. ಮುಂದಿನ ಬಾರಿ ಹೇಗೆ ಆರಿಸಿ ಬರುತ್ತಿರಿ ನೋಡಿ ಎಂದು ಕರೆ ಮಾಡಿದ್ದ ಶಿಕ್ಷಕ ಹೇಳಿದ್ದು, ಚುನಾವಣೆಯಲ್ಲಿ ಹೇಗೆ ಗೆದ್ದು ಬರಬೇಕೆಂದು ನನಗೆ ಗೊತ್ತಿದೆ. ಅಲ್ಲಿನ ಶಾಸಕರು ಇದಾರೆ, ಅಧಿಕಾರಿಗಳು ಇದಾರೆ ಅವರಿಗೆ ಹೋಗಿ ಕೇಳು. ಭಾರತ ಸರ್ಕಾರದ ಮಂತ್ರಿ ಇದ್ದೇನೆ ರಾಜ್ಯಗಳನ್ನ ಮಾತ್ರ ನೋಡಿಕೊಳ್ಳುತ್ತೇನೆ. ಏನ್ ಮಾಡಿಕೊಳ್ಳುತ್ತಿಯಾ ಮಾಡಿಕೊ ಹೋಗು ಎಂದು ಎನ್ನುವ ಮಾತುಗಳು ವೈರಲ್ ಆಗಿವೆ.
ಸ್ಪಷ್ಟನೆ ಕೊಟ್ಟ ಭಗವಂತ ಖೂಬಾ
ಈ ಕುರಿತಾಗಿ ಖೂಬಾ ಸ್ಪಷ್ಟನೆ ನೀಡಿದ್ದು, ಜೂ.10ರಂದು ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದವರು ರೈತರಲ್ಲ, ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಆ ವ್ಯಕ್ತಿ ತನ್ನನ್ನು 3-4 ಬಾರಿ ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದಾರೆ. ಏನಾದರೂ ಮಹತ್ವದ ಸಮಸ್ಯೆ ಇರಬಹುದೆಂದು ಭಾವಿಸಿ ಕರೆ ಮಾಡಿದ್ದೆ. ಆತ ಗೊಬ್ಬರದ ಬಗ್ಗೆ ಕೇಳುವ ನೆಪದಲ್ಲಿ ವ್ಯಕ್ತಿ ಅವಹೇಳನ ಮಾಡುವಂತಹ ಪದಗಳನ್ನು ಬಳಸಿದ್ದಾನೆಯೇ ಹೊರತು ನಾನಲ್ಲ ಎಂದು ಸಚಿವರು ಹೇಳಿದರು. ಆಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ತನಗೆ ಮತ್ತು ತನ್ನ ಪಕ್ಷಕ್ಕೆ ಮಾ'''ಚ' ಬನಹಾನಿ ಮಾಡಲು ಆಯ್ದ ಭಾಗವನ್ನು ವೈರಲ್ ಮಾಡಲಾಗಿದೆ ಎಂದು ಖೂಬಾ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.