
ರಾಯಚೂರು (ಜ.25): ಭವಾನಿ ರೇವಣ್ಣ ಹಾಸನದ ಟಿಕೆಟ್ ಗೆ ಪಟ್ಟು ಹಿಡಿದಿರುವ ವಿಚಾರವಾಗಿ ಎಲ್ಲರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಅನ್ನೋ ಆಸೆ ಇರುತ್ತದೆ. ಅಲ್ಲಿ ಅನಿವಾರ್ಯ ಇದ್ದಿದ್ದರೇ ನಾನೇ ನಿಲ್ಲಿಸುತ್ತಿದ್ದೆನು. ಆದರೆ, ಅಲ್ಲಿ ಈಗ ಪಕ್ಷದ ಸಮರ್ಥವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಅವರು ಹಾಸನದಲ್ಲಿ ಸ್ಪರ್ಧೆ ಮಾಡುವ ಆಸೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಣ್ಣೀರು ಎರಚಿದ್ದಾರೆ.
ಹಾಸನದಲ್ಲಿ ಈಗ ಬೇರೊಬ್ಬ ಅಭ್ಯರ್ಥಿ ಸ್ಪರ್ಧೆ ಬಗ್ಗೆ ಅನಿವಾರ್ಯತೆ ಇಲ್ಲ. ಈ ಹಿಂದೆ ಅನಿತಾ ಕುಮಾರಸ್ವಾಮಿ ಅವರನ್ನ ಮಧುಗಿರಿಯಲ್ಲಿ ನಿಲ್ಲಿಸಲು ಕಾರಣ ಇತ್ತು. ವೀರಭದ್ರಯ್ಯ ಅವರನ್ನ ಅಭ್ಯರ್ಥಿ ಎಂದು ತೀರ್ಮಾನ ಮಾಡಲಾಗಿತ್ತು. ಆದರೆ, ಅವರು ಸರ್ಕಾರಿ ಅಧಿಕಾರಿ ಆಗಿದ್ದು, ಅವರ ರಾಜೀನಾಮೆಯನ್ನು ಸರ್ಕಾರ ಇನ್ನೂ ತೀರ್ಮಾನಿಸಿರಲಿಲ್ಲ. ಹೀಗಾಗಿ, ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಲಾಗಿತ್ತು ಎಂದು ತಿಳಿಸಿದ್ದಾರೆ.
'ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ': ಸಂಚಲನ ಸೃಷ್ಟಿಸಿದ ಭವಾನಿ ರೇವಣ್ಣ
ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ನಿಲ್ಲಿಸಿದ್ದ ಉದ್ದೇಶವೇ ಬೇರೆ: ಮಧುಗಿರಿಯಲ್ಲಿ ವೀರಭದ್ರಯ್ಯ ಅವರನ್ನು ಬಿಟ್ಟರೆ ಬೇರೆ ಅಭ್ಯರ್ಥಿ ಇರಲಿಲ್ಲ. ಬೈ ಇಲೆಕ್ಷನ್‌ನಲ್ಲಿ ಮೂರ್ನಾಲ್ಕು ಸೀಟ್ ಗೆಲ್ಲಬೇಕು ಅಂತ ಅನಿತಾ ಕುಮಾರಸ್ವಾಮಿ ಅವರನ್ನ ನಿಲ್ಲಿಸಲಾಗಿತ್ತು. ನಂತರ ವೀರಭದ್ರಯ್ಯ ಅವರಿಗೆ ಸೀಟು ಬಿಟ್ಟು ಕೊಟ್ಟಿದ್ದೇವೆ. ನಮ್ಮ ಕುಟುಂಬದಲ್ಲಿ ಸಂಘರ್ಷ ನಡೀತಿದೆ ಅನ್ನೋದೇನಿಲ್ಲ. ನನಗೆ ಕಾರ್ಯಕರ್ತರೆ ಕುಟುಂಬಸ್ಥರು ಆಗಿದ್ದಾರೆ. ಈಗಾಗಲೇ ಹಾಸನದಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ. ಇಲ್ಲದಿದ್ದರೇ ಅವರನ್ನ ನಾನೇ ನಿಲ್ಲಿಸುತ್ತಿದ್ದೆ. ನಮ್ಮ ಕುಟುಂಬದಲ್ಲಿ ಯಾವುದೇ ಸಂಘರ್ಷಗಳು ಸಹ ಇಲ್ಲ. ಪಕ್ಷದ ಲಕ್ಷಾಂತರ ಜನರಿಗೆ ತಲೆ ಕೊಡುವ ಜವಾಬ್ದಾರಿ ನನ್ನದು ಎಂದು ಹೇಳಿದರು.
ಚನ್ನಪಟ್ಟಣದಲ್ಲಿ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ: ನಮ್ಮ ತಂದೆ ಹಾಗೂ ನಾನು ಅಭಿವೃದ್ಧಿ ಮಾಡಿದ ರಾಮನಗರ ಜಿಲ್ಲೆಯ ಅವಳಿ ನಗರದಂತಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ 20 ವರ್ಷದಿಂದ ಗೆಲ್ಲಲು ಆಗಿರಲಿಲ್ಲ. ಆದರೆ ಮಧುಗಿರಿಯಲ್ಲಿ ಅನಿತಾ ಕುಮಾರಸ್ವಾಮಿ ಬೇಡ ಎಂದು ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಚನ್ನಪಟ್ಟಣದಲ್ಲಿ ಅಭ್ಯರ್ಥಿ ಇಲ್ಲವೆಂದು ಒತ್ತಡ ಹಾಕಿದರು. ಹೀಗಾಗಿ, ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿ ಕ್ಷೇತ್ರದಲ್ಲಿ ಗೆಲ್ಲಬೇಕಾಯಿತು. ನಂತರ, ಮನೆಯ ಕ್ಷೇತ್ರವಾಗಿರುವ ರಾಮನಗರದಲ್ಲಿ ಅನಿವಾರ್ಯವಾಗಿ ಅನಿತಾ ಕುಮಾರಸ್ವಾಮಿ ಅವರನ್ನು ನಿಲ್ಲಿಸಲಾಗಿತ್ತು. ಈಗಾಗಲೇ ಹಾಸನದಲ್ಲಿ ಸೋತಿರುವ ಕಾರಣಕ್ಕೆ ಗೆಲ್ಲುವ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ತಲೆ ಕೊಡಿಸಿದ್ದೇವೆ. ಇಲ್ಲಿ ಇರುವ ವ್ಯತ್ಯಾಸಗಳ ಸ್ಪಷ್ಟವಾದ ಹೇಳುವೆ. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.