ಬಿಜೆಪಿ ನಾಯಕರು ಸರ್ಕಾರ, ಸಿಎಂಗೆ ಅಗೌರವ ತೋರುತ್ತಿದ್ದಾರೆ: ಭಾಸ್ಕರ್ ರಾವ್ ಆಕ್ರೋಶ

Published : Apr 11, 2022, 09:59 AM IST
ಬಿಜೆಪಿ ನಾಯಕರು ಸರ್ಕಾರ, ಸಿಎಂಗೆ ಅಗೌರವ ತೋರುತ್ತಿದ್ದಾರೆ: ಭಾಸ್ಕರ್ ರಾವ್ ಆಕ್ರೋಶ

ಸಾರಾಂಶ

* ಜೆ.ಜೆ.ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ * ರಾಜಕೀಯ ತಿರುವುಪಡೆದುಕೊಂಡ ಚಂದ್ರು ಕೊಲೆ ಕೇಸ್ * ಬಿಜೆಪಿ ನಾಯಕರ ವಿರುದ್ಧ ಭಾಸ್ಕರ್ ರಾವ್ ಕಿಡಿ

ಬೆಂಗಳೂರು, (ಏ.11): ಬೆಂಗಳೂರಿನ ಜೆ.ಜೆ.ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣ ರಾಜಕೀಯ ತಿರುವುಪಡೆದುಕೊಂಡಿದ್ದು, ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಇದರ ಮಧ್ಯೆ ಆಪ್ ಮುಖಂಡ, ಮಾಜಿ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಎಂಟ್ರಿ ಕೊಟ್ಟಿದ್ದು, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರು, ಪೊಲೀಸ್ ಆಯುಕ್ತರನ್ನ ಸುಳ್ಳುಗಾರ ಎಂದಿದ್ದರು. ಇದಕ್ಕೆ ಭಾಸ್ಕರ್‌ ರಾವ್ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು,  ಬೆಂಗಳೂರು ಪೊಲೀಸ್ ಆಯುಕ್ತರು ಬೆಂಗಳೂರಿನ 1 ಕೋಟಿ ಜನರನ್ನ ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ನಾಯಕರು ಸರ್ಕಾರ, ಸಿಎಂಗೆ ಅಗೌರವ ತೋರುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಬಿಜೆಪಿ ನಾಯಕರ ಹೇಳಿಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕೊಲೆ... ಎರಡು ವಾದ...ಚಂದ್ರು ಕೊಲೆಗೆ ಕೋಮು ಬಣ್ಣ

ಜವಾಬ್ದಾರಿಯುತವಾದ ಪೋಲಿಸ್ ಸಂಸ್ಥೆಯ ಆಯುಕ್ತರನ್ನು  ಆಡಳಿತ ಪಕ್ಷದ ಹಿರಿಯ ನಾಯಕರು ಸುಳ್ಳು ಹೇಳುತ್ತಾರೆ ಎನ್ನುವುದು, ಸರ್ಕಾರ, ಮುಖ್ಯಮಂತ್ರಿ ಗಳನ್ನು ಕಡೆಗಣಿಸೋದು, ಆಡಳಿತರೂಡ ಪಕ್ಷವೂ ತನ್ನ ಹಿರಿಯ ನಾಯಕರಿಗೆ ತಿಳಿ ಹೇಳುತ್ತಾರೆ ಎಂದು ಸಾರ್ವಜನಿಕರ ಅಪೇಕ್ಷೆಯಾಗಿದೆ. ಪೋಲಿಸ್ ಆಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಭಿನ್ನಾಭಿಪ್ರಾಯವಿದ್ದರೆ ನೇರವಾಗಿ ಭೇಟಿ ಮಾಡುವುದು ಸೂಕ್ತ, ಹೀಗೆ ಬಹಿರಂಗವಾಗಿ 1.5 ಕೋಟಿ ನಾಗರಿಕರನ್ನು ರಕ್ಷಣೆ ಮಾಡುವ ಸಂಸ್ಥೆಯನ್ನು ಅವಮಾನ ಮಾಡಲಾಗಿದೆ.  ಇದು ಅವಿವೇಕತನದ ರಾಜಕೀಯ ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನ ಪರಿಷತ್ತಿನ ಸದಸ್ಯ ರವಿಕುಮಾರ್, ತಮ್ಮ ತಲೆ ಮೇಲೆ ಬರುತ್ತೆ ಎಂದು, ಬೆಂಗಳೂರು ಪೊಲೀಸ್ ಕಮಿಷನರ್ ಸುಳ್ಳು ಹೇಳಿದ್ದಾರೆ. ಗೃಹ ಸಚಿವರು ಹೇಳಿದ್ದು ಸರಿ ಇದೆ. ಉರ್ದು ಬರಲ್ಲ ಅಂದಿದ್ದಕ್ಕೆ ಚಂದ್ರುನನ್ನ ಕೊಲೆ ಮಾಡಲಾಗಿದೆ. ಯುವಕ ಚಂದ್ರು ಹತ್ಯೆ ಮಾಡಿರುವುದು ಗೂಂಡಾ ಮುಸ್ಲಿಮರು. ಬೈಕ್ಗೆ ಆಯಕ್ಸಿಂಡೆಂಟ್ ಆಗಿದ್ದು ನಿಜ, ಆಗ ಗಲಾಟೆ ನಡೆದಿದೆ. ಉರ್ದುವಿನಲ್ಲಿ ಮಾತನಾಡಿ ಎಂದು ಚಂದ್ರುಗೆ ಹೇಳಿದ್ದಾರೆ. ಉರ್ದು ನಹೀ ಹೈ ಅಂತ ಹೇಳಿದಾಗ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ ಎಂದು ರವಿಕುಮಾರ್ ಆರೋಪಿಸಿದ್ದರು. ಅಲ್ಲದೆ ಬಿಜೆಪಿಯ ಕೆಲ ನಾಯಕರು ಪೊಲೀಸ್ ಆಯುಕ್ತರು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದರು.

ಬಿಜೆಪಿ ನಾಯಕರ ಆರೋಪಗಳ ಬಗ್ಗೆ ಏನೂ ಹೇಳಲ್ಲ. ಸರ್ಕಾರದ ಆದೇಶ ಪಾಲಿಸುತ್ತೇವೆ. ನಮ್ಮ ಕೆಲಸ ಏನಿದೆಯೋ ಅದನ್ನು ಮಾಡುತ್ತಿದ್ದೇವೆ. ನಾವು ಕಾನೂನು ಪಾಲಿಸುತ್ತಿದ್ದೇವೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ.

ಇನ್ನು ಚಂದ್ರ ಕೊಲೆ ಪ್ರಕರಣ ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಮಾಡಲಾಗುತ್ತೆ. ಸರ್ಕಾರದ ಆದೇಶದಂತೆ ಪ್ರಕರಣದ ಫೈಲ್ ಸಹಿತ ಸಿಐಡಿ ತನಿಖೆಗೆ ಹಸ್ತಾಂತರ. ಸಿಐಡಿ ಅಧಿಕಾರಿಗಳಿಂದ ಮುಂದಿನ ತನಿಖೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿ ಬುರುಡೆ ಗ್ಯಾಂಗಿಂದ ಗ್ಯಾರಂಟಿ ಸಾಧ್ಯವಿಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕಾಂಗ್ರೆಸ್ ಒಳಜಗಳಕ್ಕೆ ಪ್ರತಿಪಕ್ಷ ಕಿಡಿ.. ನಾಯಕತ್ವವಿಲ್ಲದೆ ರಾಜ್ಯದ ಅಭಿವೃದ್ಧಿ ಅಸಾಧ್ಯ: ಆರ್.ಅಶೋಕ್‌