
ಕೋಲ್ಕತಾ(ನ.21): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದ ಆಡಳಿತ ಪಕ್ಷ. ಇಷ್ಟೇ ಅಲ್ಲ ಪಂಚಾಯತ್, ಕಾರ್ಪೋರೇಶ್ ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಟಿಎಂಸಿ ಅಧಿಕಾರದಲ್ಲಿದೆ. ಆದರೆ ತೃಣಮೂಲ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆಯಾಗಿದೆ. ಕೋಲ್ಕತಾ ಹೈಕೋರ್ಟ್ ಆದೇಶದ ಬಳಿಕ ಝಲ್ದಾ ಮುನ್ಸಿಪಾಲಿಟಿಯಲ್ಲಿ ಟಿಎಂಸಿ ಅಧಿಕಾರ ಕಳೆದುಕೊಂಡಿದೆ. ಇದೀಗ ಝಲ್ದಾ ಕಾರ್ಪೋರೇಶನ್ ಕಾಂಗ್ರೆಸ್ ಪಾಲಾಗಿದೆ. ಝಲ್ದಾ ಕಾರ್ಪೋರೇಶನ್ ಉಳಿಸಿಕೊಳ್ಳಲು ತೀವ್ರ ಹೋರಾಟ ನಡೆಸಿದ್ದ ಟಿಎಂಸಿ ಇದೀಗ ತೀವ್ರ ಮುಖಭಂಗಕ್ಕೆ ಒಳಗಾಗಿದೆ.
ಝಲ್ದಾ ಮುನ್ಸಿಪಾಲಿಟಿ ಚುನಾವಣೆಯಲ್ಲಿ ಟಿಎಂಸಿ 5 ವಾರ್ಡ್ ಗೆದ್ದಿದ್ದರೆ, ಕಾಂಗ್ರೆಸ್ 5 ವಾರ್ಡ್ ಗೆದ್ದಿತ್ತು. ಇನ್ನುಳಿದ ಎರಡು ವಾರ್ಡ್ ಪಕ್ಷೇತರರು ಗೆದ್ದಿದ್ದರು. ಪಕ್ಷೇತರರ ಬೆಂಬಲ ಪಡೆದು ಟಿಎಂಸಿ ಝಲ್ದಾ ಮುನ್ಸಿಪಾಲಿಟಿಯಲ್ಲಿ ಅಧಿಕಾರ ಹಿಡಿದಿತ್ತು. ಆದರೆ ಅಕ್ಟೋಬರ್ 13 ರಂದು ಟಿಎಂಸಿ ವಿಶ್ವಾಸ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಚೇರ್ಮೆನ್ ಸುರೇಶ್ ಅಗರ್ವಾಲ್ ವಿರುದ್ಧ ಹೋರಾಟ ಆರಂಭಿಸಿದ್ದರು. ಇಷ್ಟೇ ಅಲ್ಲ ವಿಶ್ವಾಸ ಮತ ಯಾಚನೆ ನಡೆಸುವಂತೆ ಆಗ್ರಹಿಸಿದ್ದರು.
ತಪ್ಪಾಗಿದೆ ಕ್ಷಮಿಸಿ, ಬಹಿರಂಗ ಕ್ಷಮೆ ಯಾಚಿಸಿದ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ!
ಆದರೆ ಟಿಎಂಸಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಧಿಕಾರ ನಡೆಸಿತ್ತು. ಹೀಗಾಗಿ ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. ಆದರೆ ಹೈಕೋರ್ಟ್‌ನಲ್ಲಿ ಟಿಎಂಸಿಗೆ ಹಿನ್ನಡೆಯಾಗಿತ್ತು. ವಿಶ್ವಾಸ ಮತಯಾಚನೆ ನಡೆಸುವಂತೆ ಹೈಕೋರ್ಟ್ ಸೂಚಿಸಿತ್ತು. ಹೀಗಾಗಿ ಝಲ್ದಾ ಮುನ್ಸಿಪಾಲಿಟಿಯಲ್ಲಿ ಇಂದು ವಿಶ್ವಾಸ ಮತ ಯಾಚನೆ ನಡೆಸಲಾಗಿತ್ತು. ಈ ವೇಳೆ ಕಾಂಗ್ರೆಸ್ ತನ್ನ 5 ವಾರ್ಡ್‌ನ ಬೆಂಬಲದ ಜೊತೆಗೆ ಇಬ್ಬರು ಪಕ್ಷೇತರರ ಬೆಂಬಲವನ್ನೂಪಡೆದುಕೊಂಡಿತು. ಇತ್ತ ತೃಣಮೂಲ ಕಾಂಗ್ರೆಸ್ ಕೇವಲ 5 ಮತಗಳನ್ನು ಪಡೆದುಕೊಂಡಿದೆ. 7 ಮತಗಳನ್ನು ಪಡೆದ ಕಾಂಗ್ರೆಸ್ ಇದೀಗ ಝಲ್ದಾ ಕಾರ್ಪೋರೇಶನ್ ಅಧಿಕಾರಕ್ಕೇರಿದೆ.
ಕಾಂಗ್ರೆಸ್ ಕಾರ್ಪೋರೇಟರ್ ತಪನ್ ಕಂಡು ಹತ್ಯೆ ಬಳಿಕ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಈ ವೇಳೆ ತಪನ್ ಸಂಬಂಧಿ ಮಿಥುನ್ ಕಂಡು ಕಾಂಗ್ರೆಸ್‌ನಿಂದ ಭರ್ಜರಿ ಗೆಲುವು ದಾಖಲಿಸಿತ್ತು. ಬಳಿ ಸ್ವತಂತ್ರ ಅಭ್ಯರ್ಥಿ ಶೀಲಾ ಚಟ್ಟೋಪಾಧ್ಯಯ ನೆರವಿನಿಂದ ಕಾಂಗ್ರೆಸ್ ಝಲ್ದಾ ಕಾರ್ಪೋರೇಶನ್‌ನಲ್ಲಿ ಅಧಿಕಾರ ಹಿಡಿಯಿತು. ಆದರೆ ಈ ಬಾರಿಯ ದುರ್ಗಾ ಪೂಜೆ ಬಳಿಕ ಶೀಲಾ ಚಟ್ಟೋಪಾಧ್ಯಾ ಟಿಎಂಸಿಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರು. ಇದರಿಂದ ವಿಪಕ್ಷಗಳು ವಿಶ್ವಾಸ ಮತ ಯಾಚನೆಗೆ ಪಟ್ಟು ಹಿಡಿದಿತ್ತು.
TMC ನಾಯಕರ ಜೊತೆ ಸುವೇಂದು ಅಧಿಕಾರಿ ಚರ್ಚೆ: ಬಿಜೆಪಿ ತೊರೆವ ಬಗ್ಗೆ ಗುಸುಗುಸು
ಬಂಗಾಳದಲ್ಲಿ ಸಿಎಎ ಅನುಷ್ಠಾನಕ್ಕೆ ಅವಕಾಶ ನೀಡಲ್ಲ: ಮಮತಾ
‘ಮುಂಬರುವ ಗುಜರಾತ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿಯು ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸಲು ಮುಂದಾಗಿದೆ’ ಎಂದು ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಅಲ್ಲದೆ, ‘ಬಂಗಾಳದಲ್ಲಿ ಸಿಎಎ ಜಾರಿಗೆ ತೃಣಮೂಲ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ. ಪ್ರತ್ಯೇಕತ ವಾದವನ್ನು ಹೊಂದಿರುವ ಬಿಜೆಪಿಯು ರಾಜ್ಯ ವಿಭಜನೆ ಮಾಡಲು ನಾವು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಯಾವುದೇ ಚುನಾವಣೆಗಳು ಎದುರಾಗುವ ಸಂದರ್ಭದಲ್ಲಿ ಬಿಜೆಪಿ ಸಿಎಎ ಮತ್ತು ಎನ್‌ಆರ್‌ಸಿ ಜಾರಿಗೊಳಿಸುವ ಬಗ್ಗೆ ಮಾತನಾಡುತ್ತದೆ. ಗುಜರಾತ್ ಚುನಾವಣೆಯ ಹಿನ್ನೆಲೆಯಲ್ಲಿ ಕಳೆದ 1 ವರ್ಷದಿಂದ ಈ ವಿಚಾರದ ಬಗ್ಗೆ ಮಾತನಾಡುತ್ತಿದೆ’ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.