ತಪ್ಪು ಮರೆ ಮಾಚಲು ನೆಲ, ಜಲ ಎನ್ನುತ್ತದೆ ಬಿಜೆಪಿ: ಡಿಕೆಸು ಟೀಕಾಪ್ರಹಾರ

By Kannadaprabha NewsFirst Published Jan 17, 2023, 10:14 AM IST
Highlights

ಸದಾ ಒಂದಿಲ್ಲೊಂದು ತಪ್ಪ ಮಾಡುತ್ತಲೇ ಇರುವ ಆಡಳಿತರೂಡ ಬಿಜೆಪಿ ತನ್ನ ತಪ್ಪನ್ನು ಮರೆ ಮಾಚಲು ರಾಜ್ಯದ ಭಾಷೆ, ನೆಲ, ಜಲವೆಂದು ಹೋರಾಡುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಕುಮಾರ್ ಆರೋಪಿಸಿದ್ದಾರೆ. 

ಕೆಂಗೇರಿ: ಆಡಳಿತಾರೂಢ ಬಿಜೆಪಿ ಸರ್ಕಾರ ಚುನಾವಣೆ ವೇಳೆ ಗಡಿ ಸಮಸ್ಯೆ, ಜಲ, ನೆಲದ ವಿಷಯವನ್ನು ಮುನ್ನೆಲೆಗೆ ತಂದು ತನ್ನ ತಪ್ಪುಗಳನ್ನು ಮರೆಮಾಚುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್‌ ಟೀಕಿಸಿದರು.ಅವರು ಮಾಗಡಿ ರಸ್ತೆಯ ಸುಂಕದಕಟ್ಟೆಯ ರಾಜೀವ್‌ಗಾಂಧಿ ಸರ್ಕಲ್‌ನಲ್ಲಿ ಜಯ ಕರ್ನಾಟಕ ಸಂಘಟನೆ ಆಯೋಜಿಸಿದ್ದ 67ನೇ ಕನ್ನಡ ರಾಜ್ಯೋತ್ಸವದಲ್ಲಿ 450 ಕುಟುಂಬಗಳಿಗೆ ಸೀರೆ, ಕಂಬಳಿ ವಿತರಿಸಿ ಅನ್ನ ಸಂತರ್ಪಣೆಗೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ ಮಿತಿ ಮೀರಿವೆ. ಬೆಲೆ ಏರಿಕೆ, ಕೋವಿಡ್‌ನಿಂದ ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡಿದ್ದಾರೆ. ಆದರೆ, ಸರ್ಕಾರ ಇದನ್ನೆಲ್ಲ ಮುಚ್ಚಿ ಜನತೆಯ ಗಮನ ಬೇರೆಡೆ ಸೆಳೆಯಲು ಗಡಿ ಸಮಸ್ಯೆ, ಜಲ, ನೆಲದ ವಿಷಯವನ್ನು ಸಮಾಜದಲ್ಲಿ ಚರ್ಚಾ ವಿಷಯವಾಗಿಸುತ್ತಿದೆ ಎಂದು ದೂರಿದರು.

Karnataka Politics: ಡಿ.ಕೆ.ಶಿವಕುಮಾರ್ ಯಾರಿಗೆ ಚಹಾ ಕೊಡುತ್ತಿದ್ದರೆಂದು ತಿಳಿದುಕೊಳ್ಳಲಿ: ಸಚಿವ ಪ್ರಹ್ಲಾದ್‌ ಜೋಶಿ

ಕಾಂಗ್ರೆಸ್‌ ನಾಯಕಿ ಎಚ್‌.ಕುಸುಮಾ ಅವರು ಕಬ್ಬೆಹಳ್ಳ, ರಾಜೀವ್‌ ಗಾಂಧಿನಗರ ಸರ್ಕಾರಿ ಪ್ರಾಥಮಿಕ ಶಾಲೆ, ಹರಿರಂಗನಾಥ ಶಾಲೆ ಮಕ್ಕಳಿಗೆ ನೋಟ್‌ಬುP್ಸ…, ಲೇಖನ ಸಾಮಗ್ರಿ ವಿತರಿಸಿ, ಜನಪದ ಸೊಗಡಿನ ಸಂಕ್ರಾಂತಿಯ ಆಚರಣೆ ಬಗ್ಗೆ ಯುವ ಸಮೂಹಕ್ಕೆ ಅರಿವು ಮೂಡಿಸಬೇಕಿದೆ ಎಂದರು.

ರಾಜರಾಜೇಶ್ವರಿ ನಗರ ನಗರಸಭೆಯ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಜಯಕರ್ನಾಟಕ ಸಂಘಟನೆಯ ಗೌರವ ಅಧ್ಯಕ್ಷ ಎ.ರಾಮಕೃಷ್ಣ (ರಾಮಣ್ಣ) ಮಾತನಾಡಿದರು. ವೇದಿಕೆ ಅಧ್ಯಕ್ಷ ಮಧು, ಜೆಡಿಎಸ್‌ ಮುಖಂಡ ರೋಹಿತ್‌, ಕೃಷ್ಣಮೂರ್ತಿ, ಮುಖಂಡರಾದ ರಾಮಚಂದ್ರ, ಶರಣಪ್ಪ, ರಮೇಶ್‌, ಅಪ್ಪಾಜಿ, ವಸಂತ, ವಿರೇಶಕುಮಾರ್‌, ಮಣಿ, ಬಿಜೆಪಿ ಮುಖಂಡ ಮಂಜುನಾಥ್‌ ಇದ್ದರು.

ಜಯ ಕರ್ನಾಟಕ ಸಂಘಟನೆಯಿಂದ ನಡೆದ 67ನೇ ರಾಜ್ಯೋತ್ಸವದಲ್ಲಿ ಸಂಸದ ಡಿ.ಕೆ.ಸುರೇಶ್‌ ಅವರನ್ನು ಸನ್ಮಾನಿಸಲಾಯಿತು. ಕಾಂಗ್ರೆಸ್‌ ನಾಯಕಿ ಕುಸುಮಾ, ನಗರಸಭಾ ಮಾಜಿ ಅಧ್ಯಕ್ಷ ಹನುಮಂತರಾಯಪ್ಪ, ಸಂಘಟನೆಯ ಗೌರವಾಧ್ಯಕ್ಷ ರಾಮಣ್ಣ, ಅಧ್ಯಕ್ಷ ಮಧು ಇದ್ದರು.

click me!