ಅನರ್ಹ ಶಾಸಕರ ತೀರ್ಪಿನಿಂದ ಬಿಜೆಪಿಗೇನು ಲಾಭ?

By Web DeskFirst Published Nov 14, 2019, 7:39 AM IST
Highlights

ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ತೀರ್ಪು| ಉಪಚುನಾವಣೆ ಎದುರಿಸಲು ಸಿದ್ಧವಾಗಿದ್ದರೂ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದರೆ ಹೇಗೆ ಎಂಬ ಆತಂಕ ನಿವಾರಣೆ| ಸುಪ್ರೀಂ ತೀರ್ಪಿನಿಂದ ಬಿಜೆಪಿಗೇನು ಲಾಭ?

ಬೆಂಗಳೂರು[ಅ.14]: ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್ ಬುಧವಾರ ನೀಡಿದ ತೀರ್ಪಿನ ಬೆನ್ನಲ್ಲೇ ಆಡಳಿತಾರೂಢ ಬಿಜೆಪಿ ನಿಟ್ಟುಸಿರು ಬಿಟ್ಟಿದೆ. ಕಳೆದ ಹಲವು ದಿನಗಳಿಂದ ಬಿಜೆಪಿ ನಾಯಕರು ಈ ತೀರ್ಪಿಗಾಗಿಯೇ ಕಾಯುತ್ತಿದ್ದರು. ಉಪಚುನಾವಣೆ ಎದುರಿಸಲು ಸಿದ್ಧವಾಗಿದ್ದರೂ ಅನರ್ಹ ಶಾಸಕರಿಗೆ ಸ್ಪರ್ಧಿಸಲು ಅವಕಾಶ ನಿರಾಕರಿಸಿದಲ್ಲಿ ಏನು ಮಾಡುವುದು ಎಂಬ ಆತಂಕ ಕಾಣಿಸಿಕೊಂಡಿತ್ತು. ಅದೀಗ ನಿವಾರಣೆಯಾಗಿದೆ. ಈ ತೀರ್ಪಿಂದ ಬಿಜೆಪಿ ಹಲವು ಲಾಭಗಳಿವೆ

ಬಹುತೇಕ ಅನರ್ಹ ಶಾಸಕರು ಅವರವರ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಭಾವ ಮತ್ತು ವೈಯಕ್ತಿಕ ವರ್ಚಸ್ಸು ಹೊಂದಿ ದವರು. ಅವರೇ ಅಭ್ಯರ್ಥಿಗಳಾದರೆ ಉಪಚುನಾವಣೆ ಎದುರಿಸುವುದು ಸುಲ ಭವಾಗುತ್ತದೆ. ಕೊಟ್ಟ ಮಾತಿಗೆ ತಪ್ಪಿದ ಆಪಾದನೆಯೂ ಎದುರಿಸಬೇಕಾಗುವುದಿಲ್ಲ ಎಂಬ ಅಭಿಪ್ರಾಯ ಬಿಜೆಪಿ ನಾಯಕರಿಗಿತ್ತು. ಇದೀಗ ಅವರ ನಿರೀಕ್ಷೆಯಂತೆಯೇ ಆಗಿದೆ.

ಬೇಗ್ ಬಿಟ್ಟು ಉಳಿದೆಲ್ಲ ಅನರ್ಹರು ಬಿಜೆಪಿ ಸೇರ್ಪಡೆ

ಅನರ್ಹ ಶಾಸಕರ ಪೈಕಿ ಅನೇಕರಿಗೆ ಉಪಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವುದರಿಂದ ಹದಿನೈದು ಕ್ಷೇತ್ರಗಳ ಪೈಕಿ ಕನಿಷ್ಠ ಏಳರಲ್ಲಿ ಗೆದ್ದರೂ ಮುಖ್ಯಮಂತ್ರಿ ಬಿಎಸ್‌ವೈ ನೇತೃತ್ವದ ಬಿಜೆಪಿ ಸರ್ಕಾರದ ಬುಡ ಗಟ್ಟಿಯಾಗಲಿದೆ.

ಅನರ್ಹ ಶಾಸಕರಿಗೆ ಸ್ಪರ್ಧಿಸಲು ನಿರಾಕರಿಸಿದ್ದಲ್ಲಿ ಆಗ ಅವರ ಕುಟುಂಬದ ಸದಸ್ಯರಿಗೆ ಅಥವಾ ಅವರು ಸೂಚಿಸಿದವರಿಗೆ ಟಿಕೆಟ್ ನೀಡಬೇಕಾಗುತ್ತಿತ್ತು. ಇದು ಸ್ಥಳೀಯ ಬಿಜೆಪಿ ಮುಖಂಡರಲ್ಲಿ ಅಸಮಾಧಾನಕ್ಕೆ ಕಾರಣವಾಗುತ್ತಿತ್ತು. ಜೊತೆಗೆ ಕುಟುಂಬ ರಾಜಕಾರಣಕ್ಕೆ ಪ್ರೋತ್ಸಾಹ ನೀಡಿದಂತಾಗುತ್ತಿತ್ತು. ಸದ್ಯಕ್ಕೆ ಇದರಿಂದ ಬಿಜೆಪಿಗೆ ಮುಕ್ತಿ ಸಿಕ್ಕಂತಾಗಿದೆ.

ಸುಪ್ರೀಂ ತೀರ್ಪಿನಿಂದ ಅನರ್ಹರಿಗೆ ರಿಲೀಫ್, ಆದ್ರೂ ಕೊನೆ ಕಾಣದ ಸಂಕಷ್ಟ!

ಈ ಅನರ್ಹ ಶಾಸಕರ ಪರ ಗಟ್ಟಿಯಾಗಿ ನಿಂತಿದ್ದರಿಂದ ರಾಜಕೀಯ ವಲಯದಲ್ಲಿ ಇತರ ಪಕ್ಷಗಳ ಇತರ ಶಾಸಕರಿಗೂ ಬಿಜೆಪಿ ಬಗ್ಗೆ ನಂಬಿಕೆ ಬರುವಂತಾಯಿತು. ಏನೇ ಇರಲಿ. ಕೊನೆವರೆಗೂ ಕೈಬಿಡಲಿಲ್ಲ ಎಂಬ ಸಂದೇಶ ರವಾನೆಯಾದಂತಾಯಿತು.

click me!