ಮೋದಿ ಮುಕ್ತ ಭಾರತ, ಬಿಎಸ್‌ವೈ ಮುಕ್ತ ಕರ್ನಾಟಕ ಪಕ್ಕಾ: ಉಗ್ರಪ್ಪ!

By Web Desk  |  First Published Jan 16, 2019, 12:10 PM IST

ಆಪರೇಶನ್ ಕಮಲ ಅತ್ಯಂತ ನಾಚಿಕೆಗೇಡು ಎಂಧ ಉಗ್ರಪ್ಪ| ‘ಜನಾದೇಶ ವಿರುದ್ಧ ನಡೆದುಕೊಳ್ಳುವುದು ಅಕ್ಷಮ್ಯ ಅಪರಾಧ’| ಬಿಜೆಪಿ ವಿರುದ್ಧ ಹರಿಹಾಯ್ದ ಬಳ್ಳಾರಿ ಸಂಸದ ಉಗ್ರಪ್ಪ| ‘ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಪ್ರಯತ್ನ ನಾಚಿಕೆಗೇಡು’| ‘ನಮ್ಮ ಪಕ್ಷದ ಶಾಸಕರು ಬಿಜೆಪಿಗೆ ಹೋಗಲ್ಲ ಎಂದ ಉಗ್ರಪ್ಪ| 


ಬಳ್ಳಾರಿ(ಜ.16): ಸಂವಿಧಾನದತ್ತ ಜನಾದೇಶದ ವಿರುದ್ಧ ಯಾರೇ ನಡೆದುಕೊಂಡರೂ ಅದು ಅಕ್ಷಮ್ಯ ಅಪರಾಧ ಎಂದು ಬಳ್ಳಾರಿ ಸಂಸದ ಉಗ್ರಪ್ಪ ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿ ಸರ್ಕಾರ ರಚೆನೆ ಮಾಡಿ ಆಡಳಿತ ನಡೆಸುತ್ತಿದೆ. ಬಿಜೆಪಿಯವರಿಗೆ ಈ ರಾಜ್ಯದಲ್ಲಿ ಜನಾದೇಶ ಇಲ್ಲ. ಆದರೂ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡು ಎಂದು ಉಗ್ರಪ್ಪ ಹರಿಹಾಯ್ದಿದ್ದಾರೆ.

Tap to resize

Latest Videos

2004, 2008ರಲ್ಲೂ ಬಿಜೆಪಿ ವಾಮ ಮಾರ್ಗ ಅನುಸರಿಸಿ ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಆದರೆ ನಮ್ಮ ಪಕ್ಷದ ಶಾಸಕರು ಬಿಜೆಪಿ ಜೊತೆ ಹೋಗುವುದಿಲ್ಲ ಎಂಬ ಭರವಸೆ ಇದೆ ಎಂದು ಉಗ್ರಪ್ಪ ಹೇಳಿದ್ದಾರೆ.

ಆನಂದ್ ಸಿಂಗ್ ತಮ್ಮ ಬಳಿ ಮಾತನಾಡಿದ್ದು, ಗಣೇಶ್, ಭೀಮಾನಾಯ್ಕ್ ಕೂಡ ಮೊನ್ನೆ ತಮ್ಮನ್ನು ಭೇಟಿ ಮಾಡಿದ್ದರು. ಅತೃಪ್ತ ಪಕ್ಷೇತರ ಶಾಸಕ ನಾಗೇಂದ್ರ ಅವರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ. ಅವರನ್ನು ಮನವೋಲಿಸುವ ವಿಶ್ವಾಸ ಇದೆ ಎಂದು ಸಂಸದರು ಭರವಸೆ ವ್ಯಕ್ತಪಡಿಸಿದರು. 

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಮಾಧ್ಯಮದೊಂದಿಗೆ ಮೋದಿ ಪತ್ರಿಕಾಗೋಷ್ಠಿ ನಡೆಸಲ್ಲ. ಆದರೆ ಅನ್ಯ ಪಕ್ಷಗಳ ಶಾಸಕರನ್ನು ಸೆಳೆಯುವ ರೆಸಾರ್ಟ್ ರಾಜಕೀಯ ಮಾಡುತ್ತಾರೆ ಎಂದು ಉಗ್ರಪ್ಪ ವ್ಯಂಗ್ಯವಾಡಿದರು.

ಈ ದೇಶದ ಜನ ಮೋದಿ, ಶಾ ಮಕ್ತ ಭಾರತ ಮಾಡಲು, ರಾಜ್ಯದ ಜನ ಯಡಿಯೂರಪ್ಪ ಮುಕ್ತ ಕರ್ನಾಟಕ ಮಾಡಲು ತಿರ್ಮಾನ ಮಾಡಿದ್ದಾರೆ- ಆಪರೇಷನ್ ಸಂಕ್ರಾಂತಿಯನ್ನು ಬಿಜೆಪಿ ನಿಲ್ಲಿಸದೇ ಹೋದರೇ, ಜನ ಈ 2019 ರಲ್ಲಿ  ಇವರನ್ನು ಜನತೆ ಮನೆಗೆ ಕಳುಹಿಸುತ್ತಾರೆ ಎಂದು ಉಗ್ರಪ್ಪ ಈ ವೇಳೆ ಎಚ್ಚರಿಕೆ ನೀಡಿದರು.

click me!