ಬೆಳಗಾವಿ: ಸಿಎಂ ಆಗಮನ ವಿಳಂಬ, 1 ತಾಸು ತಡವಾಗಿ ಶುರುವಾದ ಅಧಿವೇಶನ

By Kannadaprabha News  |  First Published Dec 5, 2023, 7:38 AM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ತಡವಾಗಿ ಆಗಮಿಸಿದ್ದರಿಂದ ಬೆಳಗ್ಗೆ 11ರ ಬದಲಾಗಿ 12ಕ್ಕೆ ಸದನವನ್ನು ಸ್ಪೀಕರ್‌ ಯು.ಟಿ.ಖಾದರ್‌ ಪ್ರಾರಂಭಿಸಿದರು. ಮೊದಲ ದಿನ ಸಂತಾಪ ಸೂಚನೆ ಬೆಂಬಲಿಸಿ ಮುಖ್ಯಮಂತ್ರಿಗಳು ಮಾತನಾಡಬೇಕಿರುವ ಕಾರಣ ಸದನವನ್ನು ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.


ಸುವರ್ಣವಿಧಾನಸೌಧ(ಡಿ.05):  ಬೆಳಗಾವಿಯಲ್ಲಿ ಕಾಂಗ್ರೆಸ್‌ ಸರ್ಕಾರದ ಮೊದಲ ಅಧಿವೇಶನವು ನಿಗದಿತ ಅವಧಿಗಿಂತ ಒಂದು ತಾಸು ತಡವಾಗಿ ಆರಂಭವಾಗಿರುವುದಕ್ಕೆ ಸದನದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾದ ಘಟನೆ ನಡೆಯಿತು.

ಬೆಳಗ್ಗೆ 11ಕ್ಕೆ ಆರಂಭವಾಗಬೇಕಿದ್ದ ಸದನ ಮಧ್ಯಾಹ್ನ 12ಕ್ಕೆ ಆರಂಭವಾಯಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಈ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಸುರೇಶ್ ಕುಮಾರ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಕೂಡಲೇ ಬೆಂಬಲ ನೀಡಿದ ಆಡಳಿತ ಪಕ್ಷದ ರಾಯರೆಡ್ಡಿ, ಸ್ಪೀಕರ್‌ ಅವರ ಧೋರಣೆ ಸರಿಯಲ್ಲ. ಯಾರು ಬರಲಿ, ಬಿಡಲಿ ಸೂಚಿಸಿದ ಸಮಯಕ್ಕೆ ಸರಿಯಾಗಿ ಸದನವನ್ನು ಆರಂಭಿಸಬೇಕು. ನಿಗದಿ ಸಮಯಕ್ಕೆ ಸ್ಪೀಕರ್‌ ಬಂದು ತಮ್ಮ ಆಸನದಲ್ಲಿ ಕುಳಿತು ಕಲಾಪ ಆರಂಭಿಸಬೇಕು ಎಂದು ಆಗ್ರಹಿಸಿದರು. ಇದು ಆಡಳಿತ ಪಕ್ಷ ಹಾಗೂ ಸ್ಪೀಕರ್‌ ಅವರಿಗೆ ತುಸು ಮುಜುಗರ ಉಂಟುಮಾಡಿತು.

Tap to resize

Latest Videos

ಬೆಳಗಾವಿ ಅಧಿವೇಶನ: ನಾಳೆಯಿಂದ 2 ದಿನ ಉತ್ತರ ಕರ್ನಾಟಕ ಸಮಸ್ಯೆಗಳ ಚರ್ಚೆ

ಆಡಳಿತ ಮತ್ತು ಪ್ರತಿಪಕ್ಷದವರು ಸದನದಲ್ಲಿ ಹಾಜರಿದ್ದು, ಕೋರಂ ಇದ್ದರೂ ಮುಖ್ಯಮಂತ್ರಿ ತಡವಾಗಿ ಬಂದ ಕಾರಣ ಪ್ರತಿಪಕ್ಷ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ಸದನ ಆರಂಭವಾಗುತ್ತಿದ್ದಂತೆ ಸಂವಿಧಾನ ಪೀಠಿಕೆ ಓದಲಾಯಿತು. ಬಳಿಕ ಬಿಜೆಪಿ ಸದಸ್ಯ ಸುರೇಶ್‌ ಕುಮಾರ್‌, ಸದನ ತಡವಾಗಿ ಆರಂಭವಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ಮೊದಲ ದಿನವೇ ತಡವಾಗಿ ಆರಂಭಿಸುವ ಮೂಲಕ ರಾಜ್ಯಕ್ಕೆ ಏನು ಸಂದೇಶ ರವಾನಿಸುತ್ತೀರಿ. ಯಾವುದೇ ಕಾರಣವಿಲ್ಲದೆ ತಡವಾಗಿ ಸದನ ಆರಂಭಿಸುವುದು ಸರಿಯೇ ಎಂದು ಕೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಗಾವಿಗೆ ತಡವಾಗಿ ಆಗಮಿಸಿದ್ದರಿಂದ ಬೆಳಗ್ಗೆ 11ರ ಬದಲಾಗಿ 12ಕ್ಕೆ ಸದನವನ್ನು ಸ್ಪೀಕರ್‌ ಯು.ಟಿ.ಖಾದರ್‌ ಪ್ರಾರಂಭಿಸಿದರು. ಮೊದಲ ದಿನ ಸಂತಾಪ ಸೂಚನೆ ಬೆಂಬಲಿಸಿ ಮುಖ್ಯಮಂತ್ರಿಗಳು ಮಾತನಾಡಬೇಕಿರುವ ಕಾರಣ ಸದನವನ್ನು ಒಂದು ಗಂಟೆ ತಡವಾಗಿ ಆರಂಭಿಸಲಾಯಿತು.

click me!