ಸಿಎಂ ಆದಾಗೆಲ್ಲ ಬರ ಎಂಬ ಮಾತಿಗೆ ಸದನದಲ್ಲಿ ಗದ್ದಲ! ಆರಗ ಜ್ಞಾನೇಂದ್ರ ಆಡಿದ ಮಾತು ಕಡತದಿಂದ ತೆಗೆಸಿದ ಸ್ಪೀಕರ್!

By Kannadaprabha News  |  First Published Dec 9, 2023, 5:30 AM IST

  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಗ್ಯಾರಂಟಿ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ. ಬರ ಎಂಬುದು ಸಿದ್ದರಾಮಯ್ಯ ಅವಧಿಯ ಸಂಪ್ರದಾಯ ಎಂಬಂತಾಗಿದೆ’ ಎಂಬ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಆ ಮಾತುಗಳನ್ನು ಕಡತದಿಂದ ತೆಗೆಯಲು ಸೂಚಿಸಿದರು.


ವಿಧಾನಸಭೆ (ಡಿ.9) :  ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬಂದಾಗಲೆಲ್ಲಾ ಬರ ಗ್ಯಾರಂಟಿ ಎಂಬ ನಾಣ್ಣುಡಿ ಹುಟ್ಟಿಕೊಂಡಿದೆ. ಬರ ಎಂಬುದು ಸಿದ್ದರಾಮಯ್ಯ ಅವಧಿಯ ಸಂಪ್ರದಾಯ ಎಂಬಂತಾಗಿದೆ’ ಎಂಬ ಬಿಜೆಪಿ ಸದಸ್ಯ ಆರಗ ಜ್ಞಾನೇಂದ್ರ ಮಾತಿಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪೀಕರ್‌ ಆ ಮಾತುಗಳನ್ನು ಕಡತದಿಂದ ತೆಗೆಯಲು ಸೂಚಿಸಿದರು.

ಬರದ ಮೇಲಿನ ಚರ್ಚೆ ವೇಳೆ ಮಾತನಾಡಿದ ಆರಗ ಜ್ಞಾನೇಂದ್ರ ಮಾತು ಆರಂಭಿಸುತ್ತಿದ್ದಂತೆ, ‘ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರಕ್ಕೆ ಬಂದರೆ ಸುಭಿಕ್ಷವಾಗಿ ಮಳೆ ಬಂದು ನೆರೆ, ಸಿದ್ದರಾಮಯ್ಯ ಅವರು ಬಂದರೆ ಬರ ಖಚಿತ’ ಎಂಬ ನಾಣ್ಣುಡಿ ಹುಟ್ಟುಕೊಂಡಿದೆ. ಸಿದ್ದರಾಮಯ್ಯ ಅವರ ಅವಧಿ ಎಂದರೆ ಬರ ಎಂಬಂತಹ ಸಂಪ್ರದಾಯ ಹುಟ್ಟುಕೊಂಡಿದೆ ಎಂದು ಹೇಳಿದರು.

Tap to resize

Latest Videos

ಮುಸ್ಲಿಮರು ಬೀದಿಗಿಳಿದರೆ ಸಿಎಎ(ಪೌರತ್ವಕಾಯ್ದೆ) ಅನುಷ್ಠಾನ ಕಷ್ಟ: ಅಮ್ನೆಸ್ಟಿ!

ಇದಕ್ಕೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಕೋನರೆಡ್ಡಿ, ಹಾಗಾದರೆ ದೇಶಾದ್ಯಂತ ಬರ ಬಂದಿರುವುದು ನರೇಂದ್ರ ಮೋದಿ ಅವರಿಂದಲಾ? ಒಬ್ಬ ಹಿರಿಯ ಸದಸ್ಯರಾಗಿ ಇಂತಹ ಹೇಳಿಕೆಗಳನ್ನು ನೀಡಬಾರದು. ಮೊದಲು ಕಡತದಿಂದ ಈ ಪದಗಳನ್ನು ತೆಗೆಸಿ ಎಂದು ಸ್ಪೀಕರ್‌ಗೆ ಒತ್ತಾಯಿಸಿದರು.

ಆರಗ ಜ್ಞಾನೇಂದ್ರ, ನಾನು ಹೇಳಿರುವುದು ಅಸಂವಿಧಾನಿಕ ಅಲ್ಲ. ಕಡತದಿಂದ ಇದನ್ನು ತೆಗೆಯಬಾರದು ಎಂದು ಸಮರ್ಥಿಸಿಕೊಳ್ಳಲು ಯತ್ನಿಸಿದಾಗ ಕೆಲ ಕಾಲ ಆರೋಪ-ಪ್ರತ್ಯಾರೋಪ ನಡೆಯಿತು. ಅಂತಿಮವಾಗಿ ಸ್ಪೀಕರ್‌ ಸ್ಥಾನದಲ್ಲಿದ್ದ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಆ ಮಾತುಗಳನ್ನು ಕಡತದಿಂದ ತೆಗೆಸಿದರು.

ವಿದ್ಯಾರ್ಥಿಗಳು ಜೈಲು ಕೈದಿಗಳಿಗಿಂತ ಕಡೆ:

ಕಾಂಗ್ರೆಸ್‌ನ ರೂಪಾ ಶಶಿಧರ್‌, ಬರದ ಹಿನ್ನೆಲೆಯಲ್ಲಿ ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಸೌಕರ್ಯ ಒದಗಿಸಬೇಕು. ಗುಣಮಟ್ಟದ ಆಹಾರ ನೀಡಬೇಕು. ಜೈಲುಗಳಲ್ಲಿರುವ ಕೈದಿಗಳಿಗೆ ಮಿತಿ ಇಲ್ಲದೆ ಆಹಾರ ನೀಡುವ ಸರ್ಕಾರ ವಿದ್ಯಾರ್ಥಿಗಳಿಗೆ ಇಂತಿಷ್ಟೇ ಗ್ರಾಂ ತಿನ್ನಬೇಕು. ಇಂತಿಷ್ಟೇ ವೆಚ್ಚ ಮಾಡಬೇಕು ಎಂದು ಮಿತಿ ಹೇರುತ್ತದೆ. ಜೈಲುಗಳ ಕೈದಿಗಳಿಗಿಂತ ಕೀಳಾಗಿ ಹಾಸ್ಟೆಲ್‌, ವಸತಿ ನಿಲಯದ ವಿದ್ಯಾರ್ಥಿಗಳನ್ನು ನೋಡುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಗಳಲ್ಲಿ ಮೋದಿ ಸೆಲ್ಫಿ ಪಾಯಿಂಟ್‌: ಕಲಾಪದಲ್ಲಿ ಗದ್ದಲ!

ಬರ ನಿರ್ವಹಣೆಗೆ ಯೋಜನಾ ನಿಧಿ ಸ್ಥಾಪಿಸಿ:

ಕಾಂಗ್ರೆಸ್‌ನ ಶರತ್‌ ಬಚ್ಚೇಗೌಡ ಮಾತನಾಡಿ, ಬರ ನಿರ್ವಹಣೆಗಾಗಿ ಎಂಜಿ-ನರೇಗಾ ಮಾನವ ಕೆಲಸದ ದಿನಗಳನ್ನು ಹೆಚ್ಚಿಸಬೇಕು. ಅಂತರ್ಜಲ ವೃದ್ಧಿ ಹಾಗೂ ನೀರಿನ ಬಳಕೆಗೆ ಆದ್ಯತೆ ನೀಡಿ ಮಿಶ್ರ ತಳಿ, ದೇಸಿ ತಳಿಗೆ ಪ್ರೋತ್ಸಾಹ ನೀಡಬೇಕು. ಎಸ್ಸಿಪಿ/ಟಿಎಸ್‌ಪಿ ನಿಧಿಯಂತೆ ಪ್ರಕೃತಿ ವಿಕೋಪ ತಡೆಯಲು ವಿಶೇಷ ನಿಧಿ ಸ್ಥಾಪಿಸಬೇಕು. ಬರ ತಡೆಗೆ ಸಮಿತಿ ಮಾಡಿ ಯೋಜನಾ ನಿಧಿ ಸ್ಥಾಪಿಸಬೇಕು ಎಂದು ಸಲಹೆ ನೀಡಿದರು.

ಕಾಂಗ್ರೆಸ್‌ನ ಅಶೋಕ್‌ ರೈ ಮಾತನಾಡಿ, ಸುಳ್ಯ ಭಾಗದಲ್ಲಿ ಹಳದಿ ರೋಗದ ಕಾಟ ಹೆಚ್ಚಾಗಿದೆ. ಸುಳ್ಯ ತಾಲೂಕಿನ 10 ಗ್ರಾಮದಲ್ಲಿ ಹಳದಿ ರೋಗ ಬಂದಿದ್ದು 5,100 ಹೆಕ್ಟೇರ್‌ ಅಡಿಕೆ ಬೆಳೆ ನಾಶ ಆಗುವ ಸ್ಥಿತಿ ಬಂದಿದೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

click me!