'ಸುರೇಶ್ ಅಂಗಡಿ ಮೃತದೇಹ ತಂದು ಕೊಡಲು ಆಗಲಿಲ್ಲ ಇವರ ಕೈಯಲ್ಲಿ'

By Suvarna News  |  First Published Aug 29, 2021, 7:29 PM IST

* ರಂಗೇರಿದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ
* ಬಿಜೆಪಿ ಸರ್ಕಾರದ ಮೇಲೆ ಡಿಕೆ ಶಿವಕುಮಾರ್ ವಾಗ್ದಾಳಿ
* ಸುರೇಶ್ ಅಂಗಡಿಯವರನ್ನು ಕೊನೆ ಕಾಲದಲ್ಲಿ ನಡೆಸಿಕೊಂಡಿದ್ದು ಹೇಗೆ?
* ಬಿಜೆಪಿ ಸರ್ಕಾರದಿಂದ ಯಾವುದೇ ಜನಪರ ಕೆಲಸಗಳಾಗುತ್ತಿಲ್ಲ


ಬೆಳಗಾವಿ(ಆ. 29)  ಸೆಪ್ಟೆಂಬರ್ 3ರಂದು ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆಯಲಿದ್ದು  ಬೆಳಗಾವಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಸುದ್ದಿಗೋಷ್ಠಿ ನಡೆಸಿದ್ದಾರೆ.

ಕೇಂದ್ರ ಸಚಿವ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಅಮಾನವೀಯವಾಗಿ ಸುರೇಶ್ ಅಂಗಡಿ ಅಂತ್ಯಸಂಸ್ಕಾರ ಮಾಡಿತು.  ಕೋವಿಡ್ ನಲ್ಲಿ ಜನ ಸತ್ತು ಹೋದ್ರು, ನನ್ನ ಮಿತ್ರ ಕೇಂದ್ರ ಸಚಿವ ಸುರೇಶ್ ಅಂಗಡಿ ತೀರಿಕೊಂಡ್ರು. ನನಗೆ ರಾಜಕಾರಣ ಮಾತನಾಡಲು ಇಷ್ಟ ಇಲ್ಲ ಆದ್ರೆ ತುಂಬಾ ದುಃಖ, ನೋವಾಗುತ್ತೆ. ಓರ್ವ ಕೇಂದ್ರ ಸಚಿವ ಮೃತದೇಹ ತಂದು ಕೊಡಲು ಆಗಲಿಲ್ಲ ಇವರ ಕೈಯಲ್ಲಿ ಎಂದು ಆಡಳಿತದ ವಿರುದ್ಧ ವಾಗ್ದಾಳಿ ಮಾಡಿದರು.

Tap to resize

Latest Videos

ಕ್ಷೇತ್ರದ ಜನರಿಗೆ ಸುರೇಶ್ ಅಂಗಡಿ ದರ್ಶನ ಕೊಡಿಸಲು ಆಗಲಿಲ್ಲ. ನಾನು ಬೇಕು ಅಂತಲೇ ಲೋಕಸಭೆ ಉಪಚುನಾವಣೆಯಲ್ಲಿ ಮಾತನಾಡಲಿಲ್ಲ. ಏಕಂದ್ರೆ ಅವರ ಧರ್ಮಪತ್ನಿ ಚುನಾವಣೆಗೆ ನಿಂತಿದ್ರು. ಇಂಡಿಯನ್ ಏರ್‌ಫೋರ್ಸ್ ಫ್ಲೈಟ್‌ನಲ್ಲಿ  ಅವರ ಕುಟುಂಬಕ್ಕೆ ಮೃತದೇಹ ತಂದುಕೊಡಕ್ಕಾಗಲಿಲ್ಲ. ಎಷ್ಟು ಅಮಾನವೀಯವಾಗಿ ಕೇಂದ್ರ ಸರ್ಕಾರ ಶವ ಸಂಸ್ಕಾರ ಮಾಡಿತು. ಇದಕ್ಕೆ ವೋಟ್ ಹಾಕಬೇಕಾ ಜನ? ಎಂದು ಪ್ರಶ್ನೆ ಮಾಡಿದರು.

ಕೋವಿಡ್ ಸಮಯದಲ್ಲಿ ಆಸ್ಪತ್ರೆ, ಬೆಡ್, ಔಷಧಿ, ಆಕ್ಸಿಜನ್ ಕೊಡಕ್ಕಾಗಲಿಲ್ಲ. ಕೊನೆಗೆ ಹೆಣ ಹೂಳಬೇಕಾದ್ರು ಕ್ಯೂ ನಿಲ್ಲಿಸಿಬಿಟ್ಟರು. ಬಿಜೆಪಿ ಪ್ರಣಾಳಿಕೆ ಯಲ್ಲಿ ಶವ ಸಂಸ್ಕಾರ ಫ್ರೀ ಅಂತಾ ಹೇಳಿದ್ದಾರೆ. ಹೆಣ ಹೂಳೋದು ಫ್ರೀ ಅಂತೆ ನಾಚಿಕೆಯಾಗಬೇಕು ಇವರಿಗೆ ನಾವು ಸಾಯೋದನ್ನು ನಿಲ್ಲಿಸುತ್ತೇವೆ, ಫ್ರೀ ಆರೋಗ್ಯ, ಆಕ್ಸಿಜನ್ ವ್ಯಾಕ್ಸಿನ್ ಕೊಡ್ತೀವಿ ಅನ್ನೋದು ನಿಮ್ಮ ಕಮಿಟಮೆಂಟ್ ಆಗಬೇಕು. ಫ್ರೀ ಅಂತ್ಯ ಸಂಸ್ಕಾರ ಮಾಡ್ತೀವಿ ಅನ್ನೋದು ನಮ್ಮ ಸಂಸ್ಕಾರ, ಸಂಸ್ಕೃತಿಗೆ ದೊಡ್ಡ ಅವಮಾನ ಎಂದರು.

ಕರ್ನಾಟಕ ಬಿಜೆಪಿಯಲ್ಲಿ ಮತ್ತೆ ಭಿನ್ನಮತ

ನಾಡದ್ರೋಹಿ ಎಂಇಎಸ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸಾಫ್ಟ್ ಕಾರ್ನರ್ ತೋರಿಸಿದ್ರಾ ಎನ್ನುವ ಪ್ರಶ್ನೆಯೂ ಮೂಡಿತು. ಎಂಇಎಸ್ ಕಾಂಗ್ರೆಸ್ ಬಿ ಟೀಮ್ ಎಂಬ ಬಿಜೆಪಿ ಶಾಸಕ ಅಭಯ್ ಪಾಟೀಲ್ ಆರೋಪಕ್ಕೂ ಉತ್ತರ ನೀಡಿದರು. ಅವರ ಸ್ವಂತಕ್ಕೆ ಏನ್ ಬೇಕಾದರೂ ಅಂದುಕೊಳ್ಳಲಿ, ನಾವು ಯಾರನ್ನು ಅಗೌರವದಿಂದ ಕಾಣಲ್ಲ. ಬಿಜೆಪಿಯವರನ್ನು ಗೌರವದಿಂದ ಕಾಣ್ತೀವಿ, ಎಂಇಎಸ್‌ನವರನ್ನು ಗೌರವದಿಂದ ಕಾಣ್ತೀವಿ. ಕನ್ನಡ ಸೇನೆಗೂ, ಜನತಾದಳಕ್ಕೂ ಗೌರವದಿಂದ ಕಾಣ್ತೀವಿ. ಅವರವರ ಪಾರ್ಟಿ ನಾಯಕರು ಏನ್ ಬೇಕಾದರೂ ಮಾತನಾಡಿಕೊಳ್ಳಲಿ. ನಮ್ಮ ಪಕ್ಷದ ಚಿಂತನೆ ಬೆಳಗಾವಿ ಮಹಾನಗರ ಜನತೆಯ ವಿಚಾರದಲ್ಲಿ ಮಾತ್ರ ಎಂದರು.

ಕಾಂಗ್ರೆಸ್‌ನಲ್ಲಿ ಪ್ರಮೋಷನ್ ಸಿಗಬೇಕಂದ್ರೆ ಜೈಲಿಗೆ ಹೋಗಬೇಕು ಎಂಬ ಸಿ‌.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿ, ಸಿ.ಟಿ.ರವಿ ಹೇಳಿಕೆಗೆ ಬಹಳ ಸಂತೋಷ ಬಹಳ ಸಂತೋಷ ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರಿಗೆ ಸರ್ಟಿಫಿಕೇಟ್ ಅವಶ್ಯಕತೆ ಇದೆ ಪಾಪ ನಮ್ಮ ಯಡಿಯೂರಪ್ಪರವರಿಗೂ ಒಂದು ಸರ್ಟಿಫಿಕೇಟ್ ಇತ್ತು. ಅಮಿತ್ ಷಾ ಸರ್‌ಗೂ ಒಂದು ಸರ್ಟಿಫಿಕೇಟ್ ಇತ್ತು. ಉಮಾಭಾರತಿಯವರಿಗೂ ಒಂದು ಸರ್ಟಿಫಿಕೇಟ್ ಇತ್ತು ಬೇಕಾದಷ್ಟು ಹೆಸರುಗಳಿವೆ ಪಟ್ಟಿ ಬೇಕಾ, ಇನ್ನೆಷ್ಟು ಹೆಸರು ಬೇಕು?

ಡಿಕೆಶಿ ಕೋತ್ವಾಲ್ ರಾಮಚಂದ್ರ ಶಿಷ್ಯ ಎಂಬ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿ  ಸಿ.ಟಿ.ರವಿ ಅವರೇ ಶಿಷ್ಯ ಇರಬೇಕು ಎಂದು ಠಕ್ಕರ್ ಕೊಟ್ಟರು.

ಸಾವಿರ ಕೋಟಿ ಸ್ಮಾರ್ಟ್ ಸಿಟಿ ಯೋಜನೆಗೆ ಸಾವಿರ ಕೋಟಿ ಬಂತು ಎಲ್ಲಿಗೆ ಬಂದಿದೆ? 25 ಪರ್ಸೆಂಟ್ ಅಂತೆ ಕಮಿಷನ್ ನನಗೆ ನಾಚಿಕೆ ಯಾಗುತ್ತದೆ.. ಶೇಕಡ 50ರಷ್ಟು ಕಾಮಗಾರಿ ಸಹ ಇಂಪ್ಲಿಮೆಂಟ್ ಆಗಿಲ್ಲ. ಸ್ಮಾರ್ಟ್ ಸಿಟಿ ಕಾಮಗಾರಿ ಹಗರಣ ಬಗ್ಗೆ ತನಿಖೆಗೆ ಪ್ರತ್ಯೇಕ ಕಮಿಟಿ ರಚನೆಯಾಗಬೇಕು ಎಂದರು.

ಅಸೆಂಬ್ಲಿಯಲ್ಲಿ ಕಮಿಟಿ‌ ಇದೆ, ಅದರ ಬಗ್ಗೆ ವರದಿ ತರಿಸುತ್ತೇವೆ. ಸ್ಮಾರ್ಟ್ ಸಿಟಿಯಲ್ಲಿ ಏನ್ ಆಗಿದೆ ಒಂದು ರಿಪೋರ್ಟ್ ತರಿಸುತ್ತೇವೆ. ಮೊದಲ ಕಂತಿನಲ್ಲಿ ಬಂದ ಸಾವಿರ ಕೋಟಿ ಹಣ ಬಂದಿದ್ದು ಸಣ್ಣ ಮೊತ್ತವಲ್ಲ. ನಮ್ಮ ಫಿರೋಜ್ ಸೇಠ್ ಶಾಸಕರಾಗಿದ್ದಾಗ ಹಲವು ಜನಪರ ಯೋಜನೆ ತಂದಿದ್ರು. ಇಂದಿನ ಶಾಸಕರು ಸ್ವಂತಕ್ಕೆ ಅನುಕೂಲ ಆಗುವಂತೆ ಕಾರ್ಯಕ್ರಮ ರೂಪಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.

ಬೆಳಗಾವಿ ಮಹಾನಗರ ಜನತೆಗೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭರಪೂರ ಭರವಸೆಯನ್ನು ಇದೇ ಸಂದರ್ಭದಲ್ಲಿ ನೀಡಿದರು. ಕೋವಿಡ್‌ನಿಂದ ಜನ ತೊಂದರೆ ಯಾಗಿದ್ದಾರೆ ವ್ಯಾಪಾರ ಮುಚ್ಚಿ ಸಂಕಷ್ಟದಲ್ಲಿದವರಿಗೆ ಏನ್ ಸಹಾಯ ಮಾಡಿದೀರಿ? ಸವಿತಾ ಸಮಾಜ, ಡ್ರೈವರ್, ಬೀದಿ ಬದಿ ವ್ಯಾಪಾರಸ್ಥರು, ಅಸಂಘಟಿತ ಕಾರ್ಮಿಕರಿಗೆ ಹತ್ತು ಸಾವಿರ ಕೊಡಿ ಎಂದ್ವಿ. 28 ಸಾವಿರ ಕೋಟಿ ಕೊಟ್ಟಿದ್ದಾರೆ ಅಂದ್ರಿ ಬೆಳಗಾವಿಯಲ್ಲಿ ಯಾರಿಗೆ ಕೊಟ್ಟಿದ್ದೀರಾ? ಯಡಿಯೂರಪ್ಪ 1200 ಕೋಟಿ, 800 ಕೋಟಿ ಕೋವಿಡ್ ಪ್ಯಾಕೇಜ್ ಘೋಷಣೆ ಮಾಡಿದ್ರು.. ಯಾವ ಬೀದಿ ವ್ಯಾಪಾರಿ, ಅಸಂಘಟಿತ ಕಾರ್ಮಿಕರಿಗೆ ದುಡ್ಡು ಕೊಟ್ಟಿದ್ದೀರಿ ಪ್ಲೀಸ್ ಪಟ್ಟಿ ಹಾಕಿ. ನೀವು ಯಾರ ಬಗ್ಗೆ ಕಾಳಜಿ ವಹಿಸಲಿಲ್ಲ ಎಂದು ಬಿಜೆಪಿಯನ್ನು ಟೀಕಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ತೆರಿಗೆ ಹಣದಲ್ಲಿ ಎಲ್ಲ ವರ್ಗದವರಿಗೆ ಐದೈದು ಸಾವಿರ ರೂ. ಸಹಾಯ ಮಾಡುವ ಕಾರ್ಯಕ್ರಮ ರೂಪಿಸುತ್ತೇವೆ. ಗುಜರಾತ್ ಮಾದರಿ ರಾಜ್ಯ ಅಂತೀರಾ, ಕೋವಿಡ್ ಹಿನ್ನೆಲೆ ಒಂದು ವರ್ಷದ ಎಲ್ಲಾ ಟ್ಯಾಕ್ಸ್ ಮನ್ನಾ ಮಾಡಿದ್ದಾರೆ. ಕಾರ್ಪೊರೇಷನ್‌ನಲ್ಲಿ ಕಾಂಗ್ರೆಸ್‌ಗೆ ಮತ ಹಾಕಿದ್ರೆ ಶೇಕಡ 50ರಷ್ಟು ತೆರಿಗೆ ಮನ್ನಾ ಮಾಡ್ತೀವಿ, ಇದು ಫರ್ಮ್ ಕಮಿಟ್‌ಮೆಂಟ್. ಪವರ್ ಮಿನಿಸ್ಟರ್ ಆದಾಗ ಈ ಎಲ್ಲಾ ಬೆಳಗಾವಿ ಸಿಟಿ ರೌಂಡ್ ಹಾಕಿದ್ದೆ. ಆಗಿ‌‌ನ ಶಾಸಕ ಫಿರೋಜ್ ಸೇಠ್ ಒಳ್ಳೆಯ ಕೆಲಸ ಮಾಡಿದ್ರು ದಿ.ಸಂಭಾಜಿ ಪಾಟೀಲ್ ಜೊತೆಯೂ ಒಳ್ಳೆಯ ಸಂಬಂಧವಿತ್ತು. ಬೆಳಗಾವಿ ಇಸ್ ಅ ಸಿಟಿ ವಿತ್ ಲಾಟ್ ಆಫ್ ವೈಬ್ರೇಷನ್ ಇದನ್ನ ಬೆಂಗಳೂರು ಜೊತೆ ನಾವು ಕಾಂಪಿಟ್ ಮಾಡಬೇಕು ಬೆಳಗಾವಿಯಲ್ಲಿ ಉದ್ಯೋಗ ಸೃಷ್ಟಿ ಮಾಡುವ ಕಾರ್ಯಕ್ರಮ ಮಾಡ್ತೀವಿ  ಎಂದು ಡಿಕೆಶಿ ಘೋಷಣೆ ಮಾಡಿದರು. 

click me!