'ಕೈ'ಗೆ ಬಲ: ಡಿಕೆಶಿ, ಜಾರಕಿಹೊಳಿ ಸಮ್ಮುಖದಲ್ಲಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆ

By Suvarna NewsFirst Published Dec 11, 2020, 2:33 PM IST
Highlights

ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದ್ದು, ಜಾರಕಿಹೊಳಿ ಸಮ್ಮುಖದಲ್ಲಿ ಆಪರೇಷನ್ ಹಸ್ತ ಶುರು ಮಾಡಿದೆ.

ಬೆಳಗಾವಿ, (ಡಿ.11): ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆಗಲೇ ಕಾಂಗ್ರೆಸ್ ಉಪಸಮರದ ಅಖಾಡಕ್ಕಿಳಿದಿದ್ದು, ಕಾಂಗ್ರೆಸ್ ಅಭ್ಯರ್ಥಿ ಎನ್ನಲಾದ ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಭರ್ಜರಿ ತಯಾರಿ ನಡೆಸಿದ್ದಾರೆ.

ಕೆಪಿಸಿಸಿ  ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹಾಗೂ  ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಸಮ್ಮುಖದಲ್ಲಿ  ಕಿತ್ತೂರು ಮತಕ್ಷೇತ್ರ ಪ್ರಭಾವಿ ನಾಯಕ  ಬಾಬಾಸಾಹೇಬ್ ಪಾಟೀಲ್ ಅವರು  ಕಾಂಗ್ರೆಸ್‌ಗೆ ಅಧಿಕೃತವಾಗಿ  ಸೇರ್ಪಡೆಯಾದರು.

ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಚಿವ, ಕೈಗೆ ದೊಡ್ಡ ಶಕ್ತಿ ಬಂದಾಂತಾಗಿದೆ ಎಂದ ಡಿಕೆಶಿ

ಬೆಂಗಳೂರಿನ ಕಾಂಗ್ರೆಸ್ ಭವನದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು  ಪಕ್ಷದ ಧ್ವಜ ನೀಡಿ ಬಾಬಾಸಾಹೇಬ್ ಅವರನ್ನು ಪಕ್ಷಕ್ಕೆ ಬರ ಮಾಡಿಕೊಂಡರು.

ಕಿತ್ತೂರು ಮತಕ್ಷೇತ್ರದಲ್ಲಿ ತಮ್ಮದೇ ವರ್ಚಸ್ಸು ಹೊಂದಿರುವ ಬಾಬಾಸಾಹೇಬ್ ಪಾಟೀಲ್ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷೇತರದಿಂದ ಕಣಕ್ಕಿಳಿದು 25 ಸಾವಿರ ಮತ ಪಡೆದಿದ್ದರು.  ಸದ್ಯ ಅವರಿಗೆ ಕಾಂಗ್ರೆಸ್ ಬಲೆ ಬೀಸಿದ್ದು, ಕಿತ್ತೂರು ಕ್ಷೇತ್ರದಲ್ಲಿ ಮುಂದಿನ  ಚುನಾವಣೆಯಲ್ಲಿ  ಕಾಂಗ್ರೆಸ್ ಮೋಡಿ ಮಾಡುವ ಸಾಧ್ಯತೆ ಇದೆ.

ಬಾಬಾಸಾಹೇಬ್ ಅವರೊಂದಿಗೆ ಕಿತ್ತೂರು ಮತಕ್ಷೇತ್ರ ಮಾಜಿ  ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾದರು. ಇದರು ಬೆಳಗಾವಿ ಲೋಕಸಭಾ ಉಪಚುನಾವಣೆಗೂ ಕಾಂಗ್ರೆಸ್ ಸಹಾಯಕವಾಗಲಿದೆ,

click me!