ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಲಕ್ಷ್ಮಿ- ರವಿ ಮಧ್ಯೆ ಸಂಧಾನಕ್ಕೆಈಗಲೂ ರೆಡಿ: ಹೊರಟ್ಟಿ

Published : Dec 26, 2024, 05:17 AM IST
ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಲಕ್ಷ್ಮಿ- ರವಿ ಮಧ್ಯೆ ಸಂಧಾನಕ್ಕೆಈಗಲೂ ರೆಡಿ: ಹೊರಟ್ಟಿ

ಸಾರಾಂಶ

ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಶಾಸಕ ಸಿ.ಟಿ. ರವಿ ಇಬ್ಬರನ್ನೂ ಕರೆದು ಕೂಡಿಸಿ ಪ್ರಕರಣ ಮುಕ್ತಾಯ ಮಾಡಲು ಈಗಲೂ ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.

ಹುಬ್ಬಳ್ಳಿ (ಡಿ.26): ನನ್ನ ಮಾತಿಗೆ ಗೌರವ ಕೊಟ್ಟು ಬರುವುದಾದರೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮತ್ತು ಶಾಸಕ ಸಿ.ಟಿ. ರವಿ ಇಬ್ಬರನ್ನೂ ಕರೆದು ಕೂಡಿಸಿ ಪ್ರಕರಣ ಮುಕ್ತಾಯ ಮಾಡಲು ಈಗಲೂ ಸಿದ್ಧ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಇಬ್ಬರು ಮಕ್ಕಳು ಜಗಳವಾಡಿದರೆ ಸಮಾಧಾನ ಪಡಿಸುವುದು ಹಿರಿಯರ ಕರ್ತವ್ಯ. ಘಟನೆ ನಡೆದ ನಂತರ ಸಿ.ಟಿ.ರವಿ ಕರೆದು ಕೇಳಿದಾಗ ಅವಾಚ್ಯ ಶಬ್ದ ಬಳಸಿಲ್ಲ ಎಂದಿದ್ದಾರೆ. ಹೆಬ್ಬಾಳಕರ ಅವರು ಅವಾಚ್ಯ ಶಬ್ದ ಬಳಸಿದ್ದಾರೆ. ಇಲ್ಲಂದರೆ ನಾನ್ಯಾಕೆ ನನ್ನ ಮರ್ಯಾದೆ ಕಳೆದುಕೊಳ್ಳಲಿ ಎಂದರು. ಆದರೆ ಈಗಲೂ ಪ್ರಕರಣ ಇತ್ಯರ್ಥ ಮಾಡುವಂಥ ಕೆಲಸಕ್ಕೆ ಸಿದ್ಧ ಎಂದರು.

ಸದನದಲ್ಲಿ ಮಹಿಳೆ ಮೇಲೆ ದೌರ್ಜನ್ಯವಾದರೂ ಸಭಾಪತಿ ಮಾತಾಡಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಲಕ್ಷ್ಮೀ ಹೆಬ್ಬಾಳಕರ್ ಒಬ್ಬರು ರಾಜಕಾರಣಿ, ಮಂತ್ರಿ, ಎಂಎಲ್‌ಎ ಎಂಬುದಕ್ಕಿಂತ ಹೆಚ್ಚಾಗಿ ನಮ್ಮ ಮನೆ ಹೆಣ್ಮಗಳಾಗಿದ್ದರೆ ಎಷ್ಟು ಕಾಳಜಿ ವಹಿಸಬೇಕಿತ್ತೊ ಅಷ್ಟೇ ಕಾಳಜಿಯಿಂದ ಕೆಲಸ ಮಾಡಿದ್ದೇವೆ ಎಂದು ಪ್ರತಿಕ್ರಿಯಿಸಿದರು. ನಾನು ಕೊಟ್ಟಂತಹ ತೀರ್ಮಾನ ಶ್ರೇಷ್ಠ ತೀರ್ಮಾನ ಅಂತ ಇಡೀ ದೇಶ ನೋಡಿದೆ. ಬೆಂಕಿ ಹತ್ತಿದಾಗ ತುಪ್ಪ ಸುರಿವ ಕೆಲಸ ಮಾಡಬಾರದು ಎಂದು ಅವರು ಸಮರ್ಥಿಸಿಕೊಂಡರು.

ಧರ್ಮಸ್ಥಳಕ್ಕೆ ನಾನು ಬಿರ್ತಿನಿ, ನೀವು ಬನ್ನಿ ಆಣೆ ಮಾಡಿ: ಸಿ.ಟಿ.ರವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ಸವಾಲು

ಸಿಐಡಿ ಮಹಜರು ಮಾಡಲು ಬರಲ್ಲ, ವಿಚಾರಣೆ ಮಾಡಲಿ: ಸಿಐಡಿಯವರು ವಿಧಾನ ಪರಿಷತ್ತಿನಲ್ಲಿ ಮಹಜರು ಮಾಡಲು ಬರುವುದಿಲ್ಲ. ಅಲ್ಲಿ ಟೇಬಲ್‌ ಕುರ್ಚಿಗಳನ್ನು ಮಹಜರು ಮಾಡುತ್ತಾರೆಯೇ? ಎಂದ ಬಸವರಾಜ ಹೊರಟ್ಟಿ, ಸಿಐಡಿ ವಿಚಾರಣೆ ಮಾಡಲಿ, ಆಮೇಲೆ ನಾವು ಏನು ಮಾಡಬೇಕು ಎನ್ನುವುದನ್ನು ಯೋಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಸಿ.ಟಿ.ರವಿ ಅವರನ್ನು ಬೇರೆ ಕಡೆ ಕರೆದುಕೊಂಡು ಹೋಗಿದ್ದು ಸರಿಯಲ್ಲ. ಈ ಕುರಿತಂತೆ 7 ಪುಟಗಳ ಪತ್ರ ಬರೆದು ದೂರು ಕೊಟ್ಟಿದ್ದಾರೆ. ಹಕ್ಕುಚ್ಯುತಿ ಆಗಿದೆ. ಆ ರೀತಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಹೊರಟ್ಟಿ ತಿಳಿಸಿದರು.

ಸಿಐಡಿ ತನಿಖೆಗೆ ಇಲ್ಲ ಎನ್ನಲಾಗದು: ‘ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಪ್ರಕರಣವನ್ನು ಸಿಐಡಿಗೆ ಕೊಟ್ಟಿರುವುದು ರಾಜ್ಯ ಸರ್ಕಾರದ ನಿರ್ಧಾರ. ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸ್ಥಳ ಮಹಜರಿಗೆ ಪರಿಷತ್‌ ಅವಕಾಶ ಕೊಡುವ ಕುರಿತು ಚರ್ಚೆ ನಡೆಸಿದ್ದೇವೆ. ಅಂಥ ವಾತಾವರಣ ನಿರ್ಮಾಣ ಆದರೆ ಅವಕಾಶ ನೀಡಬೇಕಾಗುತ್ತದೆ’ ಎಂದು ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಸಿಐಡಿಗೆ ಕೊಟ್ಟಿರುವುದಾಗಿ ಗೃಹ ಸಚಿವರು ಈಗಷ್ಟೇ ಹೇಳಿದರು. ಸಿಐಡಿಗೆ ಕೊಡುವ ಬಗ್ಗೆ ನಮ್ಮನ್ನು ಕೇಳುವುದಕ್ಕೆ ಬರುವುದಿಲ್ಲ. ಸ್ಥಳ ಮಹಜರಿಗೆ ಸಂಬಂಧಪಟ್ಟಂತೆ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಎಜಿ ಅವರೊಂದಿಗೆ ಚರ್ಚೆ ನಡೆಸುತ್ತೇವೆ. 

ಸಿ.ಟಿ.ರವಿ ಕ್ಷಮೆ ಕೇಳಿದ್ದರೆ ಮರ್ಯಾದೆ ಉಳೀತಿತ್ತು: ಸಚಿವ ಚಲುವರಾಯಸ್ವಾಮಿ

ಆ ತರಹದ ವಾತಾವರಣ ನಿರ್ಮಾಣವಾದರೆ ಅವಕಾಶ ಕೊಡಬೇಕಾಗುತ್ತದೆ. ನಮ್ಮ ಕಾರ್ಯದರ್ಶಿ, ಕಾನೂನು ತಜ್ಞರು ಈಗಾಗಲೇ ಚರ್ಚೆ ನಡೆಸುತ್ತಿದ್ದಾರೆ’ ಎಂದರು. ‘ನಮಗೆ ಕೊಟ್ಟಿರುವ 2 ದೂರುಗಳನ್ನು ಪೊಲೀಸರಿಗೆ ಕೊಟ್ಟಿದ್ದೇವೆ. ಸಿಐಡಿ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ನಮ್ಮ ನಿಯಮನೇ ಬೇರೆ, ರಾಜ್ಯ ಸರ್ಕಾರದ ನಿಯಮಗಳು ಬೇರೆ. ನಾವು ನಮ್ಮ ನಿಯಮ ಬಿಟ್ಟು ಏನು ಮಾಡಲೂ ಬರುವುದಿಲ್ಲ. ಮಾಡುವುದೂ ಇಲ್ಲ’ ಎಂದರು. ‘ಇದು ಮುಗಿದು ಹೋದ ಅಧ್ಯಾಯ ಎಂದು ನಾವು ತೀರ್ಮಾನ ಮಾಡಿದ್ದು ನಮ್ಮ ನಿಯಮದ ಪ್ರಕಾರ. ನಾವು ರೂಲಿಂಗ್‌ ಕೊಟ್ಟ ಮೇಲೆ ಮುಗಿಯಿತು. ಅದನ್ನೇ ನಾನು ಹೇಳಿದ್ದು’ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ