Karnataka BJP ಸಿಎಂ ಮಾಡುವಾಗಲೇ 6 ತಿಂಗ್ಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ, ಜಾರಕಿಹೊಳಿ ಬಾಂಬ್

By Suvarna News  |  First Published Feb 2, 2022, 6:41 PM IST

* ನಮ್ಮ ಮಾಹಿತಿ ಪ್ರಕಾರ ಬಸವರಾಜ ಬೊಮ್ಮಾಯಿ 6 ತಿಂಗಳ ಸಿಎಂ
* ಸಿಎಂ ಮಾಡುವಾಗಲೇ 6 ತಿಂಗಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ
* ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ ಜಾರಕಿಹೊಳಿ


ಕೊಪ್ಪಳ, (ಫೆ.02): ಕರ್ನಾಟಕದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಸುದ್ದಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಹೇಳಿದ್ದಾರೆ.

ಇದರ ಮಧ್ಯೆ  ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಈ ಬಾರಿಯೂ ಮೂವರು ಸಿಎಂಗಳು ಆಗಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಹೊಸ ಬಾಂಬ್ ಸಿಡಿಸಿದ್ದಾರೆ.

Latest Videos

undefined

Cabinet Reshuffle ಸಿಎಂಗೂ ಮುನ್ನ ದಿಲ್ಲಿಗೆ ಹೋಗಿ ಕುಂತ ಶ್ರೀರಾಮುಲು, ಡಿಸಿಎಂ ಆಸೆ ಈಡೇರುತ್ತಾ?

ಕೊಪ್ಪಳದಲ್ಲಿ (Koppal) ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ನಮ್ಮ ಮಾಹಿತಿ ಪ್ರಕಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) 6 ತಿಂಗಳ ಸಿಎಂ ಆಗಿದ್ದಾರೆ. ಸಿಎಂ ಬೊಮ್ಮಾಯಿಗೆ 6 ತಿಂಗಳ ಅವಕಾಶ ಕೊಟ್ಟಿದ್ದಾರೆ. ಸಿಎಂ ಮಾಡುವಾಗಲೇ 6 ತಿಂಗಳು ಎಂದು ಹೇಳಿದ್ದಾರೆ. ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ ಕೊಟ್ಟಿದ್ದಾರೆ ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.

 ಕಾಂಗ್ರೆಸ್‌ನಲ್ಲಿ (Congress) ಯಾವುದೇ ಬಣಗಳು ಇಲ್ಲ. ಸಿಎಂ ಆಗುವ ಸಾಮರ್ಥ್ಯ ನಾಲ್ಕೈದು ನಾಯಕರಿಗಿದೆ. ನನ್ನನ್ನು ಬಿಟ್ಟು ನಮ್ಮಲ್ಲಿ 4-5 ನಾಯಕರಿಗೆ ಸಾಮರ್ಥ್ಯವಿದೆ ಎಂದು ಕಾಂಗ್ರೆಸ್ ಅಧಿಕಾರ, ಮುಖ್ಯಮಂತ್ರಿ ಬಗ್ಗೆ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಶ್ರೀರಾಮುಲು ಡಿಸಿಎಂ ಬೇಡಿಕೆ ವಿಚಾರವಾಗಿ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿ, ಡಿಸಿಎಂ ಆದ್ರೂ ಕೆಲಸ ಮಾಡಬಹುದು. ಡಿಸಿಎಂ ಇರದೆ ಹೋದ್ರೂ ಕೆಲಸ ಮಾಡಬಹುದು ಎಂದು ಟಾಂಗ್ ಕೊಟ್ಟರು.

ನಮ್ಮ ಸಮುದಾಯಕ್ಕೆ 7.5 ಮೀಸಲಾತಿ ಕೊಡ್ತೀವಿ ಎಂದು ವಾಗ್ದಾನ ಮಾಡಿದ್ರು. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ಮೀಸಲಾತಿ ಕೊಡ್ತೀನಿ ಎಂದಿದ್ರು. ಇದೀಗ 24 ತಿಂಗಳು ಕಳೆದಿದೆ, ಸಮಾಜ‌ ಮುಂದಿಟ್ಟು ಅಧಿಕಾರ ಪಡೆಯೋ ಗಿಮಿಕ್ ಇದು ಕಿಡಿಕಾರಿದರು.

ಮೀಸಲಾತಿ ಕೊಡ್ತೀನಿ ಅಂದಿದ್ದಕ್ಕೆ ಸಮಾಜ ಬಿಜೆಪಿ ಪರ ವೋಟ್ ಹಾಕಿದ್ರು. ಬಿಜೆಪಿಯಲ್ಲೂ ಯಡಿಯೂರಪ್ಪ ಬಣ, ಆರ್​ಎಸ್​ಎಸ್​ ಬಣ ಎಂದು ಇದೆ. ಎಲ್ಲ ಪಕ್ಷದಲ್ಲೂ ಗುಂಪುಗಳಿವೆ. ನಮ್ಮ ಪಕ್ಷದಲ್ಲೂ ಗುಂಪುಗಳಿವೆ. ಹಾಗಂತ ನಾವು ಮುಳುಗಿ ಹೋಗಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ ಎಂದ ಯತ್ನಾಳ್ 
ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹವಾ ಮುಗಿದಿದೆ. ಇನ್ನೂ 3-4 ಜನರಿದ್ದಾರೆ ಅವರದ್ದೂ ಮುಗಿಯಲು ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ರೀತಿ ಬದಲಾವಣೆ ಅಗತ್ಯವಾಗಿದೆ ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬುಧವಾರ ಹೇಳಿಕೆ ನೀಡಿದ್ದಾರೆ.

ಬೊಮ್ಮಾಯಿ ಬದಲಾವಣೆ ಆಗುತ್ತಾರೆ ಅಂತಾ ನಾನು ಹೇಳಿಲ್ಲ. ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತಾ ಹೇಳುತ್ತಿದ್ದೇನೆ. ಇದಕ್ಕಾಗಿ ಪಕ್ಷದ ವರಿಷ್ಠರು ಹೊಸ ಪ್ರಕ್ರಿಯೆ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಮುಂದಿನ ಚುನಾವಣೆಗೆ ಒಳ್ಳೆ ಟೀಮ್ ರಚಿಸಿ ಮತ್ತೆ ಅಧಿಕಾರಕ್ಕೆ ಬರುವ ಪ್ಲ್ಯಾನ್ ಇಟ್ಟಿಕೊಂಡು ಬದಲಾವಣೆ ಮಾಡಬೇಕು ಎಂದು ಬೆಳಗಾವಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

click me!