Karnataka Politics: ಬೊಮ್ಮಾಯಿ ಸಂಪುಟ ಸರ್ಕಸ್‌ ವಿಳಂಬಕ್ಕೆ ಏಳು ಕಾರಣಗಳು!

Published : Apr 08, 2022, 07:56 AM ISTUpdated : Apr 08, 2022, 08:09 AM IST
Karnataka Politics: ಬೊಮ್ಮಾಯಿ ಸಂಪುಟ ಸರ್ಕಸ್‌ ವಿಳಂಬಕ್ಕೆ ಏಳು ಕಾರಣಗಳು!

ಸಾರಾಂಶ

* ಬೊಮ್ಮಾಯಿ ಸಂಪುಟ ಸರ್ಕಸ್‌ ವಿಳಂಬಕ್ಕೆ ಏಳು ಕಾರಣಗಳು * ರಾಜ್ಯ ನಾಯಕರ ಜತೆ ಚರ್ಚಿಸಿ ಮುಂದುವರಿಯಲು ನಡ್ಡಾ ಇಂಗಿತ * ಬಿಜೆಪಿ  ಅಧ್ಯಕ್ಷ ನಡ್ಡಾ ಬಂದು ಹೋಗುವವರೆಗೂ ಯಥಾಸ್ಥಿತಿ

ಬೆಂಗಳೂರು(ಏ. 08)   ಸಾಕಷ್ಟುಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ನೇತೃತ್ವದ ಬಿಜೆಪಿ ಸರ್ಕಾರದ (Karnataka Cabinet) ಸಂಪುಟ ಕಸರತ್ತು ಮತ್ತಷ್ಟುವಿಳಂಬವಾಗಲಿದ್ದು, ಈ ತಿಂಗಳ 16 ಮತ್ತು 17ರಂದು ನಡೆಯಲಿರುವ ಪಕ್ಷದ ರಾಜ್ಯ (BJP Executive Meet) ಕಾರ್ಯಕಾರಿಣಿ ಬಳಿಕ ರೂಪರೇಷೆ ಸಿದ್ಧವಾಗಲಿದೆ.

ಈ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಆಗಮಿಸಲಿದ್ದು, ಇದೇ ಸಂದರ್ಭ ಪಕ್ಷದ ವಿವಿಧ ಹಂತದ ರಾಜ್ಯ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಚುನಾವಣೆಗೆ ಪೂರಕವಾಗಿ ಸಂಪುಟ ಕಸರತ್ತು, ನಿಗಮ ಮಂಡಳಿಗಳ ನೇಮಕ ಮತ್ತಿತರ ಅಂಶಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲಿದ್ದಾರೆ. ಬಳಿಕ ದೆಹಲಿಗೆ ವಾಪಸಾಗಿ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಮತ್ತಿತರರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ.

ಹೀಗಾಗಿ, ಬಹು ನಿರೀಕ್ಷೆಯೊಂದಿಗೆ ದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ನಡ್ಡಾ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರೂ ಫಲಿತಾಂಶ ಲಭಿಸದೇ ಇರುವುದರಿಂದ ಅವರಿಗೆ ತುಸು ನಿರಾಸೆ ಉಂಟಾಗಿದೆ. ಕಳೆದ ಬಾರಿಯೂ ದೆಹಲಿಗೆ ಇದೇ ವಿಷಯಕ್ಕಾಗಿ ತೆರಳಿದ್ದ ಬೊಮ್ಮಾಯಿ ಅವರು ಬರಿಗೈಲಿ ವಾಪಸಾಗಿದ್ದರು.

ವಿಳಂಬಕ್ಕೆ ಕಾರಣ ಏನಿರಬಹುದು?: 1.ಇದು ಕೊನೆಯ ಸಂಪುಟ ಕಸರತ್ತು. ವಿಸ್ತರಣೆ ಅಥವಾ ಪುನಾರಚನೆ ಏನೇ ಮಾಡಿದರೂ ಚುನಾವಣೆವರೆಗೆ ಮತ್ತೆ ಬದಲಾವಣೆ ಮಾಡಲಾಗುವುದಿಲ್ಲ. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಪೂರಕವಾಗಿ ಸಂಪುಟ ರಚಿಸಬೇಕು ಎಂಬ ಇರಾದೆ ವರಿಷ್ಠರದ್ದು. ಹೀಗಾಗಿಯೇ ಅಳೆದೂ ತೂಗಿ ನಿರ್ಧಾರ ತೆಗೆದುಕೊಳ್ಳಲು ಬಯಸಿದ್ದಾರೆ.

2.ಇದೇ ಮೊದಲ ಬಾರಿಗೆ ಸಂಪುಟ ಕಸರತ್ತಿನಲ್ಲಿ ಬಿಜೆಪಿ ವರಿಷ್ಠರು ರಾಜ್ಯ ನಾಯಕರೊಂದಿಗೆ ಚರ್ಚಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷ ಚುನಾವಣೆ ಎದುರಿಸಬೇಕಾಗಿರುವುದರಿಂದ ಪಕ್ಷದ ಹಿರಿಯ ಮುಖಂಡರೊಂದಿಗೆ ಚರ್ಚಿಸುವುದು ಸೂಕ್ತ ಎಂಬ ನಿಲವಿಗೆ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಂದಿರಬಹುದು ಎನ್ನಲಾಗಿದೆ.

3.ಸಂಪುಟ ವಿಸ್ತರಣೆಗಿಂತ ಸಂಪುಟ ಪುನಾರಚನೆ ಬಗ್ಗೆ ರಾಜ್ಯದ ಹಲವು ನಾಯಕರು ಹಾಗೂ ಸಂಘ ಪರಿವಾರದ ಮುಖಂಡರು ಒಲವು ತೋರಿದ್ದರಿಂದ ತರಾತುರಿಯಲ್ಲಿ ತೀರ್ಮಾನ ತೆಗೆದುಕೊಂಡರೆ ಅದು ಬಿಸಿ ತುಪ್ಪವಾಗಿ ಪರಿಣಿಮಿಸಬಹುದು ಎಂಬ ಆತಂಕವೂ ಬಿಜೆಪಿ ವರಿಷ್ಠರಲ್ಲಿದೆ. ಅದರ ಬದಲು ರಾಜ್ಯದ ಮುಖಂಡರೊಂದಿಗೆ ಸಮಾಲೋಚನೆ ಮಾಡಿ ನಿರ್ಧಾರ ಕೈಗೊಳ್ಳೋಣ ಎಂದುಕೊಂಡಿರಬಹುದು.

4.ಪುನಾರಚನೆಯೇ ಖಾತ್ರಿಯಾದಲ್ಲಿ ಹಾಲಿ ಸಚಿವರ ಪೈಕಿ ಯಾರನ್ನು ಕೈಬಿಡಬೇಕು? ಕೈಬಿಡಬೇಕಾದವರನ್ನು ಮನವೊಲಿಸುವುದು ಹೇಗೆ? ಹಾಗೆ ಕೈಬಿಟ್ಟವರಿಗೆ ಪಕ್ಷದಲ್ಲಿ ಯಾವ ರೀತಿಯ ಜವಾಬ್ದಾರಿ ನೀಡಬಹುದು ಎಂಬುದರ ಬಗ್ಗೆಯೂ ರಾಜ್ಯ ಮುಖಂಡರೊಂದಿಗೆ ಚರ್ಚಿಸಲು ವರಿಷ್ಠರು ಉದ್ದೇಶಿಸಿರಬಹುದು.

Karnataka Politics: ಗೃಹ ಸಚಿ​ವರು ಖಳ​ನ​ಟನ ಪಾತ್ರ ಮಾಡ್ತಿ​ದ್ದಾ​ರಾ?: ಕುಮಾ​ರ​ಸ್ವಾ​ಮಿ

5.ರಾಜ್ಯ ಕಾರ್ಯಕಾರಿಣಿಗೆ ನಡ್ಡಾ ಅವರು ಆಗಮಿಸುವುದು ನಿಶ್ಚಿತವಾಗಿದೆ. ಅವರು ಬರುವ ಮೊದಲು ಸಂಪುಟ ಕಸರತ್ತು ಕೈಗೊಂಡು ಭಿನ್ನಮತ ಉದ್ಭವಿಸಿದಲ್ಲಿ ಅದರಿಂದ ನಡ್ಡಾ ಅವರಿಗೆ ಮುಜುಗರವಾಗಬಹುದು ಎಂಬ ಕಾರಣಕ್ಕಾಗಿಯೂ ವಿಳಂಬ ತಂತ್ರ ಅನುಸರಿಸುತ್ತಿರಬಹುದು.

6.ಗುಜರಾತ್‌ ಮಾದರಿಯ ಸಂಪುಟ ಪುನಾರಚನೆ ಮಾಡಬೇಕು ಎಂಬ ಪ್ರಸ್ತಾಪವೂ ಪಕ್ಷದ ಕೆಲವು ನಾಯಕರಿಂದ ವ್ಯಕ್ತವಾಗಿದೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಚಿವರಾದವರನ್ನು ಕೈಬಿಟ್ಟು ಹೊಸಮುಖಗಳಿಗೆ ಅವಕಾಶ ನೀಡಬೇಕು ಎಂಬ ಬೇಡಿಕೆ ಇದೆ. ಕರ್ನಾಟಕದಲ್ಲಿ ಈ ಗುಜರಾತ್‌ ಮಾದರಿ ಅನುಷ್ಠಾನ ಸಾಧ್ಯವೇ ಎಂಬುದರ ಬಗ್ಗೆ ಚಿಂತನ ಮಂಥನ ನಡೆಯುತ್ತಿರಬಹುದು.

7.ಸಂಪುಟ, ನಿಗಮ ಮಂಡಳಿ ಹಾಗೂ ಪಕ್ಷದ ಸಂಘಟನೆ ಸ್ವರೂಪ ಇವುಗಳಲ್ಲಿ ಅಮೂಲಾಗ್ರ ಬದಲಾವಣೆ ಮಾಡುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ಹೀಗಾಗಿ, ತರಾತುರಿಯಲ್ಲಿ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕೈಗೆತ್ತಿಕೊಳ್ಳುವುದು ಸರಿಯಲ್ಲ. ಒಂದು ಬಾರಿ ರಾಜ್ಯ ನಾಯಕರೊಂದಿಗೆ ಸುದೀರ್ಘವಾಗಿ ಚರ್ಚಿಸಿ ಯಾವ ಶಾ ಅಥವಾ ಮುಖಂಡರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲು ಒಂದಿಷ್ಟುಸಮಯ ಬೇಕಾಗಿರಬಹುದು.

 

 

 

 



 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!