ಶಿಕಾರಿಪುರ ಜನರ ಋಣದ ಬಗ್ಗೆ ಮಾತನಾಡಿದ ಯಡಿಯೂರಪ್ಪ, ಬೆಂಕಿಯ ಚೆಂಡು ಎಂದ ಈಶ್ವರಪ್ಪ

By Suvarna NewsFirst Published Mar 5, 2022, 4:55 PM IST
Highlights

* ಶಿಕಾರಿಪುರದದಲ್ಲಿ ರೈತಾಭಿಮಾನ ಕಾರ್ಯಕ್ರಮದಲ್ಲಿ ಬಿಎಸ್‌ವೈ, ಈಶ್ವರಪ್ಪ, ಸಿಎಂ ಭಾಷಣ
* ಶಿಕಾರಿಪುರ ಜನರ ಋಣದ ಬಗ್ಗೆ ಮಾತನಾಡಿದ ಯಡಿಯೂರಪ್ಪ
* ಯಡಿಯೂರಪ್ಪ ಶಿಕಾರಿಪುರದ ಬೆಂಕಿಯ ಚೆಂಡು ಎಂದ ಈಶ್ವರಪ್ಪ
 

ಶಿವಮೊಗ್ಗ, (ಮಾ.05): ಇಂದು ನನ್ನ ಜೀವನದಲ್ಲಿ ಅತ್ಯಂತ ಸಮಾಧಾನ ತೃಪ್ತಿ ನೀಡಿದ ದಿನ. ಎಲ್ಲಿಂದಲೋ ಬಂದ ನನ್ನ ಶಿಕಾರಿಪುರ ಪುರಸಭೆಯಿಂದ ಸಿಎಂ ಸ್ಥಾನ ರವರೆಗೆ ತೆಗೆದುಕೊಂಡು ಹೋದ ನಿಮ್ಮ ಋಣ ಈ ಜನ್ಮ ಮಾತ್ರವಲ್ಲ ಮುಂದಿನ ಜನ್ಮದಲ್ಲೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು(ಶನಿವಾರ) ಶಿಕಾರಿಪುರದ ರೈತಾಭಿಮಾನ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಯಡಿಯೂರಪ್ಪ, ಜೀವನದಲ್ಲಿ ನನಗೆ ತೃಪ್ತಿ ಇಂದು ಆಗಿದೆ. ಶಿಕಾರಿಪುರದ ಜನರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಶಿಕಾರಿಪುರ ತಾಲೂಕಿನ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ರೈತರಿಗೆ ಇನ್ನೂ ನೀರಿನ ಬರ ನೀಗಿಸಿರುವೆ. ರಾಜ್ಯದೆಲ್ಲೆಡೆ ನಾನು ಪ್ರವಾಸ ಮಾಡುತ್ತೇನೆ. ಅಧಿಕಾರಕ್ಕೆ ಬರುವ ಹಗಲು ಕನಸು ಕಾಂಗ್ರೆಸ್ ಕಾಣುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ರಾಜ್ಯದ ಪ್ರವಾಸ ಮಾಡಲಿದ್ದೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ  ಅಧಿಕಾರಕ್ಕೆ ತರುತ್ತೇವೆ. ಇನ್ನೂ ಬೊಮ್ಮಾಯಿ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ. ಶಿಕಾರಿಪುರ ಮಾದರಿ ತಾಲೂಕು ಮಾಡುವ ಗುರಿ ಇದೆ ಎಂದರು.

Latest Videos

Karnataka Budget 2022 ಬೊಮ್ಮಾಯಿ ಬಜೆಟ್‌ನಲ್ಲಿ ಕಂಡ PPP ಸೂತ್ರ, ಇದರ ಸೀಕ್ರೆಟ್ ಇಲ್ಲಿದೆ

ಬಜೆಟ್ ಅಧಿವೇಶನ ನಂತರ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುತ್ತೇವೆ. 250  ಕೆರೆಗಳಿಗೆ ನೀರು ತುಂಬಿಸುವ ಏತಾ ನೀರಾವರಿ ಯೋಜನೆ ರಾಜ್ಯದಲ್ಲಿ ಮತ್ತೆಲ್ಲೂ ನಡೆದಿಲ್ಲ. ರಾಜ್ಯದಲ್ಲಿ ಕೆರೆ ಕಟ್ಟೆ ಗಳನ್ನು ತುಂಬಿಸುವ ಕೆಲಸವನ್ನು ಸಿಎಂ ಬಸವರಾಜ ಬೊಮ್ಮಾಯಿ ಮಾಡಬೇಕು ಎಂದು ಮನವಿ ಮಾಡಿದರು. 

ಸೊರಬ ತಾಲ್ಲೂಕಿನ ಮೂಗೂರು, ಮೂಡಿ ಏತ ನೀರಾವರಿ ಯೋಜನೆ ಮೂಲಕ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿದ್ದೇವೆ. ನನ್ನ ಕೊನೆಯ ಉಸಿರು ಇರುವವರೆಗೆ ಶಿಕಾರಿಪುರದ ಜನರ ಕಲ್ಯಾಣಕ್ಕಾಗಿ ಶಕ್ತಿಮೀರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ತಾಯಂದಿರ ಕಲ್ಯಾಣಕ್ಕೆ ಜಾರಿಗೆ ತಂದ ಯೋಜನೆ ತಲುಪಿಸುವ ಸಂಕಲ್ಪ ಮಾಡಿದ್ದೇವೆ ಎಂದರು.

ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ
ಇನ್ನು ಇದೇ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ನನಗೆ ಯಡಿಯೂರಪ್ಪ ಸಿಕ್ಕಿರುವುದು ಪೂರ್ವಜನ್ಮದ ಪುಣ್ಯ. ರಾಜಕೀಯದಲ್ಲಿ ಯಡಿಯೂರಪ್ಪನವರು ನನ್ನನ್ನು ಬೆಳೆಸಿದ್ದಾರೆ. ಬಿ.ಎಸ್.ಯಡಿಯೂರಪ್ಪ(B.S. Yediyurappa) ದೂರದೃಷ್ಟಿಯಿರುವಂತಹ ನಾಯಕ. ಬಡವರ ಬಗ್ಗೆ ಅಪಾರ ಕಳಕಳಿ ಇರುವಂತಹ ವ್ಯಕ್ತಿ ಬಿಎಸ್​ವೈ. ಶಿಕಾರಿಪುರದಲ್ಲಿ ಸೂರ್ಯನಿಗೆ ದೀಪ ಹಿಡಿದಂಗೆ. ರಾಜ್ಯದ ಮೂಲೆಮೂಲೆಯಲ್ಲೂ ಬಿಎಸ್​ವೈ ಸೇವೆ ಸಲ್ಲಿಸಿದ್ದಾರೆ. ರಾಜಕೀಯವಾಗಿ ಬೆಳೆಯಲು, ಸಿಎಂ(CM) ಆಗಲು ಬಿಎಸ್​ವೈ ಕಾರಣ. ಸಿಎಂ ಸ್ಥಾನ ಬಿಟ್ಟಾಗ ಬಿಎಸ್​ವೈಗೆ ಎಲ್ಲಿಯೂ ಕಹಿ ಇರಲಿಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ನಾನು ಬದ್ಧನಾಗಿರುವೆ ಎಂದು ಹೇಳಿದರು.

ಬಿಎಸ್‌ವೈ ಶಿಕಾರಿಪುರದ ಬೆಂಕಿಯ ಚೆಂಡು ಎಂ ಈಶ್ವರಪ್ಪ
ಇನ್ನು ಸಚಿವ ಈಶ್ವರಪ್ಪ ಮಾತನಾಡಿ, ಶಿಕಾರಿಪುರದ ಬೆಂಕಿಯ ಚೆಂಡು ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಈ ಮೂಲಕ ಬಿಜೆಪಿ ಸಂಘಟನೆ ರಾಜ್ಯದಲ್ಲಿ ಆಯ್ತು. ಬಿ.ಎಸ್​. ಯಡಿಯೂರಪ್ಪ ಸಂಘಟನೆ ಶಕ್ತಿಯಿಂದ 2023ರಲ್ಲಿ 150 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ ಪೂರ್ಣ ಬಹುಮತ ಬಿಎಸ್​ವೈ ಅವರ ಕನಸು ನನಸು ನಾವು ಮಾಡುತ್ತೇವೆ ಎಂದು ಬಿಎಸ್​ವೈ ಅವರನ್ನು ಸಚಿವ ಕೆ.ಎಸ್.ಈಶ್ವರಪ್ಪ ಹಾಡಿ ಹೊಗಳಿದರು.

ಬಳಿಕ ಬಜೆಟ್​ ಕುರಿತು ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಬಜೆಟ್ ಬೊಂಬಾಟ್​ ಅಗಿತ್ತು. ಸರ್ವ ವ್ಯಾಪ್ತಿ, ಸರ್ವ ಸ್ಪರ್ಶಿ ಬಜೆಟ್ ಸಿಎಂ ಬಸವರಾಜ​ ಬೊಮ್ಮಾಯಿ ಅವರದ್ದು. ವಿರೋಧ ಪಕ್ಷದವರಿಗೂ ಟೀಕೆ ಅವಕಾಶ ನೀಡದ ಬಜೆಟ್ ಮಂಡನೆ ಬೊಮ್ಮಾಯಿ ಮಾಡಿದ್ದಾರೆ ಎಂದು ತಿಳಿಸಿದರು.

ಕಾಶ್ಮೀ್ರದ ಲಾಲ್ ಚೌಕದಲ್ಲಿ ತಾಯಿಯ ಹಾಲು ಕುಡಿದವರು ರಾಷ್ಟ್ರ ಧ್ವಜ ಹಾರಿಸಿ ಎಂದು ಉಗ್ರಗಾಮಿಗಳು ಸವಾಲ್ ಹಾಕಿದ್ದರು. ಬಿಎಸ್ ವೈ , ನಾವು ಸವಾಲ್ ಸ್ವೀಕರಿಸಿ ಕಾಶ್ಮೀರದಲ್ಲಿ ರಾಷ್ಟ್ರ ಧ್ವಜ ಹಾರಿಸಿದ್ದೇವೆ. ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಹೋರಾಟದಲ್ಲಿ ಬಿಎಸ್ ವೈ ನೇತೃತ್ವ ವಹಿಸಿದ್ದರು ಎಂದು ಯಡಿಯೂರಪ್ಪ ಅವರನ್ನ ಗುಣಗಾನ ಮಾಡಿದರು.

ಬಿಎಸ್ ವೈ ಗೋಹತ್ಯೆ ನಿಷೇಧ ಜಾರಿಗೆ ತಂದಿದ್ದಾರೆ. ಶಿಕಾರಿಪುರ ದ ಬೆಂಕಿ ಚಂಡು ರಾಜ್ಯವ್ಯಾಪಿ ಸಂಚಾರ ಮಾಡಿದ್ದಕ್ಕೆ ಬಿಜೆಪಿ ಇಂದು ಶಕ್ತಿಶಾಲಿಯಾಗಿದೆ. ನಾಲ್ಕು ಬಾರಿ ಬಿಎಸ್ ವೈ ಸಿಎಂ ಆಗಿದ್ದಾಗ ಒಮ್ಮೆಯೂ ಸಂಪೂರ್ಣ ಬಹುಮತ ಬರಲಿಲ್ಲ/ 2024 ರಲ್ಲಿ 150 ಸ್ಥಾನವನ್ನು ಗೆದ್ದು ಬಿಜೆಪಿ ಅಧಿಕಾರಕ್ಕೆ ತಂದು ತಮಗೆ  ಕೊಡುಗೆಯಾಗಿ ನೀಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

click me!