ಯತ್ನಾಳ್‌ ಸಿಡಿಗುಂಡು, 'ಹಲ್ಕಟ್‌ಗಿರಿ ಮಾಡೋರಿಗೆ ಪ್ರಮೋಷನ್‌ ಮೇಲೆ ಪ್ರಮೋಷನ್‌ ಕೊಡೋದ್‌ ಯಾಕೆ?'

Published : Jul 01, 2023, 05:29 PM IST
ಯತ್ನಾಳ್‌ ಸಿಡಿಗುಂಡು, 'ಹಲ್ಕಟ್‌ಗಿರಿ ಮಾಡೋರಿಗೆ ಪ್ರಮೋಷನ್‌ ಮೇಲೆ ಪ್ರಮೋಷನ್‌ ಕೊಡೋದ್‌ ಯಾಕೆ?'

ಸಾರಾಂಶ

ಬಿಜೆಪಿ ಸಭೆಯಲ್ಲೂ ಬಸವನಗೌಡ ಪಾಟೀಲ್‌ ಯತ್ನಾಳ್‌ ಸಿಡಿಗುಂಡು ಎಸೆದಿದ್ದಾರೆ. ಬಿಜೆಪಿ ಪಕ್ಷದ ವಿರುದ್ಧ ಕೆಲಸ ಮಾಡಿ, ಹಲ್ಕಟ್‌ಗಿರಿ ಮಾಡೋ ವ್ಯಕ್ತಿಗಳಿಗೆ ಪ್ರಮೋಷನ್‌ ಮೇಲೆ ಪ್ರಮೋಷನ್‌ ಕೊಡೋದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು (ಜು.1): ಬಹಿರಂಗ ಹೇಳಿಕೆ ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದ ವ್ಯಕ್ತಿಗಳನ್ನು ಕರೆಸಿ, ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಬಸವನಗೌಡ ಪಾಟೀಲ್‌ ಯತ್ನಾಲ್‌ ಸಿಡಿಗುಂಡು ಎಸೆದಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಬೊಮ್ಮಾಯಿ‌, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಂಘಟನಾ ಕಾರ್ಯದರ್ಶಿ ರಾಜೇಶ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಜ್ಯಾಧ್ಯಕ್ಷ ಕಟೀಲ್ ಸೇರಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿ ನಡೆಸಿದ ಸಭೆ ಯಶಸ್ವಿ ಕಂಡಿದೆ. ಎಲ್ಲರ ಮಾತುಗಳನ್ನೂ ಕೇಳಿರುವ ರಾಜ್ಯ ಬಿಜೆಪಿ ನಾಯಕರು, ಅವರಿಗೆ ಸಮಾಧಾನ ಮಾಡಿ ಕಳಿಸಿದ್ದಾರೆ. ಈ ನಡುವೆ ಯತ್ನಾಳ್‌ ಆಡಿರುವ ಮಾತುಗಳು, ಹಿರಿಯ ನಾಯಕರಿಗೆ ನಾಟಿದೆ ಎನ್ನಲಾಗಿದೆ. ಪಕ್ಷದ ಒಳಗಿನ ಬಂಡಾಯ ಶಮನಕ್ಕೆ ಬಿಜೆಪಿ ಪ್ರಯತ್ನ ಮಾಡುತ್ತಿದ್ದು,  ಸದ್ಯದ ಮಟ್ಟಿಗೆ ಅಂತರ್ಯುದ್ಧ ಶಮನವಾಗಿರುವ ಲಕ್ಷಣ ಕಂಡಿದೆ.

ಸಭೆಯಲ್ಲಿ ಯತ್ನಾಳ್ ಹೇಳಿದ್ದೇನು?: ಐದು ವರ್ಷದಿಂದ ನಮ್ಮನ್ನು ಕರೆಯದವರು, ಇಂದು ಯಾಕೆ ಕರೆದಿದ್ದೀರಿ? ಸರ್ಕಾರ ಇದ್ದಾಗ ಯಾಕೆ ಸಂಪುಟ ಭರ್ತಿ‌ಮಾಡಿಲ್ಲ. ಸಿದ್ದರಾಮಯ್ಯ ನೋಡಿ ಒಂದೇ ಬಾರಿ ಎಲ್ಲಾ ಖಾತೆ ಭರ್ತಿ ಮಾಡಿದ್ದಾರೆ. ನಮ್ಮಲ್ಲಿ ಕೊನೆತನಕ ಸಂಪುಟ ಭರ್ತಿ ಮಾಡೋಕೆ ಆಗ್ಲಿಲ್ಲ. ನಾನು ವಾಜಪೇಯಿ ಸರ್ಕಾರದಲ್ಲಿ ಮಂತ್ರಿ ಆಗಿದ್ದವನು. ನನ್ನನ್ನು ಯಾಕೆ ಮಂತ್ರಿ ಮಾಡಲಿಲ್ಲ ನಾನು ಬಿಡಿ, ಉಳಿದ ಖಾತೆ ಯಾಕೆ ತುಂಬಿಸಲಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

ನನ್ನನ್ನು ಖಳನಾಯಕಾಗಿ ಬಿಂಬಿಸಿದರು. ಈಗ ಕರೆದು ಏನು ಹೇಳೊಕೆ ಹೊರಟಿದ್ದೀರಿ.? ನಿರಾಣಿ ನಮ್ಮನ್ನೆಲ್ಲಾ ಸೋಲಿಸಿ ಮುಖ್ಯಮಂತ್ರಿ ಆಗ್ತಾನಾ? ಅದ್ ಹೇಗ್ರಿ ಮುಖ್ಯಮಂತ್ರಿ ಆಗ್ತಾನೆ?  ಹಲ್ಕಟ್ ಗಿರಿ ಮಾಡೋರಿಗೆ ಪ್ರಮೋಶ್ ಮೇಲೆ ಪ್ರಮೋಶನ್ , ಆದರೆ, ನಾವು ಖಳನಾಯಕ. ಅಂದು ನನ್ನ ಮನೆಗೆ ಅರುಣ್ ಸಿಂಗ್ ರನ್ನ ಕಳಿಸಿದ್ದೀರಿ. ಅವರನ್ನು ಸಣ್ಣವರನ್ನಾಗಿ ಮಾಡಿದ್ರಿ. ಹೇಳಿದ್ರೆ ನಾನೇ ಬರ್ತಾ ಇದ್ದೆ. ಅರುಣ್ ಸಿಂಗ್ ಸಣ್ಣವರಾದ್ರು. ನನ್ನ ದೊಡ್ಡವನಾಗಿ ಮಾಡಿದ್ರಿ. ಅವರು ಬೇರೆ ವಿಚಾರಕ್ಕೆ ನಮ್ಮ ಮನೆಗೆ ಬಂದಿದ್ದರೆ ಸರಿ.  ಆದರೆ ಅವರು ನನ್ನ ಜೊತೆ ಮಾತಾಡೋಕೆ ನೀವು ಅವರನ್ನು ಕಳಿಸಿ ಅವರಿಗೆ ಅವಮಾನ ಮಾಡಿದ್ದೀರಿ‌' ಎಂದು ಯತ್ನಾಳ್‌ ಮಾತನಾಡಿದ್ದಾರೆ.

ಅರುಣ್ ಕುಮಾರ್ ಇದ್ದಾಗ ಕರೆದು ಮಾತಾಡುವ ರಿವಾಜೇ ಇರಲಿಲ್ಲ. ಈಗ ರಾಜೇಶ್ ಬಂದಮೇಲೆ ಸುಧಾರಿಸಿದೆ. ರಾಜೇಶ್ ಅವರು ಎಲ್ಲರ ಜೊತೆ ಮಾತನಾಡುತ್ತಾರೆ. ಸೂಕ್ತ ಸಲಹೆ ನೀಡುತ್ತಾರೆ ಎಂದರು.
ಸಭೆಯ ಕೊನೆಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಷಿ, ಸಭೆಯಲ್ಲಿ ತಮ್ಮ ಹೇಳಿಕೆಯನ್ನು ಅನೇಕರು ಸಮರ್ಥನೆ ಮಾಡಿಕೊಂಡಿದ್ದಾರೆ. ಆದರೆ ಪಕ್ಷಕ್ಕೆ ಹೇಳಿಕೆಯಿಂದ ಡ್ಯಾಮೇಜ್ ಆಗುತ್ತದೆ ಎಂದಾಗ ಎಲ್ಲರೂ ಸುಮ್ಮನಾಗಿದ್ದಾರೆ. ಕೆಲವರ ಮೇಲೆ ಕ್ರಮ ಆಗಲಿ. 2ನೇ ಲೈನ್ ಲೀಡರ್ ಮೇಲೆ ಕ್ರಮ ಕೈಗೊಳ್ಳಿ. ಆಗ ಮೊದಲನೇ ಲೈನ್ ಲೀಡರ್ ಬುದ್ದಿ ಕಲಿತಾರೆ. ಕಾರ್ಯಕರ್ತರಿಗೆ ಸಂದೇಶ ಹೋಗಲಿ. ವಿಭಾಗ ಪ್ರಭಾರಿಗಳಾದ ದಶರಥ, ಕಾಂತರಾಜು ಇವರದ್ದು ಜಾಸ್ತಿ ಆಯಿತು. ಜಿಲ್ಲಾಧ್ಯಕ್ಷರಿಗೆ ಗೌರವ ಇಲ್ಲವಾ? ವಿಭಾಗ ಪ್ರಭಾರಿಗಳದ್ದೇ ಜಾಸ್ತಿ ಆಯ್ತು ರಾಜೇಶ್, ಇದನ್ನು ಸರಿ ಮಾಡಿ. ನಳೀನ್‌ ಕುಮಾರ್‌ ಕಟೀಲ್, ಬಿಎಲ್ ಸಂತೋಷ ಹೆಸರು ಹೇಳಿ ಮೆರೀತಾರಾ? ನಾನು ಯಾರಿಗೆ ಮಾತಾಡಬೇಕು ಸರಿ ಮಾಡಬೇಕು ಮಾತಾಡ್ತೇನೆ. ಪಕ್ಷಕ್ಕೆ ಒಂದು ರೀತಿ ರಿವಾಜು ಇದೆ ಎಂದು ಹೇಳಿದ್ದಾರೆ.

ಸಿದ್ಧರಾಮಯ್ಯ ಭ್ರಷ್ಟ ಅಂತೀರಲ್ಲ, ನಮ್ಮದೇ ಸರ್ಕಾರವಿತ್ತು ತನಿಖೆ ಯಾಕೆ ಮಾಡ್ಲಿಲ್ಲ: ಪ್ರತಾಪ್‌ ಸಿಂಹ ಪ್ರಶ್ನೆ

ಸಭೆಯಲ್ಲಿ ನಡಹಳ್ಳಿ ಕೂಡ ವೈಲೆಂಟ್‌: ಸಭೆಯಲ್ಲಿ ಮಾತನಾಡಿದ ನಡಹಳ್ಳಿ, 'ಯತ್ನಾಳ್ ಅವರನ್ನು ಇನ್ನೂ ಎಷ್ಟು ದಿನ ಸಹಿಸಿಕೊಳ್ತೀರಿ. ನೀವು ಸುಮ್ನೆ ಇರೋದಕ್ಕೆ ಅವರು ಅಷ್ಟು ಮಾತಾಡ್ತಾ ಇದ್ದಾರೆ. ಅವರನ್ನು ನೀವು ಉನ್ನತ ಸ್ಥಾನದಲ್ಲಿ ಕೂರಿಸಿದ್ರೆ, ಅನೇಕರು ಪಾರ್ಟಿ ಬಿಟ್ಟು ಹೋಗ್ತಾರೆ' ಎಂದಾಗ, ನೀವ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಕಟೀಲ್‌ ಹೇಳಿದ್ದಾರೆ. ಈ ವೇಳೆ ಮಾತನಾಡಿದ ನಡಹಳ್ಳಿ, 'ನಾನು ಮಾತನಾಡೋದಿಲ್ಲ. ಆದರೆ, ಯತ್ನಾಳ್‌ ಮಾತನಾಡಿದ್ರೆ ಸುಮ್ಮನೆ ಇರೋನಲ್ಲ. ಇಷ್ಟು ದಿನ ನಾವು ಏನು ಮಾತಾಡಿರಲಿಲ್ಲ. ಅದಕ್ಕೆ ಅವರು ಮಾತಾಡ್ತಾರೆ. ಅವರು ಮಾತು ಆಡ್ತಾ ಇದ್ರೆ‌ ನಾವು ಸುಮ್ನೆ ಇರಲ್ಲ' ಎಂದರು.

ಅನ್ನಭಾಗ್ಯ ಪಿತಾಮಹ ಸಿಎಂ ಸಿದ್ದರಾಮಯ್ಯ ಅಲ್ಲ, ಮಾಜಿ ಪ್ರಧಾನಿ ವಾಜಪೇಯಿ!

ಅ ಬಳಿಕ ಸಿದ್ದರಾಮಯ್ಯ ವಿರುದ್ಧ ಯಾಕೆ ಸಾಫ್ಟ್ ಆಗಿದ್ದೀರಿ? ಎಂದು ನಡಹಳ್ಳಿ ಪ್ರಶ್ನೆ ಮಾಡಿದ್ದಾರೆ. ಸಿದ್ದರಾಮಯ್ಯ ವಚನಭ್ರಷ್ಟ ಆಗಿದ್ದಾರೆ. ಅವರಿಗೆ ನೀವು ಯಾಕೆ ಸುಮ್ನೆ ಕೂರೊಕೆ ಬಿಟ್ಟಿದ್ರಿ? ಅವರ ಮೇಲೆ ಮಾತಾಡುವಾಗ ಮಾತುಗಳು ಸಾಫ್ಟ್ ಆಗಿದೆ. ಐದು ಗ್ಯಾರಂಟಿ ಬಗ್ಗೆ ದೊಡ್ಡ ಮಟ್ಟದ ಹೋರಾಟ ಬೇಕು. ಅವರನ್ನು ಸುಳ್ಳು ರಾಮಯ್ಯ ಎಂದೆ ಜನರಿಗೆ ತಿಳಿಸಬೇಕು' ಎಂದು ನಡಹಳ್ಳಿ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!