ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಲ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಅಪರೂಪವೆಂಬಂತೆ ಮುಖಾಮುಖಿ ಭೇಟಿಯಾಗಿದ್ದಾರೆ.
ಬೆಂಗಳೂರು, (ಮಾ.09): ಒಂದೇ ಪಕ್ಷದಲ್ಲಿ ಇದ್ದರೂ ಪರಸ್ಪರ ಮುಖ ಕೊಟ್ಟು ಮಾತನಾಡದವರು ಅಂದ್ರೆ ಅದು ವಿಜಯಪುರ ಬಿಜೆಪಿ ಶಾಸಕ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ.
ಹೌದು...ಯಡಿಯೂರಪ್ಪ ಅಂದ್ರೆ ಬಸನಗೌಡ ಪಾಟೀಲ್ ಯತ್ನಾಳ್ ಕೆಂಡಾಕಾರುತ್ತಾರೆ. ಆದ್ರೆ, ಇದೀಗ ಯತ್ನಾಳ್ ಹಾಗೂ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮುಖಾಮುಖಿಯಾಗಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸೌಧದ ಮೊಗಸಾಲೆಯಲ್ಲಿ ಎದುರುಬದುರಾದ ಘಟನೆ ಮಂಗಳವಾರ ನಡೆಯಿತು.
ಪಕ್ಷದ ಶೋಕಾಸ್ ನೋಟಿಸ್‌ಗೆ ಖಡಕ್ ಉತ್ತರದ ಜೊತೆಗೆ ತನಿಖೆಗೆ ಆಗ್ರಹಿಸಿದ ಯತ್ನಾಳ್
ಈ ವೇಳೆ ಶಾಸಕ ಯತ್ನಾಳ್ ಜೊತೆ ಸಿಎಂ ಯಡಿಯೂರಪ್ಪ ನಗುತ್ತಲೇ ಮಾತನಾಡಿದರು. ಅಲ್ಲದೇ ಬಿಎಸ್‌ವೈ, ಯತ್ನಾಳ್ ಅವರ ಭುಜ ಚಪ್ಪರಿಸಿದರು.
ಯತ್ನಾಳ್ ಬೆನ್ನು ತಟ್ಟಿದ ಯಡಿಯೂರಪ್ಪ, ಏನು ಮಾಡಬೇಕು ಹೇಳು ಮಾಡೋಣ ಎಂದರು. ಅದಕ್ಕೆ "ನಿಮ್ಮ ಕೈಯಲ್ಲಿದೆ ನೀವೇ ಮಾಡಿದರೆ ಆಗುತ್ತದೆ ಎಂದು ಯತ್ನಾಳ್ ಹೇಳಿದರು.
ನಾನು ನೀನು ಕುಳಿತು ಮಾತನಾಡೋಣ. ಪಂಚಮಸಾಲಿ ಮೀಸಲಾತಿ ಕುರಿತು ಮಾತನಾಡೋಣ, ಏನು ಬೇಕೋ ಮಾತನಾಡೋಣ ಎಂದು ಯತ್ನಾಳ್ ಗೆ ಯಡಿಯೂರಪ್ಪ ಭರವಸೆ ನೀಡಿದರು. ಈ ಭೇಟಿ ವೇಳೆ ಇಬ್ಬರ ಮುಖದಲ್ಲಿ ನಿರಾಳ ಮನೋಭಾವ ಕಾಣಿಸಿತು.
2A ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಬೃಹತ್ ಹೋರಾಟ ನಡೆಸುತ್ತಿದ್ದು, ಇದಕ್ಕೆ ಯತ್ನಾಳ್ ಮೊದಲ ಸಾಲಿನಲ್ಲಿ ನಿಂತಿದ್ದಾರೆ. ಅಲ್ಲದೇ ಬಹಿರಂಗವಾಗಿಯೇ ಬಿಎಸ್‌ವೈ ವಿರುದ್ಧ ವಾಗ್ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹದು.