ವಿಜಯೇಂದ್ರನ ಆಪರೇಷನ್ ಕಮಲ ಸಕ್ಸಸ್: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಮಾಜಿ ಸಂಸದ

By Suvarna News  |  First Published Mar 9, 2021, 3:27 PM IST

ರಾಯಚೂರು ಹಾಗು ಕೊಪ್ಪಳ ಜಿಲ್ಲೆಯ ಪ್ರಭಾವಿ ನಾಯಕ, ಮಾಜಿ ಸಂಸದ, ಕುರುಬ ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ಅಧ್ಯಕ್ಷ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು.


ಬೆಂಗಳೂರು/ರಾಯಚೂರು, (ಮಾ.09): ಕೊಪ್ಪಳ ಲೋಕಸಭೆಯ ಮಾಜಿ ಸದಸ್ಯ, ಕುರುಬರ ಎಸ್ಟಿ ಮೀಸಲಾತಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಕೆ.ವಿರುಪಾಕ್ಷಪ್ಪ ಅವರು ಬಿಜೆಪಿಗೆ ಸೇರ್ಪಡೆಯಾದರು.

'ಇಂದು (ಮಂಗಳವಾರ) ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೆ.ಎಸ್. ಈಶ್ವರಪ್ಪ ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಮಸ್ಕಿ ಕ್ಷೇತ್ರದ ಉಪ ಚುನಾವಣೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇರುವಾಗಗಲೇ ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಬಿಜೆಪಿಗೆ ವಾಪಸ್ ಆಗಿರುವುದು ಪಕ್ಷಕ್ಕೆ ಆನ ಬಲ ಬಂದಂತಾಗಿದೆ.

Latest Videos

undefined

ಇನ್ನು ಇದೇ ಮಾ.20ರಂದು ಮಸ್ಕಿಯಲ್ಲಿ  ನಡೆಯಲಿರುವ ಬೃಹತ್ ಸಮಾವೇಶದಲ್ಲಿ ವಿರುಪಾಕ್ಷಪ್ಪನವರ ಬೆಂಬಲಿಗರು ಬಿಜೆಪಿ ಸೇರ್ಪಡೆಯಾಗಲಿದ್ದು, ಈ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತೇನೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದರು.

ರಾಯಚೂರು ಹಾಗು ಕೊಪ್ಪಳ ಜಿಲ್ಲೆಯ ಪ್ರಮುಖ ನಾಯಕ, ರಾಜ್ಯ ಕುರುಬ ಸಮಾಜದ ಪ್ರಭಾವಿ ಮುಖಂಡ ಕೆ ವಿರುಪಾಕ್ಷಪ್ಪ ಈಗ ಮತ್ತೆ ಬಿಜೆಪಿ ಸೇರಿದ್ದಾರೆ. 2009 ರವರೆಗೂ ಕಾಂಗ್ರೆಸ್ ನಲ್ಲಿದ್ದ ವಿರುಪಾಕ್ಷಪ್ಪ , 2009 ರಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನೀಡದ ಹಿನ್ನಲೆಯಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಆದರೆ 2018 ರಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಸಿಗದಿದ್ದರಿಂದ​ವಿರುಪಾಕ್ಷಪ್ಪ ಬಿಜೆಪಿ ತೊರೆದು ಮತ್ತೆ ಕಾಂಗ್ರೆಸ್ ಸೇರಿದ್ದರು. 

ಮಸ್ಕಿ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಉಸ್ತುವಾರಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಮತ್ತೆ ವಿರುಪಾಕ್ಷಪ್ಪನವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. 

ಹೌದು..ಯಾಕಂದ್ರೆ ಮಸ್ಕಿ ಕ್ಷೇತ್ರದಲ್ಲಿ ಹೆಚ್ಚಾಗಿ ಕುರುಬ ಸಮುದಾಯದ ಮತಗಳು ಇರುವುದರಿಂದ ವಿಜಯೇಂದ್ರ ಅವರು ವಿರುಪಾಕ್ಷಪ್ಪನವರಿಗೆ ಮಣೆ ಹಾಕಿದ್ದಾರೆ. ಈ ಹಿಂದೆ ಸಿಂಧನೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆ ವೇಳೆ ಸ್ವತಃ ವಿಜಯೇಂದ್ರ ಅವರೇ ವಿರುಪಾಕ್ಷಪ್ಪನವರ ನಿವಾಸಕ್ಕೆ ತೆರಳಿ ಬಿಜೆಪಿಗೆ ಬರುವಂತೆ ಸಾಂಕೇತಿಕವಾಗಿ ಆಹ್ವಾನ ಕೊಟ್ಟು ಬಂದಿದ್ದರು.

ಮಸ್ಕಿಯಲ್ಲಿ ವಾಲ್ಮೀಕಿ ನಾಯಕ, ಲಿಂಗಾಯತ್ ರ ನಂತರ ಅಧಿಕ ಸಂಖ್ಯೆಯಲ್ಲಿರುವುದು ಕುರುಬ ಮತದಾರರು ಈ ಕಾರಣಕ್ಕೆ ವಿರುಪಾಕ್ಷಪ್ಪರನ್ನು ವಿಜಯೇಂದ್ರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಈ ತಂತ್ರಗಾರಿ ಮಸ್ಕಿ ಬೈ ಎಲೆಕ್ಷನ್‌ನಲ್ಲಿ ಎಷ್ಟು ವರ್ಕೌಟ್ ಆಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಸಿದ್ದರಾಮಯ್ಯ ಆರೋಪ ಸಾಬೀತು?

ಹೌದು.. ಜನವರಿ 4 ರಂದು ಸಿಂಧನೂರಿನಲ್ಲಿ ಕುರುಬ ಎಸ್ಟಿ ಮೀಸಲಾತಿ ಹೋರಾಟ ಸಮಾವೇಶದಲ್ಲಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದರು. ಇದೇ ವೇಳೆ ಕುರುಬರಿಗೆ ಎಸ್ಟಿ ಮೀಸಲಾತಿ ಹೋರಾಟದಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪೂರಕವೆಂಬಂತೆ ರಾಜ್ಯಾಧ್ಯಂತ ಕುರುಬ ಸಮುದಾಯವನ್ನು ಸಂಘಟನೆ ಮಾಡಿ ಬಿಜೆಪಿ ಸೇರಿರುವುದು ಇದೀಗ ಸಿದ್ದರಾಮಯ್ಯ ಆರೋಪ ಈಗ ಮತ್ತೆ ಸಾಬೀತಾದಂತಾಗುತ್ತಿದೆ. 

click me!