ಪ್ರಧಾನಿ ಮೋದಿ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿನವರಿಗೆ ನೈತಿಕತೆ ಇಲ್ಲ: ಶಾಸಕ ಯತ್ನಾಳ ವಾಗ್ದಾಳಿ

Published : Apr 03, 2026, 09:55 PM IST
basanagouda patil yatnal

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರೆಲ್ಲರೂ ಮೋದಿ ಕಾಲಿನ ಧೂಳು ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

ಬಾಗಲಕೋಟೆ (ಏ.03): ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ಸಿಗರಿಗೆ ಯಾವುದೇ ನೈತಿಕ ಹಕ್ಕಿಲ್ಲ. ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ಸಿಗರೆಲ್ಲರೂ ಮೋದಿ ಕಾಲಿನ ಧೂಳು ಆಗಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು. ಬಾಗಲಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆ ಆಗಮಿಸಿದ್ದ ಅವರು, ಸಮುದಾಯದ ಮುಖಂಡರ ಜೊತೆಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮೊದಲು ಪಂಜಾಬಿನಲ್ಲಿ ಮುನ್ಸಿಪಾಲ್ಟಿ ಚುನಾವಣೆ ಗೆದ್ದು ತೋರಿಸಲಿ. ಎಂಎಲ್‌ಎ ಚುನಾವಣೆಗೆ ನಿಂತು ಸೋತಿರುವ ವ್ಯಕ್ತಿ ಅವರು. ಮೋದಿ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು. ಬಿಜೆಪಿ ಸೇರ್ಪಡೆ ಹೈಕಮಾಂಡ್‌ಗೆ ಬಿಟ್ಟ ವಿಷಯ. ನಾನು ದುಂಬಾಲು ಬೀಳುವುದಿಲ್ಲ. ಯೋಗ್ಯ, ಒಳ್ಳೆಯವನು ಎಂದರೆ ತೆಗೆದುಕೊಳ್ಳಲಿ. ಇಲ್ಲದಿದ್ದರೆ ಬಿಡಲಿ. ಅಲವತ್ತುಕೊಳ್ಳುವುದಿಲ್ಲ.

ನನ್ನನ್ನು ಪಕ್ಷದಿಂದ ಹೊರಗಡೆ ಹಾಕಿದ್ದರಿಂದ ಪಕ್ಷಕ್ಕೂ ನಷ್ಟವಾಗಿಲ್ಲ, ನನಗೂ ನಷ್ಟವಾಗಿಲ್ಲ. ಯತ್ನಾಳರನ್ನ ತೆಗೆದುಕೊಳ್ಳದಿದ್ದರೆ ಮುಂದೆ ಕಷ್ಟವಾಗಲಿದೆ ಎಂದು ಇವರೆಲ್ಲ ಹೇಳುತ್ತಾರಲ್ಲ ಎಂದು ಜೊತೆಗಿದ್ದ ಸಿ.ಸಿ.ಪಾಟೀಲ, ಸಿದ್ದು ಸವದಿ, ಅರವಿಂದ ಬೆಲ್ಲದ ಕಡೆಗೆ ತೋರಿಸಿ, ಆಗ ನೋಡೋಣ ಎಂದರು.ಯಾವುದೇ ಕಾರಣಗಳಿಂದ ಉಚ್ಚಾಟನೆಯಾಗಿರಬಹುದು. ಬಿಜೆಪಿ, ಹಿಂದೂ ಸಮಾಜ ರಕ್ಷಣೆಯಾಗಬೇಕು. ಮೋದಿ ಅವರ ನೇತೃತ್ವದಲ್ಲಿ ಬಿಜೆಪಿಯಿಂದ ಜಗತ್ತಿನಲ್ಲೇ ಒಳ್ಳೆಯ ಕೆಲಸ ಆಗುತ್ತಿದೆ. ಬಿಜೆಪಿಯಿಂದ ಉಚ್ಚಾಟನೆಯಾದರೂ ಎಲ್ಲ ನಾಯಕರೊಂದಿಗೆ ಒಳ್ಳೆಯ ಸಂಬಂಧವಿದೆ ಎಂದು ತಿಳಿಸಿದರು.

ವಿಧಾನಸಭೆಯಲ್ಲಾಗಲಿ, ವಿರೋಧ ಪಕ್ಷದ ನಾಯಕರಾಗಲಿ, ಪಕ್ಷದ ಮುಖಂಡರು ಸೇರಿಯೇ ಯಾವ ವಿಷಯ ಮಾತನಾಡಬೇಕು ಎಂದು ವಿಶ್ವಾಸಕ್ಕೆ ತೆಗೆದುಕೊಂಡೇ ಮಾಡುತ್ತಾರೆ. ಪಕ್ಷ ವಿರೋಧಿ ಚಟುವಟಿಕೆ ಮಾಡುವುದು, ಬ್ಲಾಕ್‌ಮೇಲ್ ಮಾಡುವುದು ನನ್ನ ಸ್ವಭಾವವಲ್ಲ. ಪೂಜ್ಯ ತಂದೆಯವರು, ಮಗನಿಗೆ ಬೈಯ್ಯಬಾರದು ಎಂದು ಹೇಳಿದ್ದಾರೆ, ಬೈಯ್ಯುವುದಿಲ್ಲ. ಏ.9ರವರೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ. ಮುಂದೇನು ಬದಲಾಗುತ್ತದೆಯೋ ನೋಡೋಣ ಎಂದರು.

ಬಿಜೆಪಿಗೆ ದ್ರೋಹ ಮಾಡಿಲ್ಲ

ಕಾಂಗ್ರೆಸ್ಸಿನ ಸಿದ್ದರಾಮಯ್ಯ ಪರ ಪ್ರಚಾರ ಮಾಡುವುದು ನನ್ನ ಧರ್ಮ ಅಲ್ಲ. ನಾನು ಎಂದೂ ಬಿಜೆಪಿಗೆ ದ್ರೋಹ ಮಾಡುವ ಕೆಲಸ ಮಾಡಿಲ್ಲ. ಬಿಜೆಪಿಯಿಂದ ಶಾಸಕ ಆಗಿದ್ದೇನೆ. ಹಿಂದೆ ನಾನು ಎಂಎಲ್ಸಿ ಆಗಿದ್ದಾಗ ಇದೇ ಎಂ.ಬಿ.ಪಾಟೀಲ ನನ್ನ ಸಿದ್ದರಾಮಯ್ಯ ಬಳಿ ಕರೆದುಕೊಂಡು ಹೋಗಿದ್ದರು. ಆಗ ಪರಿಷತ್ ಸಭಾಪತಿ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ತೆಗೆದುಕೊಂಡು ಬಂದಿದ್ದರು. ಅವಿಶ್ವಾಸದ ಪರ ಮತ ಹಾಕಿದರೆ ನನಗೆ ಸಿಂದಗಿಯಲ್ಲಿ ಕಾಂಗ್ರೆಸ್ ಟಿಕೆಟ್ ಮತ್ತು ಎಷ್ಟು ಬೇಕು ಅಷ್ಟು ಅನುದಾನ ಕೊಡುವ ಭರವಸೆ ನೀಡಿದ್ದರು. ಆದರೆ, ನಾನು ಆಗಲ್ಲ. ನಾನು ಮೂಲ ಬಿಜೆಪಿ. ಏನೋ ಕಾರಣಕ್ಕೆ ಹೊರಗೆ ಹಾಕಿದ್ದಾರೆ ಎಂದಿದ್ದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬಿಜೆಪಿಗರಿಗೆ ಧೈರ್ಯ ಇದ್ದರೆ ಹಿಂದಿ ಜಾರಿ ಮಾಡ್ತೇವೆ ಎನ್ನಲಿ: ಸಚಿವ ಮಧು ಬಂಗಾರಪ್ಪ ಸವಾಲು
ಸಚಿವ ವಿ. ಸೋಮಣ್ಣ ಭಾಷಣಕ್ಕೆ ಬಾಗಲಕೋಟೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ; ಉಪ ಚುನಾವಣೆಯಲ್ಲಿ ವಾಗ್ವಾದ!