Karnataka Politics ವಾಜಪೇಯಿ ನಂತ್ರ ಮೋದಿ ಬಂದ ಹಾಗೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯ, ಯತ್ನಾಳ್

By Suvarna NewsFirst Published Feb 2, 2022, 8:26 PM IST
Highlights

* ಮತ್ತೆ ಶುರುವಾಯ್ತು ನಾಯಕತ್ವ ಬದಲಾವಣೆ ಕೂಗು
* ವಾಜಪೇಯಿ ನಂತ್ರ ಮೋದಿ ಬಂದ ಹಾಗೆ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯ ಎಂದ ಬಿಜೆಪಿ ಶಾಸಕ
* ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯಗಿದೆ ಎಂದ ಯತ್ನಾಳ್

ಬೆಳಗಾವಿ, (ಫೆ.02): ಕರ್ನಾಟಕದಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆ ಸುದ್ದಿ ಕೇಳಿಬರುತ್ತಿದೆ. ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅಗತ್ಯ, ಅನಿವಾರ್ಯ ಆಗಿದೆ. ಕ್ರಿಯಾಶೀಲರಾಗಿ ಕೆಲಸ ಮಾಡಲು 2ನೇ ನಾಯಕತ್ವ ಅಗತ್ಯವಾಗಿದೆ ಎಂದು ಸ್ವತಃ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basanagouda Patil Yatnal) ಹೇಳಿದ್ದಾರೆ.

ಬೆಳಗಾವಿಯಲ್ಲಿ ಇಂದು(ಬುಧವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಯಡಿಯೂರಪ್ಪ ಅವರ ಯುಗ ಮುಗಿದಿದೆ. ಇನ್ನೂ ಮೂರ್ನಾಲ್ಕು ಜನರಿದ್ದಾರೆ, ಅವರದ್ದು ಮುಗಿಯಲು ಬಂದಿದೆ. ವಾಜಪೇಯಿ ನಂತರ ಮೋದಿ ಬಂದ ಹಾಗೆಯೇ ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆ ಅವಶ್ಯ, ಅನಿವಾರ್ಯ ಇದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಬೊಮ್ಮಾಯಿ ಬದಲಾವಣೆ ಮಾಡಬೇಕೆಂದರು.

Karnataka BJP ಸಿಎಂ ಮಾಡುವಾಗಲೇ 6 ತಿಂಗ್ಳು ಷರತ್ತು ಹಾಕಿ ಪ್ರಮಾಣವಚನಕ್ಕೆ ಅವಕಾಶ, ಜಾರಕಿಹೊಳಿ ಬಾಂಬ್

ಬೊಮ್ಮಾಯಿ ಅವರು ಬದಲಾವಣೆ ಆಗುತ್ತಾರೆ ಅಂತ ನಾನು ಹೇಳಿಲ್ಲ. ಎರಡನೇ ನಾಯಕತ್ವ ಪಕ್ಷಕ್ಕೆ ಬೇಕು ಅಂತ ಹೇಳಿದ್ದೀನಿ. ಅದಕ್ಕಾಗಿ ಹೊಸ ಪ್ರಕ್ರಿಯೆಯನ್ನ ಮಾಡುತ್ತಿದ್ದಾರೆ. ಪಕ್ಷದ ವರಿಷ್ಠರು ಮುಂದಿನ ಚುನಾವಣೆಗೆ ಒಳ್ಳೆಯ ಟೀಮ್ ಮಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಸರ್ಕಾರ ತರುವ ಪ್ಲ್ಯಾನ್ ಇಟ್ಟುಕೊಂಡು ಬದಲಾವಣೆ ಮಾಡ್ತಿದ್ದಾರೆ ಎಂದು ಹೇಳಿದರು.

ಮಾಡುವುದಿದ್ರೇ ಈಗ ಸಂಪುಟ ವಿಸ್ತರಣೆ ಮಾಡಿ. ಇಲ್ಲವಾದ್ರೇ ಈಗ ಇದ್ದವರನ್ನ ತೆಗೆದುಕೊಂಡು ಚುನಾವಣೆಗೆ ಹೋಗ್ತೀವಿ. ಚುನಾವಣೆ ಆರು‌ ತಿಂಗಳಿದ್ದಾಗ ಸಚಿವರನ್ನಾಗಿ ಮಾಡಿದ್ರೇ ನಾವೇನೂ ಮಾಡುವ ಹಾಗಿಲ್ಲ. ನಮ್ಮ ಮತ ಕ್ಷೇತ್ರವನ್ನೂ ನಾವು ಕಾಯ್ದುಕೊಳ್ಳಬೇಕಾಗುತ್ತದೆ. ಮಂತ್ರಿಯಾಗಿ ಬೆಂಗಳೂರಿನಲ್ಲಿ ಕುಳಿತರೆ ನಮ್ಮ ಕ್ಷೇತ್ರ ಕೈತಪ್ಪುತ್ತೆ‌. ಈಗ ಸಂಪುಟ ವಿಸ್ತರಣೆ ಆದ್ರೆ ನಾವು ಸಮಯ ಕೊಡಲು ಆಗುತ್ತೆ‌. ಇಲ್ಲವಾದರೆ ಮೂರು ತಿಂಗಳು ಸನ್ಮಾನ, ಮೂರು ತಿಂಗಳು ಚುನಾವಣೆ ಮಾಡುದಾಗುತ್ತೆ. ಸನ್ಮಾನದ ಹೂವು ಬಾಡಿರುವುದಿಲ್ಲ ನಾವು ಠೇವಣಿ ಕಳೆದುಕೊಳ್ತೇವೆ. ಈಗ ಇದ್ದ ಸಚಿವರಲ್ಲೂ ಕೆಲವರು ಸಂಘಟನಾತ್ಮಕ ಚತುರರಿದ್ದಾರೆ. ಅವರು ಪಕ್ಷಕ್ಕೆ ಬಂದ್ರೆ ಪಕ್ಷ ಇನ್ನಷ್ಟು ಬಲಿಷ್ಠವಾಗಿ ಹಳ್ಳಿ ಮಟ್ಟದಲ್ಲಿ ಹೊಳೆಯುತ್ತೆ. ಹೊಸದಾಗಿ ಮಂತ್ರಿಯಾದವರಿಗೆ ಅವಕಾಶ ಸಿಕ್ರೇ ಹುರುಪಿನಿಂದ ಕೆಲಸ ಮಾಡ್ತಾರೆ ಎಂದು ಯತ್ನಾಳ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಚಿವರ ವಿರುದ್ಧ ಶಾಸಕಾರದ ಎಸ್‌.ಟಿ. ಸೋಮಶೇಖರ್, ಎಂ.ಪಿ. ರೇಣುಕಾಚಾರ್ಯ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಸಚಿವರು ಬಿಜಿ ಇರಬೇಕು, ಕೆಲಸದಲ್ಲಿರಬೇಕು. ಕಾರ್ಯದ ಒತ್ತಡದಲ್ಲಿರಬೇಕು ಅಂತಾ ಸಚಿವರ ಪರ ಯತ್ನಾಳ ಬ್ಯಾಟಿಂಗ್ ಮಾಡಿದರು. ನಮ್ಮ ಮಂತ್ರಿಗಳು ಆ ರೀತಿ ಮಾಡಿಲ್ಲ, ನಾನು ಯಾವ ಸಚಿವರಿಗೂ ಪೋನ್ ಮಾಡಲ್ಲ. ನಾನು ನೇರವಾಗಿ ಅವರ ಬಳಿ ಹೋಗಿ ಕುಳಿತುಕೊಳ್ಳುತ್ತೇನೆ. ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.

ನಾನು ಯಾವ ಸ್ಥಾನಮಾನ ನಿರೀಕ್ಷೆ ಮಾಡಿಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ನನಗೆ ಮಹತ್ವಪೂರ್ಣ ಜವಾಬ್ದಾರಿ ಕೊಡುತ್ತೆ. ಯುಗಾದಿ ಹಬ್ಬಕ್ಕೆ ಹೊಸ ಹೊಸ ಜನರಿಗೆ ಜವಾಬ್ದಾರಿ ಕೊಡ್ತಾರೆ. ಹೊಸ ಮಂತ್ರಿಗಳಾಗ್ತಾರೆ, ರಾಜ್ಯದಲ್ಲಿ ಹೊಸ ಪದಾಧಿಕಾರಿಗಳು ಬರಬಹುದು ಎಂದು ತಿಳಿಸಿದ್ದಾರೆ. ಸಿಎಂ ದೆಹಲಿಗೆ ಹೋಗುತ್ತಿರುವ ವಿಚಾರವಾಗಿಯೂ ಈ ವೇಳೆ ಬೆಳಗಾವಿಯಲ್ಲಿ ಶಾಸಕ ಬಸವನಗೌಡ ಯತ್ನಾಳ ಪ್ರತಿಕ್ರಿಯೆ ನೀಡಿದ್ದಾರೆ. ಸಿಎಂ ಅವರು ದೆಹಲಿಯಲ್ಲಿ ಸಂಸದರ ಸಭೆ ಮಾಡಬೇಕು. ಅಧಿವೇಶನ ಹಿನ್ನೆಲೆ ರಾಜ್ಯದ ಅಭಿವೃದ್ಧಿ ವಿಚಾರದ ಕುರಿತು ಚರ್ಚೆ ಮಾಡಬೇಕು. ಕೇಂದ್ರದ ಮೇಲೆ ಒತ್ತಡ ತರಲು ಸಹಜವಾಗಿ ಇದೊಂದು ಪದ್ಧತಿ ಇದೆ. ಸಂಸದರ ಸಭೆ ಹಿನ್ನೆಲೆ ದೆಹಲಿಗೆ ಹೋಗುತ್ತಿರಬಹುದು ಎಂದು ತಿಳಿಸಿದರು.

ಕೂಡಲಸಂಗಮ ಪೀಠಕ್ಕೆ ಪರ್ಯಾಯ ಪೀಠ ಆರಂಭಿಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು ಇಂತಹ ನೂರಾಗಲಿ, ಸಾವಿರು ಪೀಠ ಆದ್ರೂ ಎನೂ ಆಗುವುದಿಲ್ಲ. ಪೀಠಗಳು ಆಗುತ್ತವೆ, ಕುರ್ಚಿ ಇಟ್ಟುಕೊಂಡು ಕೂಡುತ್ತಾರೆ. ಪೀಠಗಳಿಂದ ಯಾವುದು ಲಾಭವಿಲ್ಲ. ಜನರನ್ನ ಸೇರಿಸುವುದರಿಂದ ಪೀಠಕ್ಕೆ ಗೌರವ ಬರುವುದಿಲ್ಲ ಎಂದು ಮತ್ತೆ ಸಚಿವ ನಿರಾಣಿ ವಿರುದ್ಧ ಪರೋಕ್ಷವಾಗಿ ಯತ್ನಾಳ ವಾಗ್ದಾಳಿ ನಡೆಸಿದರು.

ರಮೇಶ್ ಜಾರಕಿಹೊಳಿ‌ ಎರಡು ಬಾರಿ ವಿಜಯಪುರಕ್ಕೆ ಬಂದಿದ್ದರು. ಒಂದು ಸಾರಿ‌ ನಾವು ಅವರ ಮನೆಗೆ ಹೋಗಬಾರದಾ? ಒಮ್ಮೆಯಾದ್ರೂ ಬಂದು ಊಟ ಮಾಡಿ ಅಂದಿದ್ದರು. ಅದಕ್ಕೆ ಹೋಗಿದ್ದೆ. ಊಟಕ್ಕೆ ಹೋದಾಗ ನಿಮ್ಮ ಕೈಯಲ್ಲಿ ಸಿಕ್ಕಿ ಬಿದ್ದೆವು. ರಮೇಶ್ ಜಾರಕಿಹೊಳಿ‌ಯವರು ನಾವು ಏನೂ ಮಾತಾಡಿಲ್ಲ. ಪಕ್ಷದಲ್ಲಿ ಉಳಿಯಬೇಕು ಅನ್ನೋ‌ ಮನಸ್ಸಿದೆ ಅವರಿಗೆ. ನಾವೆಲ್ಲರೂ ಕೂಡಿ‌ ಪಕ್ಷ ಕಟ್ಟೋಣ ಅನ್ನೋ ಮಾತನ್ನ ಹೇಳಿದ್ದೀನಿ ಎಂದು ಸ್ಪಷ್ಟಪಡಿಸಿದರು.

ಪ್ರಾದೇಶಿಕ ಪಕ್ಷ ಕಟ್ಟುವಷ್ಟು ಹೊಲಸು ಕೆಲಸ ನಾನು ಮಾಡಲ್ಲ, ಅವರು ಮಾಡಲ್ಲ. ಈಗಿರುವ ಸಣ್ಣಪುಟ್ಟ ಗೊಂದಲ ಬಗೆಹರಿಸಿ ಒಂದಾಗಿ ಹೋಗಬೇಕು ಬಿಟ್ರೆ ಏನೂ ಚರ್ಚೆ ಮಾಡಿಲ್ಲ.ಬೆಳಗಾವಿಯಲ್ಲಿ ಯಾವುದೇ ಬಣ ಇಲ್ಲ, ಊಟಕ್ಕೆ ಹೋದ್ರೆ ಬಣ ಅಂದ್ರೆ ಹೇಗೆ? ಸಣ್ಣಪುಟ್ಟ ಸಮಸ್ಯೆ ಇದ್ರೂ ಮುಖ್ಯಮಂತ್ರಿಗಳು ಸರಿ ಮಾಡ್ತಾರೆ. ಕೇಂದ್ರದಲ್ಲಿ ನಾಯಕರು ಎಲ್ಲರಿಗೂ ಕರೆದು ಬುದ್ದಿ ಹೇಳುವ ಕೆಲಸ ಮಾಡ್ತಾರೆ ಎಂದು ತಿಳಿಸಿದರು,
 

click me!