ಫೋಟೊ ಕಣ್ಮರೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಬರೋದಿಲ್ಲಾ ಎನ್ನೋ ಮಾತುಗಳು ಸಹ ಕೇಳಿಬರುತ್ತಿವೆ. ಯತ್ನಾಳ್ ಬಣದ ಕಾರ್ಪೊರೇಟರ್‌ಗಳು ಭಾಗವಹಿಸುತ್ತಾರಾ ಅನ್ನೋದೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.
ವಿಜಯಪುರ(ಡಿ.30): ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಇಂದು(ಶನಿವಾರ) ವಿಜಯಪುರ ನಗರಕ್ಕೆ ಆಗಮಿಸಲಿದ್ದಾರೆ. ಏತನ್ಮಧ್ಯೆ ನಗರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರ ಹಾಗೂ ಯತ್ನಾಳ್ ವಿರೋಧಿ ಬಣಗಳ ನಡುವೆ ಬ್ಯಾನರ್ ಪಾಲಿಟಿಕ್ಸ್ ಆರಂಭವಾಗಿದೆ.
ಹೌದು, ಶಾಸಕ ಯತ್ನಾಳ್ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ವಿಜಯೇಂದ್ರ ಭಾಗವಹಿಸಲಿದ್ದಾರೆ. ಯತ್ನಾಳ್ ವಿರೋಧಿ ಬಣದಿಂದ ವಿಜಯೇಂದ್ರ ಅವರಿಗೆ ಸ್ವಾಗತ ಕೋರಲು ಭರ್ಜರಿ ತಯಾರಿ ನಡೆಸಲಾಗಿದೆ. ಅತ್ತ ಯಾವುದೇ ಸ್ವಾಗತ ಬ್ಯಾನರ್ ಹಾಕದೇ ಯತ್ನಾಳ್ ಬಣದಿಂದ ಟಾಂಗ್ ಕೊಟ್ಟಿದೆ. ಇತ್ತ ವಿಜಯೇಂದ್ರ ಸ್ವಾಗತ ಬ್ಯಾನರ್‌ಗಳಲ್ಲಿ ಯತ್ನಾಳ್ ಭಾವಚಿತ್ರಕ್ಕೆ ಕೊಕ್ ಕೊಡಲಾಗಿದೆ.
ಯಡಿಯೂರಪ್ಪ ಪಂಚಮಸಾಲಿಗೆ 2ಎ ಮೀಸಲಾತಿ ಕೊಡಲಿಲ್ಲ: ಯತ್ನಾಳ
ಸ್ವಾಗತ ಕೋರುವ ಬ್ಯಾನರ್‌ಗಳಲ್ಲಿ ಯತ್ನಾಳ್ ಅವರ ಫೋಟೊ ಕಣ್ಮರೆಯಾಗಿದೆ. ಇಂದಿನ ಕಾರ್ಯಕ್ರಮಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಬರೋದಿಲ್ಲಾ ಎನ್ನೋ ಮಾತುಗಳು ಸಹ ಕೇಳಿಬರುತ್ತಿವೆ. ಯತ್ನಾಳ್ ಬಣದ ಕಾರ್ಪೊರೇಟರ್‌ಗಳು ಭಾಗವಹಿಸುತ್ತಾರಾ ಅನ್ನೋದೆ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ. ಕಾರ್ಯಕ್ರಮದ ಹೊತ್ತಿಗೆ ಊಹಾಪೋಹಗಳಿಗೆ ಗೊಂದಲಗಳಿಗೆ ತೆರೆ ಬೀಳುವ ಸಾಧ್ಯತೆ ಇದೆ.