ವರುಣಾದಲ್ಲಿ ವಿಜಯೇಂದ್ರ ನಿಂತ್ರೂ ಗೆಲ್ಲೋದು ಸಿದ್ರಾಮಯ್ಯ ಎಂದ ಬಿವಿ ಶ್ರೀನಿವಾಸ್‌!

By Santosh NaikFirst Published Mar 31, 2023, 3:40 PM IST
Highlights

ಹೈವೋಲ್ಟೇಜ್‌ ವರುಣಾ ಕ್ಷೇತ್ರದಲ್ಲಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡಿದರೂ, ಗೆಲುವು ಕಾಣೋದು ಯಡಿಯೂರಪ್ಪ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿವಿ ಶ್ರೀನಿವಾಸ್‌ ಹೇಳಿದ್ದಾರೆ.
 

ನವದೆಹಲಿ (ಮಾ.31): ಸಿದ್ಧರಾಮಯ್ಯ ಸ್ಪರ್ಧೆ ಕಾರಣಕ್ಕೆ ಹೈವೋಲ್ಟೇಜ್‌ ಕ್ಷೇತ್ರವಾಗಿರುವ ವರುಣಾದಲ್ಲಿ ಈ ಬಾರಿಯೂ ಕಾಂಗ್ರೆಸ್‌ ಜಯಭೇರಿ ಬಾರಿಸಲಿದೆ. ಅಲ್ಲಿ ಸಿದ್ಧರಾಮಯ್ಯ ಯಾರ ವಿರುದ್ಧ ಬೇಕಾದರೂ ಗೆಲುವು ಸಾಧಿಸುತ್ತಾರೆ. ವಿಜಯೇಂದ್ರ ಅಲ್ಲಿ ನಿಲ್ಲಬಹುದೇನೋ, ಆದರೆ ಗೆಲ್ಲೋದು ಮಾತ್ರ ಸಿದ್ಧರಾಮಯ್ಯ. ವರುಣಾದಲ್ಲಿ ಕಾಂಗ್ರೆಸ್‌ಗೆ ಯಾವುದೇ ಸಮಸ್ಯೆ ಇಲ್ಲ. ಅಲ್ಲಿ ಸಿದ್ಧರಾಮಯ್ಯ ಗೆಲ್ಲೋದು ಕನ್ಫರ್ಮ್‌ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ ಅಧ್ಯಕ್ಷ ಬಿವಿ ಶ್ರೀನಿವಾಸ್‌ ಹೇಳಿದ್ದಾರೆ. ಇನ್ನು ಮುಂದಿನ ಚುನಾವಣೆಯಲ್ಲಿ ಯುವ ಕಾಂಗ್ರೆಸ್‌ಗೆ 15 ಟಿಕೆಟ್‌ ಕೊಡಬೇಕು ಎಂದು ಕೇಳಿದ್ದೇವೆ. ಸ್ಕ್ರೀನಿಂಗ್ ಕಮಿಟಿಯಲ್ಲೂ ಕೂಡ 10 ಜನರ ಹೆಸರು ಚರ್ಚೆಗೆ ಬಂದಿದೆ ಅನ್ನೋದು ಗೊತ್ತಾಗಿದೆ. ನಾನು ಚುನಾವಣೆಗೆ ಈ ಬಾರಿ ನಿಲ್ಲುತ್ತಿಲ್ಲ.  ಸದ್ಯ ನಮ್ಮ ಗುರಿ ಕಾಂಗ್ರೆಸ್ ಅನ್ನು ಗೆಲ್ಲಿಸಬೇಕು ಅನ್ನೋದು. ನಾನು ಟಿಕೆಟ್ ಗೆ ಅಂತ ಯಾವುದೇ ಅರ್ಜಿ ಹಾಕಿಲ್ಲ. ನಾನು ಈ ಬಾರಿ ಎಲೆಕ್ಷನ್‌ಗೆ ನಿಲ್ಲೋದಿಲ್ಲ ಎಂದು ಹೇಳಿದ್ದಾರೆ.

ಮೊದಲ ಪಟ್ಟಿಯಲ್ಲಿ ಯೂತ್ ಕಾಂಗ್ರೆಸ್ ಹಿನ್ನೆಲೆ ಇರೋ ಮಿಥುನ್ ಗೆ ಟಿಕೆಟ್ ಸಿಕ್ಕಿದೆ. ಈಗ ಎರಡನೇ ಪಟ್ಟಿ ಬಿಡುಗಡೆ ಆಗುವ ಸನಿಹದಲ್ಲಿದೆ. ಯೂತ್ ಕಾಂಗ್ರೆಸ್‌ನ ಟಿಕೆಟ್‌ ಆಕಾಂಕ್ಷಿಗಳು ಬಹಳವಿದ್ದಾರೆ. ಹಿಂದೆ ಇದ್ದೋರು, ಈಗ ಇರೋರು ಎಲ್ಲರೂ ನಿರೀಕ್ಷೆಯಲ್ಲಿದ್ದಾರೆ. ಅದಕ್ಕಾಗಿಯೇ ನಾವು ಹೆಚ್ಚಿನ ಮನವಿ ಮಾಡುತ್ತಿದ್ದೇವೆ. ರಣದೀಪ್‌ ಸುರ್ಜೆವಾಲ, ಡಿ ಕೆ ಶಿವಕುಮಾರ್ ಸೇರಿದಂತೆ ನಮ್ಮೆಲ್ಲ ನಾಯಕರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಮಲ್ಲಿಕಾರ್ಜುನ ಖರ್ಗೆ ಸಹ ಕರ್ನಾಟಕದವರೇ,  ಹೇಗೆ ಟಿಕೆಟ್‌ ಹಂಚಬೇಕು ಅನ್ನೋದು ಮಲ್ಲಿಕಾರ್ಜುನ ಖರ್ಗೆ ಅವರಿಗೂ ಗೊತ್ತಿದೆ. ನಮ್ಮಲ್ಲಿ ಯಾವುದೇ ಕೋಟಾ ಇಲ್ಲಾ, ಟಿಕೆಟ್ ಹೀಗೇ ಕೊಡ್ಬೇಕು ಅಂತ. ಆದರೆ, ನಮಗೂ ಸಹ ಯುವ ಕಾಂಗ್ರೆಸ್ ಗೆ ಟಿಕೆಟ್ ಬೇಕು ಅಂತ ಕೇಳಿದ್ದೇವೆ. ಈ ಬಾರಿ ನಮಗೆ ಅವಕಾಶ ಸಿಗಲಿದೆ, ನಾವು ಕೂಡ ಗೆದ್ದು ಬರುತ್ತೇವೆ. ಕರ್ನಾಟಕದ ಯುವಕರು ನಿರೋದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇಂತವರಿಗೆ ಮಾಶಾಸನ ಕೊಡುವ ಕೆಲಸ ಕಾಂಗ್ರೆಸ್ ಮಾಡಲಿದೆ. ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ, ಅದು ಕಾಂಗ್ರೆಸ್ ಸರ್ಕಾರ ಮಾತ್ರ. ಕರ್ನಾಟಕದ ಎಲ್ಲಾ ಜನರನ್ನು ಉಳಿಸಬೇಕು ಅಂದ್ರೆ ಅದು ಕಾಂಗ್ರೆಸ್ ನಿಂದ ಮಾತ್ರವೇ ಸಾಧ್ಯ. ಇದು ನಾವಲ್ಲ ಜನರೇ ಯೋಚನೆ ಮಾಡ್ತಿದ್ದಾರೆ ಎಂದು ಹೇಳಿದ್ದಾರೆ.

ಈ 40% ಸರ್ಕಾರ ಅಂತ ಜನರ ತಲೆ ತುಂಬಾ ತುಂಬಿಕೊಂಡಿದೆ. ಅಶ್ವಥ್ ನಾರಾಯಣ್, ಓ ಟಿ ರವಿ ಇವ್ರೆಲ್ಲ ಬರಿ ಸುಳ್ಳು ಹೇಳ್ತಾ ಬಂದಿದ್ದಾರೆ ಅಷ್ಟೇ. ಉರಿ ನಂಜೇ ಇಂಥವುಗಳನ್ನೇ ಇವರು ಮಾಡೋದು. ಬಿಜೆಪಿಯವರಿಗೆ ನಾವು ಇತಿಹಾಸ ಮತ್ತು ಸಂವಿಧಾನದ ಪುಸ್ತಕ ಕಳಿಸುತ್ತೇವೆ. ಅದನ್ನು ಓದಿ ಬೇಕಾದರೆ ತಿಳಿದುಕೊಳ್ಳಲಿ ಎಂದಿದ್ದಾರೆ.

'ಡಾರ್ಲಿಂಗ್‌ ಮಾಡ್ಕೊಂಡು ಬೆಡ್‌ರೂಮ್‌ಗೆ ತಂದಿದ್ದಾರೆ..' ಸ್ಮೃತಿ ಇರಾನಿ ವಿರುದ್ಧ ಬಿವಿ ಶ್ರೀನಿವಾಸ್‌ 'ಸೆಕ್ಸಿಸ್ಟ್‌' ಹೇಳಿಕೆ!

ಬಿಜೆಪಿಯಿಂದ ನಾವು ಕಲಿಯಬೇಕಿಲ್ಲ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುರಿತಾದ ಹೇಳಿಕೆಯ ಬಗ್ಗೆಯೂ ಶ್ರೀನಿವಾಸ್‌, ಇದೇ ಸ್ಮೃತಿ ಇರಾನಿಯವರು ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿ ಬೆಲೆ ಏರಿಕೆ ಯನ್ನು ಭೂತಕ್ಕೆ ಹೋಲಿಸಿದ್ದರು. ನಾನು ಅದನ್ನು ಮುಂದುವರೆಸಿ ಅದೇ ಭೂತ ಈಗ ಬೆಡ್ ರೂಮ್ ನಲ್ಲಿ ಕೂತಿದೆ ಎಂದೆ. ಇದರಲ್ಲಿ ತಪ್ಪೇನಿದೆ. ಬಿಜೆಪಿ ವಾಟ್ಸಾಪ್‌ ವಿವಿ ನನ್ನ ಹೇಳಿಕೆ ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ ಅಂಥ ಪ್ರಚಾರ ಮಾಡಿದ್ದರು. ಹೆಣ್ಣುಮಕ್ಕಳಿಗೆ ಗೌರವ ಕೊಡೋದರ ಬಗ್ಗೆ ಬಿಜೆಪಿ ಯವರು ನಮಗೆ ಕಲಿಸಬೇಕಿಲ್ಲ. ಅದು ನಮ್ಮ ಸಂಸ್ಕೃತಿಯೂ ಅಲ್ಲ. ತ್ರಿಪುರ ಶಾಸಕನೊಬ್ಬ ವಿಧಾನಸೌದಲ್ಲಿ ಕೂತು ಅಶ್ಲೀಲ ವಿಡಿಯೋ ನೋಡುತ್ತಾರೆ. ಕರ್ನಾಟಕದಲ್ಲೂ ಈ ಪ್ರಸಂಗ ಹಿಂದೆ ನಡೆದಿತ್ತು ಎಂದು ಹೇಳಿದ್ದಾರೆ.

ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ನೆಕ್ಕುತ್ತಿದ್ರು ಹೇಳಿಕೆಗೆ ತಿರುಗೇಟು

ಬಿಜೆಪಿ ಇತಿಹಾಸ ತೆಗೆದು ನೋಡಿದರೆ ಧರ್ಮ ಜಾತಿ ಹೆಸರಿನಲ್ಲಿ ಹೇಗೆ ಸಮಾಜ ಒಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಮೊದಲಿನಿಂದಲೂ ಸಹ ಬಿಜೆಪಿ ಮಾಡಿಕೊಂಡು ಬಂದಿರೋದು ಇದನ್ನೇ. ಈಗ ಬಿಜೆಪಿ ಮಾತಾಡೋದು ಬಿಟ್ಟಿದೆ, ಉದ್ಯೋಗ ಅಂದ್ರೂ ಆಗಿಲ್ಲ, ಕಪ್ಪು ಹಣ ಅಂದ್ರೂ ಅದೇ ಬಂದಿಲ್ಲ. ಈಗ ಕಪ್ಪು ಹಣ ಮೊದಲಿಗಿಂತಲೂ ಸಹ ಡಬಲ್ ಆಗಿದೆ. ರಾಹುಲ್ ಗಾಂಧಿ ಅದಾನಿ ಬಗ್ಗೆ ಪ್ರಶ್ನೆ ಕೇಳಿದ್ರೆ ಉತ್ತರ ಕೊಡಲ್ಲ. ರಾಹುಲ್ ಗಾಂಧಿ ಕೇಳಿದ ಪ್ರಶ್ನೆಗಳಿಗೆ ಅವರಿಗೆ ಉತ್ತರ ಕೊಡೋಕೆ ಆಗಿಲ್ಲ. ಇದೆ ವಿಚಾರಕ್ಕೆ ಅವರನ್ನ ಲೋಕಸಭೆಯಲ್ಲಿ ಅನರ್ಹ ಮಾಡಿದ್ದಾರೆ. ಬಿಜೆಪಿಗೆ ಬೇರೆ ಕಾನೂನು, ಇನ್ನುಳಿದ ಪಕ್ಷಕ್ಕೆ ಮತ್ತೊಂದು ಕಾನೂನು ಅನ್ನೋದಿದ್ಯಾ? ಇದು ಪ್ರಜಾಪ್ರಭುತ್ವಕ್ಕೇ ಶೋಭೆ ತರೋದಿಲ್ಲ. ಪ್ರಜಾಪ್ರಭುತ್ವ ದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳೋದು ತಪ್ಪಾ? ಎಂದು ಕೇಳಿದ್ದಾರೆ.

click me!