ಹೇಮಾಮಾಲಿನಿ ಬಗ್ಗೆ ಅವಹೇಳನ: ಸುರ್ಜೇವಾಲಾ ಪ್ರಚಾರಕ್ಕೆ ನಿಷೇಧ

By Kannadaprabha NewsFirst Published Apr 17, 2024, 8:44 AM IST
Highlights

ಮಂಗಳವಾರ ಸಂಜೆ 6 ಗಂಟೆಯಿಂದ 48 ಗಂಟೆಗಳ ಕಾಲ ಸುರ್ಜೇವಾಲಾ ಯಾವುದೇ ಸಾರ್ವಜನಿಕ ಸಭೆಗಳು, ರ್‍ಯಾಲಿಗಳು, ರೋಡ್‌ಶೋಗಳು, ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಕೂಡದು’ ಎಂದು ಆಯೋಗ ಸೂಚಿಸಿದೆ.

ನವದೆಹಲಿ(ಏ.17):  ನಟಿ ಹಾಗೂ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೇಮಾ ಮಾಲಿನಿ ಬಗ್ಗೆ ಕೀಳು ಹೇಳಿಕೆ ನೀಡಿದ್ದಕ್ಕಾಗಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರಿಗೆ ಚುನಾವಣಾ ಆಯೋಗ, 2 ದಿನದ ಮಟ್ಟಿಗೆ ಪ್ರಚಾರದಿಂದ ನಿರ್ಬಂಧ ಹೇರಿದೆ.

‘ಮಂಗಳವಾರ ಸಂಜೆ 6 ಗಂಟೆಯಿಂದ 48 ಗಂಟೆಗಳ ಕಾಲ ಸುರ್ಜೇವಾಲಾ ಯಾವುದೇ ಸಾರ್ವಜನಿಕ ಸಭೆಗಳು, ರ್‍ಯಾಲಿಗಳು, ರೋಡ್‌ಶೋಗಳು, ಸಂದರ್ಶನಗಳು, ಮಾಧ್ಯಮಗಳಲ್ಲಿ ಸಾರ್ವಜನಿಕ ಹೇಳಿಕೆಗಳನ್ನು ನೀಡಕೂಡದು’ ಎಂದು ಆಯೋಗ ಸೂಚಿಸಿದೆ.

ಬಿಜೆಪಿ ಮತ ಹಾಕೋರು ರಾಕ್ಷಸರು: ಸುರ್ಜೇವಾಲಾ ಹೇಳಿಕೆ ವಿರುದ್ಧ ಕೇಸ್‌

ಇತ್ತೀಚೆಗೆ ಪ್ರಚಾರ ಸಭೆಯೊಂದರಲ್ಲಿ ‘ಹೇಮಾಮಾಲಿನಿಯನ್ನು ಜನ ಆಯ್ಕೆ ಮಾಡಿದ್ದು ನೆಕ್ಕೋದಕ್ಕಾ?’ ಎಂದು ಕೇಳಿದ್ದರು. ಇದು ವಿವಾದಕ್ಕೀಡಾಗಿತ್ತು ಹಾಗೂ ಸುರ್ಜೇವಾಲಾ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ಸಲ್ಲಿಸಿತ್ತು.

click me!