ಬಳ್ಳಾರಿ-ವಿಜಯನಗರ : ಎಲ್ಲ ಕ್ಷೇತ್ರಗಳಲ್ಲಿ ರೆಡ್ಡಿ ಪಕ್ಷದ ಅಭ್ಯರ್ಥಿಗಳು ಕಣಕ್ಕೆ!

By Kannadaprabha News  |  First Published Dec 28, 2022, 2:11 AM IST

ಬಿಜೆಪಿಗೆ ಮತ್ತೆ ಸೇರಲಿಚ್ಛಿಸಿ ಕೊನೆಗೂ ವಿಫಲರಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಯ ಮುಂದಡಿ ಇಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರೆ.


ಕೆ.ಎಂ.ಮಂಜುನಾಥ್‌

 ಬಳ್ಳಾರಿ (ಡಿ.28) : ಬಿಜೆಪಿಗೆ ಮತ್ತೆ ಸೇರಲಿಚ್ಛಿಸಿ ಕೊನೆಗೂ ವಿಫಲರಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪನೆಯ ಮುಂದಡಿ ಇಟ್ಟಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಈ ಬಾರಿಯ ಚುನಾವಣೆಯಲ್ಲಿ ಅಖಂಡ ಬಳ್ಳಾರಿ ಜಿಲ್ಲೆಯ ಎಲ್ಲ ಸ್ಥಾನಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರ ಮಾಡಿದ್ದಾರಂತೆ. ಅಷ್ಟೇ ಅಲ್ಲ; ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಪಡೆದು ಬಿಜೆಪಿಗೆ ತನ್ನ ಶಕ್ತಿ ನಿರೂಪಿಸಲು ಮುಂದಾಗಿದ್ದಾರೆ.

Latest Videos

undefined

ಬಳ್ಳಾರಿ ಹಾಗೂ ವಿಜಯನಗರ(Ballari-Vijayanagara) ಸೇರಿದಂತೆ ಕಲ್ಯಾಣ ಕರ್ನಾಟಕ(Kalyana karnataka)ದ ಜಿಲ್ಲೆಗಳಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟ ಆರಂಭಿಸಿದ್ದು, ಕೈ-ಕಮಲ ಪಕ್ಷಗಳ ಅನೇಕ ನಾಯಕರು ಈ ಬಾರಿ ರೆಡ್ಡಿ(janardanareddy) ಪಕ್ಷದತ್ತ ಹೆಜ್ಜೆ ಹಾಕುವ ಸಾಧ್ಯತೆಗಳಿವೆ. ಇದು ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ತಡೆಯೊಡ್ಡಿದರೂ ಅಚ್ಚರಿಯಿಲ್ಲ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

 

ನನ್ನ ಜತೆ ಯಾರ‍್ಯಾರು ಬರ್ತಾರೆ ಅಂತ ಡಿ.25ಕ್ಕೆ ನೋಡಿ: ಜನಾರ್ದನ ರೆಡ್ಡಿ

ಬಳ್ಳಾರಿ-ವಿಜಯನಗರ ಮೇಲೆ ದೃಷ್ಟಿ:

ಈ ಬಾರಿಯ ಚುನಾವಣೆಯಲ್ಲಿ 45 ಸ್ಥಾನಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಯುವ ನಿರ್ಧಾರ ಕೈಗೊಂಡಿರುವ ಜನಾರ್ದನ ರೆಡ್ಡಿ, ಕನಿಷ್ಠ 15ರಿಂದ 20 ಸ್ಥಾನಗಳನ್ನು ಗೆಲ್ಲಲೇಬೇಕು ಎಂಬ ಲೆಕ್ಕಾಚಾರದಲ್ಲಿಯೇ ರಾಜಕೀಯ ದಾಳ ಉರುಳಿಸುತ್ತಿದ್ದಾರೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ 10 ವಿಧಾನಸಭಾ ಕ್ಷೇತ್ರಗಳು ಬರುತ್ತಿದ್ದು, ಈ ಎರಡು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲು ರೆಡ್ಡಿ ಕಾರ್ಯತಂತ್ರ ರೂಪಿಸಿಕೊಳ್ಳಲಿದ್ದಾರೆ. ಏತನ್ಮಧ್ಯೆ ರೆಡ್ಡಿಯ ನೂತನ ಪಕ್ಷಕ್ಕೆ ಸೇರ್ಪಡೆಗೊಳ್ಳಲು ಅನೇಕರು ಸಂಪರ್ಕ ಮಾಡುತ್ತಿರುವುದು ರೆಡ್ಡಿಯ ಉತ್ಸಾಹವನ್ನು ಮತ್ತಷ್ಟೂಇಮ್ಮಡಿಗೊಳಿಸಿದೆ.

ಚುನಾವಣೆಯ ಫಲಿತಾಂಶದಲ್ಲಿ ತಮ್ಮ ಪಕ್ಷ ಎರಡಂಕಿ ದಾಟಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಕ್ಷೇತ್ರಗಳ ಕಡೆ ಹೆಚ್ಚು ನಿಗಾ ಇಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದೆ. ಬಳ್ಳಾರಿಯಲ್ಲಿ ಬಿಜೆಪಿ ಬಲವರ್ಧನೆಗೊಳ್ಳಲು ಈ ಹಿಂದೆ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲು ಜಿಲ್ಲೆಯಲ್ಲಿ ಓಡಾಡಿ ಪಕ್ಷ ಸಂಘಟನೆ ಮಾಡಿದ್ದರು. ಅಖಂಡ ಜಿಲ್ಲೆಯಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಲು ಕಾರ್ಯತಂತ್ರ ರೂಪಿಸಿ, ಸಫಲರಾಗಿದ್ದರು. ಹೀಗಾಗಿ ಅಖಂಡ ಜಿಲ್ಲೆಯ ಎಲ್ಲ ಕ್ಷೇತ್ರಗಳ ನಾಡಿಮಿಡಿತ ಗೊತ್ತಿರುವ ರೆಡ್ಡಿ, ಉಭಯ ಜಿಲ್ಲೆಗಳಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಯೋಜನೆ ರೂಪಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

ಸೂಕ್ತ ಅಭ್ಯರ್ಥಿಗಳ ಶೋಧ:

ಬಿಜೆಪಿಯಿಂದ ಜಿ.ಸೋಮಶೇಖರ ರೆಡ್ಡಿ(Somashekhar reddy) ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ರೆಡ್ಡಿಯ ನೂತನ ಕಲ್ಯಾಣ ಪ್ರಗತಿ ಪಕ್ಷದಿಂದ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕುತೂಹಲವಿದೆ. ರೆಡ್ಡಿ ಆಪ್ತರ ಪ್ರಕಾರ ಬಳ್ಳಾರಿ-ವಿಜಯನಗರ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲೂ ಕಲ್ಯಾಣ ಪ್ರಗತಿಪಕ್ಷದ ಅಭ್ಯರ್ಥಿಗಳು ಅಖಾಡಕ್ಕೆ ಇಳಿಯಲಿದ್ದಾರೆ. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಸೂಕ್ತ ಅಭ್ಯರ್ಥಿಗಳ ಹುಡುಕಾಟವೂ ಶುರುವಾಗಿದೆ ಎಂದು ಹೇಳಲಾಗುತ್ತಿದೆ.

Assembly election: ವಿವಿಧ ಪಕ್ಷಗಳ ಮುಖಂಡರೊಂದಿಗೆ ಟೆಂಪಲ್‌ ರನ್‌ ಮಾಡಿದ ಜನಾರ್ಧನರೆಡ್ಡಿ

ಜನಾರ್ದನ ರೆಡ್ಡಿ ಅವರ ನೂತನ ಪಕ್ಷದಿಂದ ಅಖಾಡಕ್ಕೆ ಇಳಿಯುವವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಯನ್ನು ಗಮನದಲ್ಲಿಟ್ಟುಕೊಂಡೇ ಕಾರ್ಯತಂತ್ರ ರೂಪಿಸಿಕೊಳ್ಳಲಾಗುತ್ತಿದೆ. ಈಗಾಗಲೇ ಪಕ್ಷದ ಪ್ರಣಾಳಿಕೆ ಸೇರಿದಂತೆ ಅಭ್ಯರ್ಥಿಗಳ ಹುಡುಕಾಟ ನಡೆದಿದೆ. ಯಾವಾಗಾದರೂ ಚುನಾವಣೆ ಘೋಷಣೆ ಸಾಧ್ಯತೆಗಳ ಹಿನ್ನೆಲೆಯಲ್ಲಿಯೇ ಈಗಿನಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ.

* ಜನಾರ್ದನ ರೆಡ್ಡಿ ಆಪ್ತರು. ಬಳ್ಳಾರಿ.

click me!