ಹಿಂದುಳಿದ ವರ್ಗಗಳೇ ಬಿಜೆಪಿಯ ಶಕ್ತಿ: ಸಚಿವ ಭೈರತಿ ಬಸವರಾಜ

By Kannadaprabha News  |  First Published Oct 2, 2022, 10:00 PM IST

ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿದ್ದು, ಪರಿಶಿಷ್ಟರು, ಹಿಂದುಳಿದವರು ಹೀಗೆ ಎಲ್ಲಾ ವರ್ಗದ ಜನರ ಪರ ಅನೇಕ ಕಾರ್ಯಕ್ರಮ, ಯೋಜನೆ ರೂಪಿಸಿ, ಜಾರಿಗೊಳಿಸುತ್ತಿವೆ ಎಂದ ಸಚಿವ ಭೈರತಿ


ದಾವಣಗೆರೆ(ಅ.02):  ದಾವಣಗೆರೆ ಸೇರಿದಂತೆ ರಾಜ್ಯದ ಕನಿಷ್ಟ150 ಕ್ಷೇತ್ರಗಳಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಹಿಂದುಳಿದ ವರ್ಗಗಳ ಸಮುದಾಯಗಳು ಪಕ್ಷವನ್ನು ಬೆಂಬಲಿಸಬೇಕು ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಹಿಂದುಳಿದ ವರ್ಗ ಸಮುದಾಯಗಳಿಗೆ ಮನವಿ ಮಾಡಿದರು. ನಗರದ ನಿಟುವಳ್ಳಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಶನಿವಾರ ಬಿಜೆಪಿ ಹಿಂದುಳಿದ ವರ್ಗಗಳ ಕಲಬುರಗಿ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿ ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿದ್ದು, ಪರಿಶಿಷ್ಟರು, ಹಿಂದುಳಿದವರು ಹೀಗೆ ಎಲ್ಲಾ ವರ್ಗದ ಜನರ ಪರ ಅನೇಕ ಕಾರ್ಯಕ್ರಮ, ಯೋಜನೆ ರೂಪಿಸಿ, ಜಾರಿಗೊಳಿಸುತ್ತಿವೆ ಎಂದರು.

ರೈತರು, ವಿದ್ಯಾರ್ಥಿಗಳು ಹಾಗೂ ಬಡವರ ಪರವಾಗಿ ಸರ್ಕಾರ ಕೆಲಸ ಮಾಡುತ್ತಿದೆ. ಈ ವಿಚಾರಗಳನ್ನು ಜನರ ಮನೆ ಮನೆಗೆ ತಲುಪಿಸಬೇಕು. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಅಧಿಕಾರ ಸಿಗಬಾರದು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದು, ಅಧಿಕಾರಕ್ಕೆ ಬರಲಿದ್ದು, ಇದಕ್ಕೆ ಹಿಂದುಳಿದ ವರ್ಗಗಳ ಮೋರ್ಚಾಗಳ ಪದಾಧಿಕಾರಿಗಳು, ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕು ಎಂದು ತಿಳಿಸಿದರು.

Tap to resize

Latest Videos

ಹೈಕೋರ್ಟ್ ತೀರ್ಪಿನಿಂದ ಬಿಜೆಪಿಗೆ ಮುಖಭಂಗ

ಶಕ್ತಿ ಪ್ರದರ್ಶನ:

ಸಂಸದ, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ ಮಾತನಾಡಿ, ಹಿಂದುಳಿದ ವರ್ಗದವರೇ ಬಿಜೆಪಿಗೆ ದೊಡ್ಡ ಶಕ್ತಿ, ಇದಕ್ಕಾಗಿಯೇ ಬಿಜೆಪಿ ಎರಡು ಸಲ ಅಧಿಕಾರಕ್ಕೆ ಬರಲು ಸಾಧ್ಯವಾಗಿದೆ. ಹಿಂದಿನ ಯಾವುದೇ ಸರ್ಕಾರಗಳಲ್ಲೂ ಕೇಂದ್ರ, ರಾಜ್ಯದಲ್ಲಿ ಇಷ್ಟೊಂದು ಜನ ಹಿಂದುಳಿದ ವರ್ಗಗಳ ಮಂತ್ರಿಗಳಿರಲಿಲ್ಲ. ಕಲಬುರಗಿ ಸಮಾವೇಶವು ಚುನಾವಣೆ ಪೂರ್ವದ ಶಕ್ತಿ ಪ್ರದರ್ಶನವಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದಲೂ 3-4 ಸಾವಿರ ಜನರು ಸಮಾವೇಶಕ್ಕೆ ತೆರಳಬೇಕು. ಜಿಲ್ಲೆಯಿಂದ ಅತೀ ಹೆಚ್ಚು ಮುಖಂಡರು, ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಿ ಎಂದರು.

ಮೋರ್ಚಾ ಅಧ್ಯಕ್ಷ ಕೆ.ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯಾಧ್ಯಕ್ಷ ನೆ.ಲ.ನರೇಂದ್ರ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಪಾಲಿಕೆ ಸದಸ್ಯೆ, ಮಾಜಿ ಮೇಯರ್‌ ಡಿ.ಎಸ್‌.ಉಮಾ ಪ್ರಕಾಶ್‌ ಮಾತನಾಡಿದರು. ಶಾಸಕ ಪ್ರೊ.ಎನ್‌.ಲಿಂಗಣ್ಣ, ಸುರೇಶ ಬಾಬು, ಭೋಜರಾಜ, ಯಶವಂತರಾವ್‌ ರಾವ್‌, ರಾಜನಹಳ್ಳಿ ಶಿವವಕುಮಾರ, ಬಿ.ಎಸ್‌.ಜಗದೀಶ, ಸೊಕ್ಕೆ ನಾಗರಾಜ, ಕೆ.ಪ್ರಸನ್ನಕುಮಾರ, ಗೀತಾ ದಿಳ್ಯಪ್ಪ, ರೇಣುಕಾ ಶ್ರೀನಿವಾಸ, ರೇಖಾ ಸುರೇಶ, ಜಯಶೀಲ, ವೈ.ಮಲ್ಲೇಶ, ಎಚ್‌.ಎನ್‌.ಗುರುನಾಥ, ಶ್ಯಾಗಲೆ ದೇವೇಂದಪ್ಪ, ಸಿ.ಎಸ್‌.ಆನಂದಪ್ಪ, ಪಿ.ಎಸ್‌.ಜಯಣ್ಣ, ಎಲ್‌.ಎನ್‌.ಕಲ್ಲೇಶ, ಹೇಮಂತಕುಆಮರ, ಮಹೇಂದ್ರ ಹೆಬ್ಬಾಳ, ಬಿ.ಎಂ.ಸತೀಶ ಇತರರು ಇದ್ದರು.

ಸಮಾವೇಶಕ್ಕೆ ಬಂದವರೆಲ್ಲರೂ ಮತ ಹಾಕುತ್ತಾರೆಂಬುದು ಸುಳ್ಳು. ಹಾಗಾಗಿ ಮನೆ ಮನೆಗೆ ಹೋಗಿ, ಬಿಜೆಪಿ ಬೆಂಬಲಿಸಲು ಮತದಾರರ ಮನವೊಲಿಸಬೇಕು. ಯಾವುದೇ ವೈಷಮ್ಯ, ಭಿನ್ನಾಭಿಪ್ರಾಯಗಳಿದ್ದರೂ ಅದನ್ನೆಲ್ಲಾ ಬದಿಗೊತ್ತಿ, ಪಕ್ಷದ ಹಿತಕ್ಕಾಗಿ ಕೆಲಸ ಮಾಡಿ ಮುಂಬರುವ ವಿಧಾನಸಭೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸುವ ಕೆಲಸ ಆಗಬೇಕು ಅಂತ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತಿಳಿಸಿದ್ದಾರೆ. 
 

click me!