ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನ ಬಿಜೆಪಿ ಪಾಲು, ಚಿಂಚನಸೂರ್ ಅವಿರೋಧ ಆಯ್ಕೆ

By Suvarna NewsFirst Published Aug 4, 2022, 4:40 PM IST
Highlights

ಸಿ,ಎಂ. ಇಬ್ರಾಹಿಂ ರಾಜೀನಾಮೆಯಿಂದ ತೆರವಾಗಿದ್ದ ವಿಧಾನಪರಿಷತ್‌ನ ಒಂದು ಸ್ಥಾನ ಬಿಜೆಪಿ ಪಾಲಾಗಿದೆ. ಈ ಹಿಂದೆ ಇಬ್ರಾಹಿಂ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು.

ಬೆಂಗಳೂರು, (ಆಗಸ್ಟ್. 04): ನೂತನ ವಿಧಾನಪರಿಷತ್ ಸದಸ್ಯರಾಗಿ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವಿರೋಧ ಆಯ್ಕೆಯಾಗಿದ್ದಾರೆ. ವಿಧಾಪರಿಷತ್‌ನ ಒಂದು ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿತ್ತು. ಆದ್ರೆ, ಯಾರು ಸಹ ನಾಮಪತ್ರ ಸಲ್ಲಿಸದಿದ್ದರಿಂದ ಬಾಬೂರಾವ್ ಚಿಂಚನಸೂರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಚಿಂಚನಸೂರು ಅವರ ಅಧಿಕಾರವಧಿ 2024 ರ ಜೂನ್ ತಿಂಗಳವರೆಗೆ ಇರಲಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಚಿಂಚನಸೂರ್ ಅವರು ಕಾಂಗ್ರೆಸ್  ತೊರೆದು ಬಿಜೆಪಿಗೆ ಸೇರಿದ್ದರು. 

ಸಿ.ಎಂ.ಇಬ್ರಾಹಿಂ ಸ್ಥಾನಕ್ಕೆ ಬೈ ಎಲೆಕ್ಷನ್, ಹಿಂದೂಳಿದ ವರ್ಗಕ್ಕೆ ಮಣೆ ಹಾಕಿದ ಬಿಜೆಪಿ

ಸಿ.ಎಂ. ಇಬ್ರಾಹಿಂ ಅವರ ರಾಜೀನಾಮೆಯಿಂದ ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಮಾಡಲಾಗಿತ್ತು. ಈ ಒಂದು ಸ್ಥಾನಕ್ಕೆ ಬಿಜೆಪಿ ಕೋಲಿ ಸಮುದಾಯದ  ಬಾಬುರಾವ್ ಚಿಂಚನಸೂರ್ ಅವರನ್ನ ಕಣಕ್ಕಿಳಿಸಿತ್ತು. ಆದ್ರೆ, ಕಣದಲ್ಲಿ ಪ್ರತಿಸ್ಪರ್ಧೆ ಯಾರು ,ಇರಲಿಲ್ಲ. ಇದರಿಂದ ಬಾಬೂರಾವ್ ಚಿಂಚನಸೂರ್ ಅವರ ಗೆಲುವನ್ನು ಘೋಷಣೆ ಮಾಡಲಾಗಿದೆ.

ಆಗಸ್ಟ್ 4ರಂದು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿತ್ತು. ಆಗಸ್ಟ್ 11 ರಂದು ಬೆಳಿಗ್ಗೆ 9 ರಿಂದ ಸಾಯಂಕಾಲ 4ರವರೆಗೆ ಮತದಾನ ನಡೆಯಬೇಕಿತ್ತು.

2024 ರ ಜೂನ್ ತಿಂಗಳವರೆಗೆ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸಿ.ಎಂ.ಇಬ್ರಾಹಿಂ ಅವರ ಸದಸ್ಯತ್ವ ಅವಧಿ ಇತ್ತು. ಆದ್ರೆ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಸ್ಥಾನ ಸಿಗದೆ ಅಸಮಾಧಾನಗೊಂಡು ಇಬ್ರಾಹಿಂ ಕಾಂಗ್ರೆಸ್ ಹಾಗೂ ಪರಿಷತ್ ಸ್ಥಾನಕ್ಕೂ ರಾಜೀನಾಮೆ ನೀಡಿ ಜೆಡಿಎಸ್ ಸೇರ್ಪಡೆಯಾಗಿದ್ದರು.

click me!