ರಂಗೇರಿದ ಹುಣಸೂರು ಬೈ ಎಲೆಕ್ಷನ್: ಹೇಳಿದಂತೆ ಜಿಟಿಡಿ ಮನೆಗೆ ಶ್ರೀರಾಮುಲು

By Web Desk  |  First Published Nov 25, 2019, 4:54 PM IST

ಹೇಳಿದಂತೆ ಮಾಡಿದ ಶ್ರೀರಾಮುಲು, ಸೋಮವಾರ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ್ರನ್ನ ಭೇಟಿ ಮಾಡಿರುವುದು ತೀವ್ರ ಕುಹೂಕಲ ಮೂಡಿಸಿದೆ.


ಮೈಸೂರು, (ನ.25): ಹುಣಸೂರು ಉಪಚುನಾವಣೆ ಕಾವೇರುತ್ತಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಾನಾ ಕಸರತ್ತು ನಡೆಸಿದ್ದಾರೆ.

ಅದರಲ್ಲೂ ಜೆಡಿಎಸ್‌ನಿಂದ ದೂರ ಉಳಿದಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಶಾಸಕ ಜಿ.ಟಿ.ದೇವೇಗೌಡರ ನಡೆ ಮಾತ್ರ ಕುತೂಹಲ ಮೂಡಿಸಿದೆ.

Tap to resize

Latest Videos

ಜಿಟಿಡಿ ಭೇಟಿಯಾಗಿ ಬೆಂಬಲ ಕೋರಿದ ವಿಶ್ವನಾಥ್‌

ಲೋಕಸಭಾ ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ಕಾರ್ಯಗಳಿಂದ ಅಂತರ ಕಾಯ್ದುಕೊಂಡಿರುವ ಜಿಜಿಡಿ ಹುಣಸೂರು ಬೈ ಎಲೆಕ್ಷನ್‌ನಲ್ಲಿ ಯಾರಿಗೆ ಬೆಂಬಲ ನೀಡುತ್ತಾರೆ ಎನ್ನುವುದು ಮಾತ್ರ ಇನ್ನೂ ನಿರ್ಧಾರವಾಗಿಲ್ಲ.

ಈಗಾಗಲೇ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಹಾಗೂ ಬಿಜೆಪಿ ಅಭ್ಯರ್ಥಿ ಎಚ್.ವಿಶ್ವನಾಥ್, ಜಿಟಿ ದೇವೇಗೌಡ್ರನ್ನು ಭೇಟಿ ಮಾಡಿ ಬೆಂಬಲ ಕೋರಿದ್ದಾರೆ. ಆದ್ರೆ, ಜಿಟಿಡಿ ಮಾತ್ರ ಇದುವರೆಗೂ ತಮ್ಮ ನಿಲುವು ಪ್ರಕಟಿಸಿಲ್ಲ.

ನಾನು ಸಿದ್ದು ಅಣ್ಣ ತಮ್ಮಂದಿರಂತೆ: ಬರ್ತ್‌ಡೇ ಸಂದರ್ಭ ಜಿಟಿಡಿ ಮಾತು

ಬರ್ತ್ ಡೇ ನೆಪದಲ್ಲಿ ಜಿಟಿಡಿ ಮನೆಗೆ ರಾಮುಲು
ಅಂತಿಮವಾಗಿ ಇಂದು (ಸೋಮವಾರ) ಹುಣಸೂರು ಕ್ಷೇತ್ರದ ಉಸ್ತುವಾರಿ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಜಿಟಿ ದೇವೇಗೌಡರನ್ನು ಭೇಟಿ ಮಾಡಿದರು.  

ಮೈಸೂರಿನ ಅವರ ನಿವಾಸಕ್ಕೆ ಭೇಟಿ ನೀಡಿದ ಶ್ರೀರಾಮುಲು, ಜಿಟಿಡಿಗೆ ಜನ್ಮದಿನದ ಶುಭಾಶಯ ಕೋರಿದರು. ಹುಟ್ಟುಹಬ್ಬ ಶುಭಾಶಯ ತಿಳಿಸಲು ಸೋಮವಾರ ಜಿಟಿ.ದೇವೇಗೌಡರ ಮನೆಗೆ ಹೋಗುತ್ತೇನೆ ಎಂದು ರಾಮುಲು ಭಾನುವಾರ ಹೇಳಿದ್ದರು.

ಅರಸು ಕರ್ಮಭೂಮಿಯಲ್ಲಿ ಟಫ್‌ ಫೈಟ್‌; ವಿಶ್ವನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆ

ಅದರಂತೆ ಜನ್ಮದಿನದ ನೆಪದಲ್ಲಿ ಜಿಟಿ ದೇವೇಗೌಡ್ರನ್ನ ಭೇಟಿ ಮಾಡಿದ್ದು, ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದು ಸಹಜ ಕೂಡ.

ದಿನದಿಂದ ದಿನಕ್ಕೆ ಜೆಡಿಎಸ್‌ನಿಂದ ದೂರ ಉಳಿದಿರುವ ಜಿಟಿಡಿ ಬಿಜೆಪಿಗೆ ಹತ್ತಿರವಾಗುತ್ತಿದ್ದಾರೆ. ಮೊನ್ನೇ ಅಷ್ಟೇ ಸಚಿವ ಆರ್.ಅಶೋಕ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

click me!