B Nagendra Redux: ಒಂದೇ ಹಗರಣಕ್ಕೆ ಎರಡು ಬಾರಿ ನಾಗೇಂದ್ರ ರಾಜೀನಾಮೆ, ಸಂಪುಟದ 2 ಖಾಲಿ ಸ್ಥಾನಗಳು ಯಾರಿಗೆ?

Kannadaprabha News   | Kannada Prabha
Published : Aug 29, 2026, 07:48 AM IST
B Nagendra Resignation

ಸಾರಾಂಶ

ಸಚಿವ ಬಿ. ನಾಗೇಂದ್ರ ಅವರ ಸಂಭಾವ್ಯ ರಾಜೀನಾಮೆಯಿಂದಾಗಿ ಸಂಪುಟದಲ್ಲಿ ಎರಡು ಸ್ಥಾನಗಳು ಖಾಲಿಯಾಗುವ ನಿರೀಕ್ಷೆಯಿದೆ. ಈ ಸ್ಥಾನಗಳಿಗಾಗಿ ವಾಲ್ಮೀಕಿ, ಕುರುಬ ಸಮುದಾಯದ ಶಾಸಕರು ಹಾಗೂ ಪ್ರಿಯಕೃಷ್ಣ, ಲಕ್ಷ್ಮೀ ಹೆಬ್ಬಾಳ್ಕರ್‌ರಂತಹ ಪ್ರಭಾವಿ ನಾಯಕರು ತೀವ್ರ ಲಾಬಿ, ಯಾರಿಗೆ ಸಿಗಲಿದೆ ಸಚಿವ ಸ್ಥಾನ?

ಬೆಂಗಳೂರು (ಆ.29): ಸಚಿವ ಬಿ. ನಾಗೇಂದ್ರ ರಾಜೀನಾಮೆ(B Nagendra resignation)ಯಿಂದ ಸಂಪುಟದಲ್ಲಿ ಎರಡು ಸ್ಥಾನ ಖಾಲಿ ಆಗಲಿದ್ದು, ಮುಂದಿನ ವಾರ ನಡೆಯಬಹುದಾದ ಸಂಪುಟ ಭರ್ತಿ ವೇಳೆ ಯಾರಿಬ್ಬರು ಅವಕಾಶ ಗಿಟ್ಟಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಬಿ. ನಾಗೇಂದ್ರ ರಾಜೀನಾಮೆ ಅಂಗೀಕಾರವಾದರೆ ಖಾಲಿ ಆಗುವ ಸ್ಥಾನಕ್ಕೆ ವಾಲ್ಮೀಕಿ ಸಮುದಾಯದವರಿಗೇ ಅವಕಾಶ ನೀಡಬೇಕು ಎಂದರೆ ಇ.ಅನ್ನಪೂರ್ಣ ಅವರಿಗೆ ಅವಕಾಶ ಒಲಿಯಲಿದೆ. ಆ ಮೂಲಕ ಸಂಪುಟದಲ್ಲಿ ಖಾಲಿ ಇರುವ ಮಹಿಳಾ ಕೋಟಾ ಸಹ ಭರ್ತಿ ಮಾಡಿದಂತಾಗುತ್ತದೆ.

ಮತ್ತೊಂದು ಖಾಲಿ ಸ್ಥಾನಕ್ಕೆ ಕುರುಬ ಸಮುದಾಯದ ಬಸವರಾಜ ಶಿವಣ್ಣನವರ್ ಅವರಿಗೆ ನೀಡಿದರೆ ಸಿದ್ದರಾಮಯ್ಯ ಅವರ ಮುನಿಸು ಸಹ ಶಮನಗೊಳಿಸಬಹುದು ಎಂಬ ಚರ್ಚೆ ಶುರುವಾಗಿದೆ. ಆದರೆ, ಸಚಿವ ಸ್ಥಾನಕ್ಕೆ ಪಟ್ಟು ಹಿಡಿದಿರುವ ಎಂ. ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಇನ್ನೂ ತಣ್ಣಗಾಗಿಲ್ಲ. ಪ್ರಿಯಕೃಷ್ಣ ದೆಹಲಿಯಲ್ಲಿ ಬೀಡುಬಿಟ್ಟಿದ್ದು ಸಂಪುಟ ಸೇರಲು ಒತ್ತಡ ಹೇರುತ್ತಿದ್ದಾರೆ.

ಜತೆಗೆ ಸಂಪುಟಕ್ಕೆ ಸೇರ್ಪಡೆಯಾಗಲು ಲಕ್ಷ್ಮೀ ಹೆಬ್ಬಾಳ್ಕರ್‌ ದೆಹಲಿ ಮಟ್ಟದಲ್ಲಿ ತೀವ್ರ ಲಾಬಿ ನಡೆಸಿದ್ದಾರೆ. ಮತ್ತೊಂದೆಡೆ ರಾಜ್ಯಸಭೆ ಸದಸ್ಯ ಜಿ.ಸಿ. ಚಂದ್ರಶೇಖರ್‌ ಅವರು ಪರಿಷತ್‌ ಸದಸ್ಯರಾಗಿ ಸಚಿವರಾಗಲು ಪ್ರಯತ್ನ ತೀವ್ರಗೊಳಿಸಿದ್ದಾರೆ. ಹೀಗಾಗಿ ಖಾಲಿ ಇರುವ ಎರಡು ಸ್ಥಾನಗಳಿಗೆ ಲಾಬಿ ನಡೆಸುತ್ತಿರುವವರ ಪಟ್ಟಿ ದೊಡ್ಡದಿದ್ದು, ಅಂತಿಮವಾಗಿ ಯಾರು ಇಬ್ಬರು ಸಂಪುಟದ ಒಳಗೆ ಬರಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

KPSC Scam: 200 ಕೋಟಿ ಪಡೆದು ಸಾಹುಕಾರನ ಅಧ್ಯಕ್ಷ ಮಾಡಿದ್ದು ಯಾರು? ಶಿವಶಂಕರಪ್ಪ ಮನೆಯಲ್ಲಿ ಯಾರ ಫೋಟೋ ಇವೆ? ಹೆಚ್‌ಡಿಕೆಗೆ ಪ್ರಿಯಾಂಕ್ ಸವಾಲ್!
ದೋಸ್ತಿ ಹೋರಾಟಕ್ಕೆ ಮಣಿದ ಕಾಂಗ್ರೆಸ್‌, ಡಿಕೆ ಸಂಪುಟದ ಮೊದಲ ವಿಕೆಟ್‌ ಪತನ