ಶ್ರೀರಾಮ, ಲಕ್ಷ್ಮಣ,ಸೀತಾ ಇವರು ಎಲ್ಲಿಯೂ ತಾವು ದೇವತಾ ಸ್ವರೂಪಿ ಎಂದು ತೋರಿಸಿಕೊಂಡಿಲ್ಲ. ಆದರೆ ಅವರ ಹೆಸರಲ್ಲಿಂದು ಮಂದಿರ ಕಟ್ಟಿ ದೇವರಪಟ್ಟ ಕಟ್ಟಲು ಹೊರಟಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಸಂಸದ ವಿಎಸ್ ಉಗ್ರಪ್ಪ ಕಿಡಿಕಾರಿದರು.
ಬಳ್ಳಾರಿ (ಜ.5): ಶ್ರೀರಾಮ, ಲಕ್ಷ್ಮಣ,ಸೀತಾ ಇವರು ಎಲ್ಲಿಯೂ ತಾವು ದೇವತಾ ಸ್ವರೂಪಿ ಎಂದು ತೋರಿಸಿಕೊಂಡಿಲ್ಲ. ಆದರೆ ಅವರ ಹೆಸರಲ್ಲಿಂದು ಮಂದಿರ ಕಟ್ಟಿ ದೇವರಪಟ್ಟ ಕಟ್ಟಲು ಹೊರಟಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಮಾಜಿ ಸಂಸದ ವಿಎಸ್ ಉಗ್ರಪ್ಪ ಕಿಡಿಕಾರಿದರು.
ಆಯೋಧ್ಯೆ ರಾಮಮಂದಿರ ಉದ್ಘಾಟನೆ ಸಮಾರಂಭದ ಆಹ್ವಾನ ಪತ್ರಿಕೆ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ರಾಮ ಮಹಿಳೆರ ರಕ್ಷಣೆಗೆ ಹೋರಾಟ ಮಾಡಿದ, ನೀನೇನು ಮಾಡಿದೆ ಮೋದಿ ಎಂದು ಪ್ರಧಾನಿ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು, ಮುಂದುವರಿದು ನಿಮ್ಮ ಕುಟುಂಬದ ಮಹಿಳೆಯರ ರಕ್ಷಣೆ ಮಾಡೋಕೆ ಆಗದವರು ರಾಮನ ಹೆಸರು ಹೇಳೋಕೆ ಆಗತ್ತಾ? ಎಂದು ಪ್ರಶ್ನಿಸಿದರು.
undefined
ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಒನ್-ಮ್ಯಾನ್ ಶೋ; ನನಗೆ ಆಹ್ವಾನ ನೀಡಿದ್ರೂ ಹೋಗೊಲ್ಲ: ಸತೀಶ್ ಜಾರಕಿಹೊಳಿ
ರಾಮನ ಪೂಜೆಗೆ ಮೊದಲು ಆದ್ಯತೆ ನೀಡಿದ್ದು ಕಾಂಗ್ರೆಸ್!
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದ್ದಾರೆ. ಆದರೆ ಪೂಜೆ ಆಗ್ಬೇಕಾಗಿರೋದು ಒಂದು ವಿಗ್ರಹಕ್ಕಲ್ಲ.ರಾಮ ಸೀತೆ ಲಕ್ಮಣ ಆಂಜನೇಯ ಅವರ ಆದರ್ಶಗಳಿಗೆ ಪೂಜೆ ಆಗಬೇಕು. ರಾಮನ ಪೂಜೆಗೆ ಮೊದಲ ಆದ್ಯತೆ ನೀಡಿರೋದು ಕಾಂಗ್ರೆಸ್ ನವರು. ರಾಜೀವ್ ಗಾಂಧಿಯವರ ಕಾಲದಲ್ಲಿ ರಾಮನ ಪೂಜೆಗೆ ಮೊದಲು ಅವಕಾಶ ನೀಡಲಾಗಿತ್ತು. ಪೂಜೆ ಮಾಡಬೇಕಾಗಿರೋದು ರಾಮನ ಆದರ್ಶ, ಸಿದ್ದಾಂತ, ಪರಂಪರೆ, ವಿಚಾರಗಳನ್ನು ಮಾತ್ರ. ಅಯೋಧ್ಯಾಕಾಂಡದಲ್ಲಿ ರಾಜನೀತಿ, ನ್ಯಾಯನೀತಿ, ಅರ್ಥನೀತಿ ಪ್ರಕಾರ ರೈತರ ಮೇಲೆ ತೆರಿಗೆ ಹಾಕಬಾರದು ಎಂದಿದೆ. ಆದರೆ ಈಗ ಕೇಂದ್ರ ಸರ್ಕಾರ ಮಜ್ಜಿಗೆ,ಹಾಲು, ರಬ್ಬರ್, ಪೆನ್ಸಿಲ್ ಮೇಲೆ ತೆರಿಗೆ ಹಾಕ್ತಿದೆ. ನಿಮಗೆ ನಾಚಿಕೆ ಅಗೋದಿಲ್ವಾ ಮಿಸ್ಟರ್ ಮೋದಿ ಎಂದ ಉಗ್ರಪ್ಪ.
ಭಾರತವನ್ನು ಪಾಕಿಸ್ತಾನ ಮಾಡಲು ಸಿದ್ಧತೆ ನಡೆಸಲಾಗುತ್ತಿದೆಯೇ? ಯತೀಂದ್ರ ಹೇಳಿಕೆಗೆ ಪೇಜಾವರಶ್ರೀ ತಿರುಗೇಟು!