ಕಾಂಗ್ರೆಸ್ ಮುಕ್ತ ಭಾರತ ಮಾಡ್ತೇವೆ ಅಂದಿದ್ರು; ಆದರೀಗ  ಬಿಜೆಪಿಯೇ ದಕ್ಷಿಣ ಭಾರತ ಮುಕ್ತವಾಗಿದೆ: ಸಚಿವ ಚಲುವರಾಯಸ್ವಾಮಿ

By Ravi Janekal  |  First Published Dec 3, 2023, 1:26 PM IST

ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅಂದಿದ್ರು ಮೋದಿ. ಆದರೀಗ ದಕ್ಷಿಣ ಭಾರತವೇ ಬಿಜೆಪಿ ಮುಕ್ತವಾಗಿದೆ ಎಂದು ಬಿಜೆಪಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.


ಮಂಡ್ಯ (ಡಿ.3): ಕಾಂಗ್ರೆಸ್ ಮುಕ್ತ ಭಾರತ ಮಾಡ್ತೀವಿ ಅಂದಿದ್ರು ಮೋದಿ. ಆದರೀಗ ದಕ್ಷಿಣ ಭಾರತವೇ ಬಿಜೆಪಿ ಮುಕ್ತವಾಗಿದೆ ಎಂದು ಬಿಜೆಪಿ ವಿರುದ್ಧ ಸಚಿವ ಚಲುವರಾಯಸ್ವಾಮಿ ವಾಗ್ದಾಳಿ ನಡೆಸಿದರು.

ಇಂದು ಪಂಚರಾಜ್ಯ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಸಚಿವರು, ಕಳೆದ ಹತ್ತು ವರ್ಷದಿಂದ ಕೇಂದ್ರವನ್ನು ಮೋದಿ‌ ನಾಯಕತ್ವದ ಬಿಜೆಪಿ ಆಳ್ವಿಕೆ ಮಾಡ್ತಾ ಇದೆ. ಇಂಡಿಯಾಕ್ಕೆ ಸ್ವಾತಂತ್ರ್ಯ ತಂದುಕೊಡಲು ಮೂಲತಃ ಹೋರಾಟ ಮಾಡಿದ್ದು ಕಾಂಗ್ರೆಸ್. ಕಾಂಗ್ರೆಸ್ ಅಂದ್ರೆ ಇಂಡಿಯಾ, ಇಂಡಿಯಾ ಅಂದ್ರೇ ಕಾಂಗ್ರೆಸ್. ಇಂಥ ಹೋರಾಟಗಾರರಿರುವ ಕಾಂಗ್ರೆಸ್ ಪಕ್ಷದ ಬಗ್ಗೆ ಪ್ರಧಾನಿ ಲಘುವಾಗಿ ಮಾತನಾಡಿದ್ದರು. ಕಾಂಗ್ರೆಸ್ ವಿರುದ್ಧ ಲಘುವಾಗಿ ಮಾತಾಡಿದ್ದನ್ನು ದಕ್ಷಿಣ ಭಾರತದ ಜನರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹೀಗಾಗಿ ಕಾಂಗ್ರೆಸ್ ಮುಕ್ತ ಮಾಡ್ತೇವೆ ಅಂದಿದ್ದ ಬಿಜೆಪಿಯನ್ನೇ ದಕ್ಷಿಣ ಭಾರತದಿಂದ ಕಿತ್ತೊಗೆದಿದ್ದಾರೆ ಎಂದರು.

Latest Videos

undefined

ರಾಜಸ್ತಾನ ಗೆದ್ರೆ ಸಂತೋಷ ಅಂದುಕೊಂಡಿದ್ವಿ; ಆದರೆ ಮೋದಿಗಾಗಿ ಮತ್ತೆರಡು ರಾಜ್ಯ ಗಿಫ್ಟ್ ನೀಡಿದ್ದಾರೆ: ಈಶ್ವರಪ್ಪ

15 ದಿನಗಳ ಕಾಲ ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ದೊಡ್ಡ ವ್ಯತ್ಯಾಸ ಇತ್ತು. ಕೆಲ‌ ಕ್ಷೇತ್ರದಲ್ಲಿ  ಕಾಂಗ್ರೆಸ್ ಕಾರ್ಯಕರ್ತರೇ ಇರಲಿಲ್ಲ. ಅಂತಲ್ಲೂ ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆದ್ದಿದೆ. ಮುಂದೆ ದಕ್ಷಿಣದಿಂದ ಉತ್ತರಕ್ಕೆ ಕಾಂಗ್ರೆಸ್ ಗಾಳಿ ಬೀಸಲಿದೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಭವಿಷ್ಯ ಇದೆ ಎಂದು ತೆಲಂಗಾಣ ಫಲಿತಾಂಶದ ಮೂಲಕ ಗೊತ್ತಾಗಿದೆ. ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಕ್ಕೆ ತೆಲಂಗಾಣದ ಮತದಾರರಿಗೆ ಧನ್ಯವಾದ ತಿಳಿಸಿದರು.

ಲಂಗಾಣದಲ್ಲಿ ನಮ್ಮ ಗ್ಯಾರಂಟಿ ಫಲ ನೀಡಿದೆ: ಸಚಿವ ಪ್ರಿಯಾಂಕ್ ಖರ್ಗೆ

ನಾಲ್ಕು ರಾಜ್ಯಗಳ ಪೈಕಿ ಎರಡು ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ ಎಂದು ಸಮೀಕ್ಷೆ ಹೇಳಿತ್ತು. ರಾಜಸ್ತಾನದಲ್ಲಿ ನಮ್ಮ ಸರ್ಕಾರವೇ ಇತ್ತು. ಅಲ್ಲಿ ಸ್ವಲ್ಪ ವ್ಯತ್ಯಾಸ ಆಗಿದೆ. ತೆಲಂಗಾಣ ಗೆದ್ದಿರೋದು ನಾಲ್ಕು ರಾಜ್ಯ ಗೆದ್ದಿರುವಷ್ಟು ಸಂತೋಷ ಆಗಿದೆ ಎಂದರು.

click me!