ಏಷ್ಯಾನೆಟ್​ ಸುವರ್ಣ ನ್ಯೂಸ್​ನಲ್ಲಿ ಅಸೆಂಬ್ಲಿ ಎಲೆಕ್ಷನ್‌ ಮೆಗಾಫೈಟ್..!

Published : Jan 15, 2023, 12:12 PM IST
ಏಷ್ಯಾನೆಟ್​ ಸುವರ್ಣ ನ್ಯೂಸ್​ನಲ್ಲಿ ಅಸೆಂಬ್ಲಿ ಎಲೆಕ್ಷನ್‌ ಮೆಗಾಫೈಟ್..!

ಸಾರಾಂಶ

ಸುವರ್ಣ ನ್ಯೂಸ್‌ನಲ್ಲಿ ಕೋಲಾರದಿಂದ ಮೊದಲ ಮೆಗಾಫೈಟ್​ ಆರಂಭ..! ಸಿದ್ದು ಎಂಟ್ರಿ ಕೊಡ್ತಿದ್ದಂಗೆ 3 ಪಕ್ಷಗಳಲ್ಲಿ ಸಂಚಲನ..! ಗುರು, ಶಿಷ್ಯರ ನಡುವೆ ಮೆಗಾಫೈಟ್​ ಹೇಗಿದೆ ಗೊತ್ತಾ?

ಬೆಂಗಳೂರು (ಜ.15): ಏಷ್ಯಾನೆಟ್ ಸುವರ್ಣ ನ್ಯೂಸ್ ರಾಜ್ಯಾದ್ಯಂತ ಮನೆ ಮಾತಾಗಿದೆ. ನೇರ, ದಿಟ್ಟ, ನಿರಂತರ ಟ್ಯಾಗ್​ಲೈನ್​​ನೊಂದಿಗೆ ವಿಶ್ವಾಸರ್ಹತೆ  ಹೊಂದಿರೋ ಏಕೈಕ ಚಾನಲ್​​ ಆಗಿದೆ. ಅದರಲ್ಲಿಯೂ ಚುನಾವಣೆ ಬಂತೆಂದರೆ ನಾವೇ ಫಸ್ಟ್, ನಾವೇ ಬೆಸ್ಟ್. ಇದಕ್ಕೆ ಕಾರಣವೆಂದರೆ ಅದು ಸ್ಥಳೀಯ ಚುನಾವಣೆಯಿಂದ ಹಿಡಿದು ಲೋಕಸಭಾ ಸಂಸತ್ತಿನ ಚುನಾವಣೆವರೆಗೂ ನಿಖರ ಮಾಹಿತಿ, ಪಕ್ಕಾ ವಿವರಣೆ,  ಪರ್ಫೆಕ್ಟ್ ರಿಸಲ್ಟ್ ಕೊಡುವುದರಲ್ಲಿ ಸದಾ ನಾವೇ ಮುಂದು ಇದ್ದೇವೆ. 

ಇದೀಗ ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಏರತೊಡಗಿದೆ. ನಿಮ್ಮ ಏಷ್ಯಾನೆಟ್​ ಸುವರ್ಣ ನ್ಯೂಸ್​ನ ಕರೆಂಟ್ ಅಫೇರ್ಸ್​ ಎಡಿಟರ್ ಆಗಿರೋ ಜಯಪ್ರಕಾಶ್​ ಶೆಟ್ಟಿ ಬಿಗ್​-3 ಮೂಲಕ ಮನೆ ಮಾತಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಡಿಫರೆಂಟ್ ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದ್ದಾರೆ. ದೊಡ್ಡವರ ಅಖಾಡ, ಮಹಾ ಲೈವ್​​, ಡೇ ವಿಥ್ ಲೀಡರ್, ಒನ್​ ಟು ಒನ್​ ಸಂದರ್ಶನ, ಯಾರಿಗಿದೆ ಗೆಲ್ಲೋ ಮೀಟರ್, ಮೆಗಾಫೈಟ್​ನಂಥಹ ವಿಭಿನ್ನ​ ಕಾರ್ಯಕ್ರಮಗಳ ನೀಡಲಾಗುತ್ತಿದೆ. ಇದಕ್ಕಾಗಿ ರಾಜ್ಯದ ಗಲ್ಲಿ, ಗಲ್ಲಿಯನ್ನು ಸುತ್ತಿ ಸ್ಥಳೀಯ ನಾಯಕರು ಸೇರಿದಂತೆ ಜನಾಭಿಪ್ರಾಯದ ಪಕ್ಕಾ ಮಾಹಿತಿಯನ್ನ ಹೆಕ್ಕಿ ತರುವುದರಲ್ಲಿ ಇವರೇ ಪಂಟರ್... 2023ರ ಪ್ರತಿ ವಿಧಾನಸಭಾ ಕ್ಷೇತ್ರಗಳಿಗೂ ಮೆಗಾಫೈಟ್ ಮೂಲಕ ಎಂಟ್ರಿ ಕೊಡಲು ಏಷ್ಯಾನೆಟ್​ ಸುವರ್ಣ ನ್ಯೂಸ್ ಸಜ್ಜಾಗಿದೆ.. ಆ ಮೂಲಕ ರಾಜ್ಯದ ರಾಜಕೀಯ ನಾಯಕರಲ್ಲಿ ಸಂಚನಲ ಮೂಡಿಸಿದ್ದು ಕ್ಷಣ.. ಕ್ಷಣಕ್ಕೂ ಜನರಲ್ಲಿ ಕುತೂಹಲ ಮೂಡಿಸುತ್ತಿದೆ.

Chitradurga: ಕಾಂಗ್ರೆಸ್ ಟಿಕೆಟ್ ಗಾಗಿ ಜಿಲ್ಲೆಯ 6 ಕ್ಷೇತ್ರದ ಆಕಾಂಕ್ಷಿಗಳ ಮೆಗಾ ಫೈಟ್

ಕೋಲಾರದಿಂದ ಮೊದಲ ಮೆಗಾಫೈಟ್​ ಆರಂಭ..!
ಬೆಂಗಳೂರಿನಿಂದ ಕೇವಲ 70 ಕಿ.ಮೀಟರ್ ದೂರದಲ್ಲಿರುವ ಕೋಲಾರ ಚಿನ್ನದ ನಾಡು ಅಂತಲೇ  ಫೇಮಸ್ ಆಗಿದೆ. ಈ ಜಿಲ್ಲೆಯಲ್ಲಿ ಚಿನ್ನಕ್ಕೂ ಮಿಗಿಲಾಗಿ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಅದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಈ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಘೋಷಣೆ ಮಾಡಿರುವುದು. ಆದ್ದರಿಂದ ಕೋಲಾರ ಇದೀಗ ರಾಜ್ಯದಲ್ಲಿಯೇ ಹೈವೋಲ್ಟೇಜ್​ ಕ್ಷೇತ್ರವಾಗಿ ಪರಿಣಮಿಸಿದೆ. ಈಗಾಗಲೇ ಕೋಲಾರ ವಿಧಾನಸಭಾ ಕ್ಷೇತ್ರವನ್ನು ಸಿದ್ದರಾಮಯ್ಯನವರು ಫೈನಲ್ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಬಾದಾಮಿ ಕ್ಷೇತ್ರದಿಂದ ಗೆದ್ದಿದ್ದ ಸಿದ್ದರಾಮಯ್ಯ ಈ ಬಾರಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ದಿಸುವ ಇಂಗಿತ ವ್ಯಕ್ತಪಡಿಸಿದ್ದು ಹೈಕಮಾಂಡ್ ನಿರ್ಧಾರಕ್ಕೆ ಕಾಯುತ್ತಿದ್ದಾರೆ.

ಬಿಜೆಪಿಯಿಂದ ವರ್ತೂರು ಪ್ರಕಾಶ್ ಸಂಚಾರ: 
ಇನ್ನು ಇದರ ನಡುವೆ ಬಿಜೆಪಿ ಪಕ್ಷದಿಂದ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಈಗಾಗಲೇ ಬಿಜೆಪಿಯಿಂದ ಸಂಭಾವ್ಯ ಅಭ್ಯರ್ಥಿ ಎಂದು ವರ್ತೂರು ಪ್ರಕಾಶ್ ಗುರುತಿಸಿಕೊಂಡಿದ್ದು, ಕೋಲಾರ ವಿಧಾನಸಭಾ ಕ್ಷೇತ್ರದ್ಯಾಂತ ಸಂಚಾರ ಮಾಡಿ ಮತದಾರರನ್ನ ಸೆಳೆಯುದ್ದಾರೆ. 2018ರಲ್ಲಿ ಜೆಡಿಎಸ್​​ನಿಂದ ಶಾಸಕರಾಗಿ ಆಯ್ಕೆ ಆಗಿದ್ದ ಹಾಲಿ ಶಾಸಕ ಶ್ರೀನಿವಾಸಗೌಡ ಅವರು ಜೆಡಿಎಸ್‌ನಿಂದ ದೂರ ಉಳಿದು ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಹೀಗಾಗಿ, ಈಗಾಗಲೇ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಶ್ರೀನಾಥ್ ಕಣಕ್ಕೆ ಇಳಿ ದಿದ್ದಾರೆ. ಈ ಮೂಲಕ ಕೋಲಾರದಲ್ಲಿ ಚುನಾವಣ ರಣಕಣ ರಂಗೇರಿದೆ.

ವೆಬ್‌ಸೈಟ್‌, ಯುಟ್ಯೂಬ್‌ನಲ್ಲೂ ಲಭ್ಯ: ಮೆಗಾಫೈಕ ಟ್‌ ಸೇರಿದಂತೆ ಎಲ್ಲ ಸುದ್ದಿಗಳು ನಮ್ಮ ಕನ್ನಡೆ ಏಷ್ಯಾನೆಟ್‌ ನ್ಯೂಸ್‌ ವೆಬ್‌ಸೈಟ್‌ https://kannada.asianetnews.com ಹಾಗೂ ಯುಟ್ಯೂಬ್‌ ಲಿಂಕ್ ಮೂಲಕವೂ https://www.youtube.com/channel/UCjElJyiXmQXnWmceQ1JyKrA ವೀಕ್ಷಣೆ ಮಾಡಬಹುದು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಾಮಾಜಿಕ ಭದ್ರತಾ ಪಿಂಚಣಿಯಲ್ಲಿ 24.55 ಲಕ್ಷ ಅನುಮಾನಾಸ್ಪದ ಫಲಾನುಭವಿಗಳು: ಕೃಷ್ಣ ಬೈರೇಗೌಡ
ಹಂತ ಹಂತವಾಗಿ 1.88 ಲಕ್ಷ ಸರ್ಕಾರಿ ಹುದ್ದೆ ಭರ್ತಿ : ಸಿದ್ದರಾಮಯ್ಯ